Bottle Garden: ಬಿಸಾಡೋಕೆ ಅಂತ ಇಟ್ಟಿರೋ ಪ್ಲಾಸ್ಟಿಕ್ ಬಾಟಲ್ ಬಳಸಿ ಈ ರೀತಿ ಸುಂದರವಾದ ಗಾರ್ಡ್ನ್ ಮಾಡಿ
Bottle Garden: ಜಾಗ ಚಿಕ್ಕದಿರಲಿ ದೊಡ್ಡದಿರಲಿ ನೀವು ಈ ರೀತಿ ಪ್ಲಾಸ್ಟಿಕ್ ಬಾಟಲಿಗಳಿಂದ ಈ ರೀತಿ ಹೊಸ ಉದ್ಯಾನವನ್ನೇ ತಯಾರಿಸಬಹುದು. ನಿಮ್ಮ ಉದ್ಯಾನದಲ್ಲಿ ಅಲಂಕಾರಿಕ ಸಸ್ಯಗಳು ಮತ್ತು ಆರ್ಕಿಡ್‌ಗಳಿಗೆ ಈ ಪುಟ್ಟ ಬಾಟಲ್ಗಳು ಸಹಾಯವಾಗುತ್ತದೆ.
ನಿಮ್ಮ ಮನೆಯ ಅಂಗಳದಲ್ಲಿ ಖಾಲಿ ಜಾಗ ಇದೆ ಸುಂದರವಾದ ಒಂದು ಗಾರ್ಡನ್ ಮಾಡೋಣ ಅಂತ ನೀವು ಅಂದುಕೊಂಡಿದ್ದರೆ ಇಲ್ಲಿದೆ ನೋಡಿ ಉಪಾಯ. ಅಷ್ಟೇ ಅಲ್ಲ ನಿಮಗೆ ಗಾರ್ಡನ್ ಮಾಡೋಕೆ ಜಾಗಾನೇ ಇಲ್ಲಾ ಅಂದ್ರು ಇದು ಉಪಯೋಗಕ್ಕೆ ಬರುತ್ತೆ.
2/ 9
ಪ್ಲಾಸ್ಟಿಕ್ ಬಾಟಲಿಗಳಂತು ಈಗ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತೆ. ಬೇಡ ಅಂತ ನೀವು ಬಿಟ್ಟಿದ್ದರೂ ಈ ಬಾಟಲಿಗಳು ಪ್ರಯೋಜನಕ್ಕೆ ಬರುವಂತೆ ಮಾಡಲು ಇಲ್ಲಿ ಕೆಲವು ಉಪಾಯಗಳಿವೆ ನೋಡಿ.
3/ 9
ಮೊದಲು ಬಾಟಲ್ಗಳನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡು, ನಂತರ ಅದಕ್ಕೆ ನಿಮ್ಮಿಷ್ಟದ ಬಣ್ಣವನ್ನು ಹಚ್ಚಿ. ನಂತರ ಅದರಲ್ಲಿ ಮಣ್ಣನ್ನು ತುಂಬಿ, ನೀರು ಹಾಕಿ ಹಸಿ ಮಾಡಿ.
4/ 9
ನೀವು ಪ್ಲಾಸ್ಟಿಕ್ ಅಥವಾ ಗಾಜಿನ ಬಾಟಲಿ ಯಾವುದೇ ಇರಲಿ ಅದರಿಂದ ನೀವು ಸುಂದರವಾದ ಹೋಮ್ ಗಾರ್ಡನ್ ಮಾಡಬಹುದು. ನಾವು ಇಲ್ಲಿ ನೀಡಿರುವ ಚಿತ್ರಗಳಂತೆ ನೀವು ಅಲಂಕರಿಸಬಹುದು.
5/ 9
ಖಾಲಿ ಸೋಡಾ ಬಾಟಲಿಯನ್ನು ಅರ್ಧದಷ್ಟು ಕತ್ತರಿಸಿ ಅದರಲ್ಲಿ ಸುಂದರವಾದ ಹಸಿರು ಗಿಡಗಳನ್ನು ನೆಡಬೇಕು. ಒಂದು ಇಡೀ ಗೋಡೆ ಪೂರ್ತಿ ಇದೇ ರೀತಿ ಅಲಂಕಾರ ಮಾಡಬಹುದು.
6/ 9
ಬಾಟಲಿಗಳನ್ನು ನೇತು ಹಾಕಿ ಅದರಲ್ಲಿ ಬಳ್ಳಿಗಳನ್ನು ನೆಟ್ಟರೆ ಅದು ಕೂಡಾ ತುಂಬಾ ಸುಂದರವಾಗಿರುತ್ತದೆ. ಇಲ್ಲವೇ ಒಂದಿಷ್ಟು ಬಾಟಲಿಗಳನ್ನು ಸೇರಿಸಿ ಈ ರೀತಿ ಅಂದಗಾಣಿಸಿ.
7/ 9
ಬಾಟಲ್ ಮೇಲೆ ನೀವು ಬಣ್ಣ ಹಚ್ಚಿ ಬಟನ್ಗಳಿಂದ ಕೂಡಾ ಅಲಂಕರಿಸಬಹುದು. ಇದು ಕೂಡಾ ತುಂಬಾ ಸುಂದರವಾಗಿ ಕಾಣುತ್ತದೆ.
8/ 9
ಉದ್ಯಾನವನ್ನು ಅಲಂಕರಿಸಲು ಬಾಟಲಿಗಳನ್ನು ಬಳಸಲು ಒಂದು ಸೃಜನಶೀಲ ಮಾರ್ಗ. ಇದರಿಂದ ನೀವು ಪ್ಲಾಸ್ಟಿಕ್ ವಸ್ತುಗಳ ಮರುಬಳಕೆ ಮಾಡಿದಂತಾಗುತ್ತದೆ.
9/ 9
ನಿಮ್ಮ ಉದ್ಯಾನದಲ್ಲಿ ಅಲಂಕಾರಿಕ ಸಸ್ಯಗಳು ಮತ್ತು ಆರ್ಕಿಡ್‌ಗಳಿಗೆ ಈ ಪುಟ್ಟ ಬಾಟಲ್ಗಳು ಸಹಾಯವಾಗುತ್ತದೆ.
First published:
19
Bottle Garden: ಬಿಸಾಡೋಕೆ ಅಂತ ಇಟ್ಟಿರೋ ಪ್ಲಾಸ್ಟಿಕ್ ಬಾಟಲ್ ಬಳಸಿ ಈ ರೀತಿ ಸುಂದರವಾದ ಗಾರ್ಡ್ನ್ ಮಾಡಿ
ನಿಮ್ಮ ಮನೆಯ ಅಂಗಳದಲ್ಲಿ ಖಾಲಿ ಜಾಗ ಇದೆ ಸುಂದರವಾದ ಒಂದು ಗಾರ್ಡನ್ ಮಾಡೋಣ ಅಂತ ನೀವು ಅಂದುಕೊಂಡಿದ್ದರೆ ಇಲ್ಲಿದೆ ನೋಡಿ ಉಪಾಯ. ಅಷ್ಟೇ ಅಲ್ಲ ನಿಮಗೆ ಗಾರ್ಡನ್ ಮಾಡೋಕೆ ಜಾಗಾನೇ ಇಲ್ಲಾ ಅಂದ್ರು ಇದು ಉಪಯೋಗಕ್ಕೆ ಬರುತ್ತೆ.