ಇತ್ತೀಚೆಗೆ ಜನರು ಕೆಟ್ಟ ಜೀವನ ಶೈಲಿಯನ್ನು ಅನುಸರಿಸುವ ಮೂಲಕ ಹೆಚ್ಚಿನ ತೂಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕೊಳ್ಳಲು ಬಯಸುವವರು ಮೊದಲು ಆಹಾರ ಕ್ರಮವನ್ನು ಪ್ರಾರಂಭಿಸುತ್ತಾರೆ. ನಂತರ ವ್ಯಾಯಾಮ ಮಾಡಲು ಆರಂಭಿಸುತ್ತಾರೆ. ಹೀಗಿದ್ದರೂ ತೂಕ ಇಳಿಸಿಕೊಳ್ಳಲು ಆಗದೇ ಇರುವವರಿಗೆ ನಾವು ಕೆಲವು ಟಿಪ್ಸ್ಗಳು ನಿಮಗೆ ತಿಳಿಸುತ್ತೇವೆ. ಇದನ್ನುಫಾಲೋ ಮಾಡಿ ನೀವು ಸುಲಭವಾಗಿ ತೂಕವನ್ನು ಇಳಿಸಿಕೊಳ್ಳಬಹುದು. ಕೇವಲ 10 ದಿನದಲ್ಲಿಯೇ ಮ್ಯಾಜಿಕ್ ನೋಡುತ್ತೀರಾ.
ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಬೇಗ ತಿನ್ನಿ: ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಆದ್ದರಿಂದ ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸಲು ತಿಂಡಿಗಳನ್ನು ಮಧ್ಯದಲ್ಲಿ ತೆಗೆದುಕೊಳ್ಳಬೇಕು. ಏಕೆಂದರೆ ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವೆ ಹೆಚ್ಚು ಸಮಯವಿರುತ್ತದೆ. ಈ ಮಧ್ಯೆ ಜನರು ಹೆಚ್ಚು ಹಸಿವನ್ನು ಅನುಭವಿಸುತ್ತಾರೆ. ಬಳಿಕ ರಾತ್ರಿ ವೇಳೆ ಹೆಚ್ಚು ಆಹಾರವನ್ನು ಸೇವಿಸುತ್ತಾರೆ. ಇದರ ಪರಿಣಾಮ ತೂಕ ಹೆಚ್ಚಾಗುತ್ತದೆ. ಹಾಗಾಗಿ ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಬೇಗ ಸೇವಿಸಿ.
ಊಟಕ್ಕೂ ಮುನ್ನ ಬಿಸಿ ನೀರು ಕುಡಿಯಿರಿ: ಆಹಾರವನ್ನು ತಿನ್ನುವ ಮುನ್ನ ಬಿಸಿ ನೀರು ಕುಡಿಯುಬವುದರಿಂದ ಹಸಿವು ಕಡಿಮೆಯಾಗುತ್ತದೆ ಎಂದು ತಜ್ಞರು ಭಾವಿಸುತ್ತಾರೆ. ಇದಕ್ಕಾಗಿ, ನೀವು ನಿಮ್ಮ ಆಹಾರದಲ್ಲಿ ಸೂಪ್ ಅಥವಾ ಬಿಸಿ ನಿಂಬೆ ಪಾನಕವನ್ನು ತೆಗೆದುಕೊಳ್ಳಬಹುದು. ಇದರೊಂದಿಗೆ, ಆಹಾರವನ್ನು ತಿನ್ನುವಾಗ, ಇತರರ ತಟ್ಟೆಯಿಂದ ಏನನ್ನೂ ತಿನ್ನಬೇಡಿ ಎಂಬುದನ್ನು ಸಹ ನೆನಪಿನಲ್ಲಿಡಿ.