Psycho Love: ನಿಮ್ಮ ಸಂಗಾತಿ ಈ ರೀತಿ ವರ್ತನೆ ಮಾಡ್ತಿದ್ರೆ ಹುಷಾರ್, ಅವ್ರು ಪಾಗಲ್ ಪ್ರೇಮಿ ಇರಬಹುದು!

Mental Health: ಪ್ರೀತಿಯ ಹೆಸರಲ್ಲಿ ಕಿರುಕುಳ, ಹುಡುಗಿಯ ಮೇಲೆ ಆ್ಯಸಿಡ್ ಎರಚುವುದು, ಹುಡುಗನನ್ನು ಬಲೆಗೆ ಬೀಳಿಸಿ ಅವರಿಂದ ಹಣ ಪಡೆಯುವುದು, ಹುಡುಗ ಕಷ್ಟ ಪಡುತ್ತಿರುವುದನ್ನು ನೋಡಿ ಆನಂದಿಸುವುದು, ಪ್ರೀತಿಯ ಹೆಸರಲ್ಲಿ ಕೊಲೆ ಮಾಡುವುದು ಸೈಕೋ ಲವ್ನ ಲಕ್ಷಣ ಎನ್ನುತ್ತಾರೆ ತಜ್ಞರು

First published:

  • 111

    Psycho Love: ನಿಮ್ಮ ಸಂಗಾತಿ ಈ ರೀತಿ ವರ್ತನೆ ಮಾಡ್ತಿದ್ರೆ ಹುಷಾರ್, ಅವ್ರು ಪಾಗಲ್ ಪ್ರೇಮಿ ಇರಬಹುದು!

    ಹೇ ಅವನೊಬ್ಬ ಸೈಕೋಪಾತ್ ಅಂತೆ.. ಅವಳ ನಡುವಳಿಕೆ ಸೈಕೋಪಾತ್ನಂತೆ ಇದೆ. ಇಂತಹ ಮಾತುಗಳನ್ನು ಸಾಮಾನ್ಯ ಜನರು ಆಡುವುದನ್ನು ಕೇಳಿರುತ್ತೇವೆ. ಕೆಲವರು ತಮ್ಮನ್ನು ಇಷ್ಟಪಡದವರಿಗೆ ಶಾಪ ಹಾಕುತ್ತಾರೆ. ಆದರೆ ತಜ್ಞರ ಪ್ರಕಾರ, ಕೆಲವು ಲಕ್ಷಣಗಳನ್ನು ಹೊಂದಿರುವವರನ್ನು ಮಾತ್ರ ಸೈಕೋ ಎಂದು ಗುರುತಿಸಬಹುದು ಮತ್ತು ಅವರಿಂದ ಜಾಗರೂಕರಾಗಿರಿ. (Image credit unsplash)

    MORE
    GALLERIES

  • 211

    Psycho Love: ನಿಮ್ಮ ಸಂಗಾತಿ ಈ ರೀತಿ ವರ್ತನೆ ಮಾಡ್ತಿದ್ರೆ ಹುಷಾರ್, ಅವ್ರು ಪಾಗಲ್ ಪ್ರೇಮಿ ಇರಬಹುದು!

    ಪ್ರೀತಿಯ ಹೆಸರಲ್ಲಿ ಕಿರುಕುಳ, ಹುಡುಗಿಯ ಮೇಲೆ ಆ್ಯಸಿಡ್ ಎರಚುವುದು, ಹುಡುಗನನ್ನು ಬಲೆಗೆ ಬೀಳಿಸಿ ಅವರಿಂದ ಹಣ ಪಡೆಯುವುದು, ಹುಡುಗ ಕಷ್ಟ ಪಡುತ್ತಿರುವುದನ್ನು ನೋಡಿ ಆನಂದಿಸುವುದು, ಪ್ರೀತಿಯ ಹೆಸರಲ್ಲಿ ಕೊಲೆ ಮಾಡುವುದು ಸೈಕೋ ಲವ್ನ ಲಕ್ಷಣ ಎನ್ನುತ್ತಾರೆ ತಜ್ಞರು. (Image credit unsplash)

    MORE
    GALLERIES

  • 311

    Psycho Love: ನಿಮ್ಮ ಸಂಗಾತಿ ಈ ರೀತಿ ವರ್ತನೆ ಮಾಡ್ತಿದ್ರೆ ಹುಷಾರ್, ಅವ್ರು ಪಾಗಲ್ ಪ್ರೇಮಿ ಇರಬಹುದು!

    ಇತ್ತೀಚೆಗೆ ನಲ್ಗೊಂಡ ಎಂಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ನವೀನ್ ಹತ್ಯೆ ಪರ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ನವೀನ್ ಅನ್ನು ಆತನ ಸ್ನೇಹಿತ ಹರಿ ಬರ್ಬರವಾಗಿ ಹತ್ಯೆ ಮಾಡಿದ್ದ. ನವೀನ್ ಮತ್ತು ಹರಿ ಇಬ್ಬರೂ ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದರು. ನವೀನ್ ಪ್ರೀತಿಗೆ ಅಡ್ಡ ಆಗಿದ್ದರಿಂದ ಕೊಲೆ ಮಾಡಲು ಪ್ಲ್ಯಾನ್ ಮಾಡಿದ ಹರಿ ಓಆರ್ ಆರ್ ಬಳಿ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾನೆ. ಇದು ಸೈಕೋ ಲವ್ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಹಾಗಾದ್ರೆ ಸೈಕೋ ಲವ್ ಎಂದರೇನು? ಸೈಕೋ ಲವ್ ಅನ್ನು ಗುರುತಿಸುವುದು ಹೇಗೆ? (Image credit unsplash)

    MORE
    GALLERIES

  • 411

    Psycho Love: ನಿಮ್ಮ ಸಂಗಾತಿ ಈ ರೀತಿ ವರ್ತನೆ ಮಾಡ್ತಿದ್ರೆ ಹುಷಾರ್, ಅವ್ರು ಪಾಗಲ್ ಪ್ರೇಮಿ ಇರಬಹುದು!

    ದುಃಖದ ಕಥೆಗಳು: ಪ್ರೀತಿಪಾತ್ರರೊಂದಿಗೆ ಯಾವುದೇ ಇಲ್ಲದ ಭಾವನೆಗಳನ್ನು ಹೊಂದಿರುವಂತೆ ನಟಿಸುವುದು. ಕರುಣೆ ಅಥವಾ ಸಹಾನುಭೂತಿಯನ್ನು ಉಂಟುಮಾಡುವ ಕಥೆಗಳನ್ನು ಹೆಣೆಯುವುದು. ನಿಜವಾಗಿ ಹೇಳಬೇಕಂದರೆ ಯಾರಿಗೇ ಆದರೂ ರಾತ್ರೋರಾತ್ರಿ ನಂಬಿಕೆ ಹುಟ್ಟುವುದಿಲ್ಲ. ಪರಿಚಯವಾದ ನಂತರ ಕೂಡ ಸಾಕಷ್ಟು ಸಮಯ ಕಳೆದರೂ ಕೆಲ ಅನುಮಾನಗಳು ಇದ್ದೆ ಇರುತ್ತದೆ. ಹೀಗಿದ್ದರೂ ಇತ್ತೀಚಿನ ದಿನಗಳಲ್ಲಿ ಹತ್ತಿರವಾಗಲು ಅನುಕಂಪವನ್ನು ಸೃಷ್ಟಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. (Image credit unsplash)

    MORE
    GALLERIES

  • 511

    Psycho Love: ನಿಮ್ಮ ಸಂಗಾತಿ ಈ ರೀತಿ ವರ್ತನೆ ಮಾಡ್ತಿದ್ರೆ ಹುಷಾರ್, ಅವ್ರು ಪಾಗಲ್ ಪ್ರೇಮಿ ಇರಬಹುದು!

    ಹೊಗಳಿಕೆ: ಹೊಗಳಿಕೆಗೂ ಮತ್ತು ತೆಗಳಿಕೆಗೂ ತುಂಬಾ ವ್ಯತ್ಯಾಸವಿದೆ. ಆದರೆ ಪ್ರತಿ ಚಿಕ್ಕ ವಿಚಾರವನ್ನು ಹೊಗಳುತ್ತಿದ್ದರೆ ಜಾಗರೂಕರಾಗಿರಿ. (Image credit unsplash)

    MORE
    GALLERIES

  • 611

    Psycho Love: ನಿಮ್ಮ ಸಂಗಾತಿ ಈ ರೀತಿ ವರ್ತನೆ ಮಾಡ್ತಿದ್ರೆ ಹುಷಾರ್, ಅವ್ರು ಪಾಗಲ್ ಪ್ರೇಮಿ ಇರಬಹುದು!

    ಅಲ್ಪಾವಧಿಯ ಸಂಬಂಧ: ಪ್ರೀತಿಯಲ್ಲಿ ಬೀಳುವುದು. ಶೀಘ್ರವೇ ಬ್ರೇಕ್ ಅಪ್ ಮಾಡಿಕೊಳ್ಳುವುದು. ಮತ್ತೆ ಪ್ರೀತಿಯಲ್ಲಿ ಬೀಳುವುದು. ಮತ್ತೆ ಬ್ರೇಕ್ ಅಪ್ ಜಮಾಡಿಕೊಳ್ಲುವುದನ್ನು ಅಲ್ಪಾವಧಿ ಸಂಬಂಧ ಎಂದು ಕರೆಯಲಾಗುತ್ತದೆ. ಅತೀವ ಸೈಕೋಟಿಕ್ ಇರುವವರು ಯಾರೊಂದಿಗೂ ಹೆಚ್ಚು ದಿನ ಇರೋದಿಲ್ಲ. ಸಣ್ಣಪುಟ್ಟ ವಿಷಯಕ್ಕೆ ಜಗಳ ಮಾಡಿಕೊಂಡು ದೂರವಾಗುತ್ತಾರೆ. ನಿಜವಾಗಿ ಹೇಳಬೇಕೆಂದರೆ ಯಾವುದೇ ಸಂಬಂಧದಲ್ಲಾದರೂ ಜಗಳ ಸಾಮಾನ್ಯ. ಆದರೆ ಜಗಳವಾದ ನಂತರ ಒಂದಾಗುವುದು ಸಹ ಸಾಮಾನ್ಯ. ಆದರೆ ಯಾರು ತಮ್ಮ ತಪ್ಪನ್ನು ಮತ್ತೆ ತಿದ್ದಿಕೊಳ್ಳಲು ಪ್ರಯತ್ನಿಸುವುದಿಲ್ಲವೋ ಅವರು ಬೇರೆಯವರೊಂದಿಗೆ ಮತ್ತೆ ಪ್ರೀತಿಯಲ್ಲಿ ಬೀಳುತ್ತಾರೆ. (Image credit unsplash)

    MORE
    GALLERIES

  • 711

    Psycho Love: ನಿಮ್ಮ ಸಂಗಾತಿ ಈ ರೀತಿ ವರ್ತನೆ ಮಾಡ್ತಿದ್ರೆ ಹುಷಾರ್, ಅವ್ರು ಪಾಗಲ್ ಪ್ರೇಮಿ ಇರಬಹುದು!

    ಭಾವರಹಿತ: ಮನೋರೋಗಿಗಳು ಭಾವನಾತ್ಮಕ ಸಂಪರ್ಕಗಳನ್ನು ರೂಪಿಸಲು ಸಾಧ್ಯವಾಗುವುದಿಲ್ಲ. ಅವರು ಭಾವನೆಗಳಿಗೆ ಬೆಲೆ ನೀಡುವುದಿಲ್ಲ. ಮನುಷ್ಯನ ಸಾವಿಗೂ ಕೂಡ ಪ್ರತಿಕ್ರಿಯಿಸುವುದಿಲ್ಲ. ಭಾವನೆಗಳನ್ನು ಸಾಮಾಜೀಕರಿಸುವಲ್ಲಿ ಮತ್ತು ನಂಬಿಕೆಯನ್ನು ಬೆಳೆಸುವಲ್ಲಿ ಪರಿಣತರು. ಅವರನ್ನು ಕೆಟ್ಟವರು ಎಂದು ಗುರುತಿಸುವುದು ತುಂಬಾ ಕಷ್ಟ. ಅವರು ನಟನೆಯಲ್ಲಿ ಪರಿಣತರಾಗಿರುತ್ತಾರೆ. (Image credit unsplash)

    MORE
    GALLERIES

  • 811

    Psycho Love: ನಿಮ್ಮ ಸಂಗಾತಿ ಈ ರೀತಿ ವರ್ತನೆ ಮಾಡ್ತಿದ್ರೆ ಹುಷಾರ್, ಅವ್ರು ಪಾಗಲ್ ಪ್ರೇಮಿ ಇರಬಹುದು!

    ಇತರರ ಮುಂದೆ ನಾಟಕ ಆಡುವುದು: ವಾಸ್ತವವಾಗಿ ಪ್ರೇಮಿಗಳು ಅಥವಾ ಜೀವನ ಸಂಗಾತಿಯ ನಡುವಿನ ವಿಷಯಗಳು ಮೂರನೇ ವ್ಯಕ್ತಿಗೆ ತಿಳಿಯಬೇಕಾದ ಅಗತ್ಯವಿಲ್ಲ. ಸಮಸ್ಯೆ ಬಗೆಹರಿಯದಿದ್ದರೆ ದೊಡ್ಡವರಿಗೆ ಹೇಳಬೇಕಾಗಿಲ್ಲ. ಈ ವಿಷಯಗಳನ್ನು ನಮ್ಮ ನಂಬಿಕಸ್ಥ ಗೆಳೆಯರೊಂದಿಗೆ ಹಂಚಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ಸೈಕೋ ಪ್ರೇಮಿಗಳು ಮಧ್ಯದಲ್ಲಿ ಮೂರನೇ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ತಮಾಷೆ ಮಾಡುತ್ತಾರೆ. ಅವರು ಇತರರೊಂದಿಗೆ ಚೀಪ್ ಆಗಿ ಮಾತನಾಡುತ್ತಾರೆ. ಮತ್ತೆ ಮತ್ತೆ ಬಂದು ಭೇಟಿಯಾಗುತ್ತಾರೆ. ಆದರೆ ತಪ್ಪು ಮಾಡಿದ ತಪ್ಪಿಗೆ ಅವರಲ್ಲಿ ಪಾಪಪ್ರಜ್ಞೆ ಕಾಡುವುದಿಲ್ಲ. (Image credit unsplash)

    MORE
    GALLERIES

  • 911

    Psycho Love: ನಿಮ್ಮ ಸಂಗಾತಿ ಈ ರೀತಿ ವರ್ತನೆ ಮಾಡ್ತಿದ್ರೆ ಹುಷಾರ್, ಅವ್ರು ಪಾಗಲ್ ಪ್ರೇಮಿ ಇರಬಹುದು!

    ವಿಪರೀತ ಸ್ವಾರ್ಥ: ಸ್ವಾರ್ಥಕ್ಕೂ ವಿಪರೀತ ಸ್ವಾರ್ಥಕ್ಕೂ ಬಹಳ ವ್ಯತ್ಯಾಸವಿದೆ. ಅವರು ತಮಗೆ ಬೇಕಾದುದನ್ನು ಪಡೆಯಲು ಹತಾಶರಾಗಿರುತ್ತಾರೆ. ಅವರು ಅತ್ಯಂತ ಸ್ವಾರ್ಥಿಗಳಾಗಿದ್ದು, ಕಾನೂನು, ಒಳ್ಳೆಯದು ಮತ್ತು ಕೆಟ್ಟದ್ದನ್ನು ಯೋಚಿಸುವುದಿಲ್ಲ. ನಿಮ್ಮ ಪ್ರೇಮಿ ಇದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದರೆ ಜಾಗರೂಕರಾಗಿರಿ. ಇಲ್ಲದಿದ್ದರೆ ಮರೆಯಲು ಪ್ರಯತ್ನಿಸಿ. (Image credit unsplash)

    MORE
    GALLERIES

  • 1011

    Psycho Love: ನಿಮ್ಮ ಸಂಗಾತಿ ಈ ರೀತಿ ವರ್ತನೆ ಮಾಡ್ತಿದ್ರೆ ಹುಷಾರ್, ಅವ್ರು ಪಾಗಲ್ ಪ್ರೇಮಿ ಇರಬಹುದು!

    ದುರಹಂಕಾರಿ: ಅಹಂಕಾರವು ಅವರನ್ನು ವೈಫೈನಂತೆ ಸುತ್ತುವರೆದಿರುತ್ತದೆ. ಅಹಂಕಾರದಿಂದ ಅವರು ಎಲ್ಲರಿಗಿಂತ ಉತ್ತಮರು ಎಂದು ಭಾವಿಸುತ್ತಾರೆ. ಅವರು ಎಲ್ಲರಲ್ಲೂ ಶ್ರೇಷ್ಠತೆಯನ್ನು ಹುಡುಕುತ್ತಾರೆ. ಅವರು ತಮ್ಮ ತಪ್ಪುಗಳನ್ನು ಗುರುತಿಸಲಾರರು. (Image credit unsplash)

    MORE
    GALLERIES

  • 1111

    Psycho Love: ನಿಮ್ಮ ಸಂಗಾತಿ ಈ ರೀತಿ ವರ್ತನೆ ಮಾಡ್ತಿದ್ರೆ ಹುಷಾರ್, ಅವ್ರು ಪಾಗಲ್ ಪ್ರೇಮಿ ಇರಬಹುದು!

    ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ: ಸೈಕೋ ಪ್ರೇಮಿಗಳು ತಮ್ಮ ತಪ್ಪುಗಳಿಗಾಗಿ ಇತರರನ್ನು ದೂಷಿಸುತ್ತಾರೆ. ಅವರು ಏನೇ ತಪ್ಪು ಮಾಡಿದರೂ, ನೋಂದುಕೊಳ್ಳುವುದಿಲ್ಲ. ಇದಲ್ಲದೇ ಅದೇ ನಡವಳಿಕೆ ಪುನರಾವರ್ತನೆಯಾಗುತ್ತದೆ. ನಮಗೆ ಯಾವುದಾದರೂ ತೊಂದರೆಯಾದರೆ ಅಲ್ಲಿಯವರೆಗೂ ನಮ್ಮೊಂದಿಗೆ ಇದ್ದು ಸೈಲೆಂಟಾಗಿ ಬದಿಗೆ ಹೋಗುತ್ತಾರೆ ಎನ್ನುತ್ತಾರೆ ತಜ್ಞರು. (Image credit unsplash) (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES