ಯುಟಿಐ ಕಾಯಿಲೆ ಉಂಟಾದಾಗ ದೇಹದಲ್ಲಿ ಹಲವು ಸಮಸ್ಯೆಗಳು ಗೋಚರಿಸುತ್ತವೆ. ಮೂತ್ರ ವಿಸರ್ಜನೆ ವೇಳೆ ನೋವುಂಟಾಗುವುದು, ಆಗಾಗ್ಗೆ ಮೂತ್ರ ವಿಸರ್ಜನೆ, ಮೂತ್ರದಲ್ಲಿ ರಕ್ತ, ಶ್ರೋಣಿ ಪ್ರದೇಶದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇನ್ನು ಮೂತ್ರಪಿಂಡದ ಸೋಂಕುಂಟಾದಾಗ ಜ್ವರ, ಶೀತ, ಕೆಳ ಬೆನ್ನು ನೋವು, ವಾಕರಿಕೆ ಅಥವಾ ವಾಂತಿ ಉಂಟಾಗುತ್ತದೆ.