DIY Hacks: ಕಂಕುಳಿನ ವಾಸನೆ ಹೋಗಲಾಡಿಸಲು ಡಿಯೋಡ್ರೆಂಟ್ ಬೇಕಿಲ್ಲ, ಈ ಸಿಂಪಲ್ ಹ್ಯಾಕ್ಸ್ ಬಳಸಿ
Underarm Bad Smell: ಡಿಯೋಡ್ರೆಂಟ್ ಅಥವಾ ಆಂಟಿಪೆರ್ಸ್ಪಿರಂಟ್ ರೋಲ್-ಆನ್ ನಿಮ್ಮ ಕಂಕುಳಿನ ವಾಸನೆಗೆ ತಾತ್ಕಾಲಿಕ ಪರಿಹಾರ. ಆದರೆ ಮನೆಯಲ್ಲಿರುವ ಕೆಲ ವಸ್ತುಗಳು ಈ ವಾಸನೆಯನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಆ ಮನೆಮದ್ದುಗಳು ಯಾವುವು ಎಂಬುದು ಇಲ್ಲಿದೆ.
ಕಲ್ಲುಪ್ಪು ಉಗುರುಬೆಚ್ಚಗಿನ ನೀರನ್ನು ಒಂದು ಬಕೆಟ್ ತೆಗೆದುಕೊಳ್ಳಿ, ಅದಕ್ಕೆ ಸ್ವಲ್ಪ ಕಲ್ಲು ಉಪ್ಪನ್ನು ಹಾಕಿ. ಅದು ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ ನಂತರ, ಅದರಲ್ಲಿ ಸ್ನಾನ ಮಾಡಿ. ಇದು ಕಂಕುಳಿನ ವಾಸನೆಯನ್ನು ಹೋಗಲಾಡಿಸುತ್ತದೆ.
2/ 8
ಆಪಲ್ ಸೈಡರ್ ವಿನೆಗರ್ 1 ಕಪ್ ಆಪಲ್ ಸೈಡರ್ ವಿನೆಗರ್ ಅನ್ನು ತೆಗೆದುಕೊಂಡು ಅದನ್ನು 1/2 ಕಪ್ ನೀರಿನೊಂದಿಗೆ ಮಿಶ್ರಣ ಮಾಡಿ. ಇದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ, ಮಲಗುವ ಮೊದಲು ನಿಮ್ಮ ಕಂಕುಳ ಮೇಲೆ ಪ್ರತಿ ರಾತ್ರಿ ಬಳಸಿ. ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
3/ 8
ಆಲೂಗಡ್ಡೆ ಆಲೂಗಡ್ಡೆಯ ತೆಳುವಾದ ಹೋಳುಗಳಾಗಿ ಕತ್ತರಿಸಿ, ಇದನ್ನು 30 ನಿಮಿಷಗಳ ಕಾಲ ನಿಮ್ಮ ಕಂಕುಳ ಮೇಲೆ ಉಜ್ಜಿಕೊಳ್ಳಿ. ಇದನ್ನು ವಾರಕ್ಕೆ 3 ಬಾರಿಯಾದರೂ ಮಾಡಿದರೆ, ಕಂಕುಳ ವಾಸನೆಯಿಂದ ಮುಕ್ತಿ ಸಿಗುತ್ತದೆ.
4/ 8
ನಿಂಬೆ ಮತ್ತು ಅಡಿಗೆ ಸೋಡಾ ಎರಡು ಚಮಚ ಅಡಿಗೆ ಸೋಡಾವನ್ನು ತೆಗೆದುಕೊಂಡು ಒಂದು ಚಮಚ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ಮಿಶ್ರಣವನ್ನು 10 ನಿಮಿಷಗಳ ಕಾಲ ನಿಮ್ಮ ಕಂಕುಳಿಗೆ ಹಚ್ಚಿ ಮೇಲೆ ಮಸಾಜ್ ಮಾಡಿ.
5/ 8
ಟೊಮ್ಯಾಟೋ ರಸ ನಿಂಬೆ ರಸದ ಜೊತೆ ಟೊಮ್ಯಾಟೋ ರಸವನ್ನು ಮಿಶ್ರಣ ಮಾಡಿ. ಮಿಶ್ರಣವನ್ನು ನಿಮ್ಮ ಕಂಕುಳಿನ ಸುತ್ತಲೂ 10 ನಿಮಿಷಗಳ ಕಾಲ ಹಚ್ಚಿ ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ.
6/ 8
ತೆಂಗಿನ ಎಣ್ಣೆ ತೆಂಗಿನ ಎಣ್ಣೆ ಕೂಡ ನಿಮ್ಮ ಕಂಕುಳ ವಾಸನೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯನ್ನು ರಾತ್ರಿ ಮಲಗುವಾಗ ಕಂಕುಳಿಗೆ ಹಚ್ಚಿ, ಬೆಳಗ್ಗೆ ತೊಳೆಯಿರಿ.
7/ 8
ಬಾದಾಮಿ ಎಣ್ಣೆ ಬಾದಾಮಿ ಎಣ್ಣೆಯನ್ನು ಬಳಸಿ ನೀವು ಕಂಕುಳ ವಾಸನೆ ಮಾತ್ರ ಅಲ್ಲ ಅದರ ಕಪ್ಪು ಕಲೆಯನ್ನು ಸಹ ಹೋಗಲಾಡಿಸಬಹುದು. ಬಾದಾಮಿ ಎಣ್ಣೆಯನ್ನು ಅಡುಗೆ ಸೋಡಾದ ಜೊತೆ ಮಿಕ್ಸ್ ಮಾಡಿ, ಅದನ್ನು ಕಂಕುಳಿಗೆ ಹಚ್ಚಿ. ಸುಮಾರು 30 ನಿಮಿಷಗಳ ನಂತರ ತೊಳೆಯಿರಿ.
8/ 8
ಆಲಿವ್ ಎಣ್ಣೆ ಆಲಿವ್ ಎಣ್ಣೆಯ ಜೊತೆ ಬಾದಾಮಿ ಹಾಗೂ ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ, ಕಾಯಿಸಿ. ಈ ಎಣ್ಣೆಗಳನ್ನು ಬೇಕಿಂಗ್ ಸೋಡಾಗೆ ಮಿಕ್ಸ್ ಮಾಡಿ ಕಂಕುಳಿಗೆ ಹಚ್ಚಿಕೊಳ್ಳಿ.