Gardening Tips: ಕಷ್ಟಪಟ್ಟು ಬೆಳೆಸಿದ ಗಿಡವನ್ನು ಹುಳ ಹಾಳು ಮಾಡ್ತಿದ್ರೆ ತಕ್ಷಣ ಈ ಕೆಲಸ ಮಾಡಿ ಸಾಕು
Plant Insects Remedy: ಮನೆಯ ಮುಂದೆ ಸುಂದರವಾಗಿ ಕಾಣಲಿ ಎಂದು ಕೆಲ ಗಿಡಗಳನ್ನು ಹಾಕಿಕೊಂಡಿದ್ದರೆ, ಸಣ್ಣ ಹುಳುಗಳು ಬಂದು ಅದನ್ನು ತಿಂದು ಹಾಳು ಮಾಡಿ ಬಿಡುತ್ತವೆ. ಇದರಿಂದ ಹಾಕಿದ ಶ್ರಮ ವೇಸ್ಟ್ ಆಗುತ್ತದೆ. ಹಾಗಾಗಿ, ನೀವು ಗಿಡಗಳನ್ನು ಕಾಪಾಡಲು ಸಿಂಪಲ್ ಮನೆಮದ್ದು ಬಳಸಬೇಕು. ಆ ಮನೆಮದ್ದುಗಳು ಯಾವುವು ಎಂಬುದು ಇಲ್ಲಿದೆ.
ಡಿಶ್ ವಾಶರ್ ಲಿಕ್ವಿಡ್: ಸ್ವಲ್ಪ ಡಿಶ್ ವಾಶರ್ ಲಿಕ್ವಿಡ್ ತೆಗೆದುಕೊಂಡು ಅದನ್ನು ನೀರಿಗೆ ಮಿಕ್ಸ್ ಮಾಡಿ. ನಂತರ ಒಂದು ಸ್ಪ್ರೇ ಬಾಟಲಿಗೆ ಹಾಕ. ಗಿಡಗಳಿಗೆ ಸ್ವಲ್ಪ ಸ್ವಲ್ಪ ಸ್ಪ್ರೇ ಮಾಡಿ ಸಾಕು. ಇದನ್ನು ಒಂದು ವಾರ ಮಾಡಿದರೆ ಕೀಟಗಳು ನಿವಾರಣೆಯಾಗುತ್ತದೆ.
2/ 8
ಸಸ್ಯಜನ್ಯ ಎಣ್ಣೆ: ಈ ವೆಜಿಟೇಬಲ್ ಆಯಿಲ್ ಸಹ ಹುಳುಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಸೋಪಿನ ಪುಡಿ, ಈ ಎಣ್ಣೆ ಹಾಗೂ ನೀರನ್ನು ಮಿಶ್ರಣ ಮಾಡಿ, ಆಗಾಗ ಗಿಡಗಳಿಗೆ ಹಾಕಿದರೆ ಪ್ರಯೋಜನ ಸಿಗುತ್ತದೆ.
3/ 8
ಕೆಂಪು ಮೆಣಸಿನ ಪುಡಿ: ಈ ಕೆಂಪು ಮೆಣಸಿನ ಪುಡಿಯನ್ನು ಕೇವಲ 4 ಬಾರಿ ಬಳಸಿದರೆ ಸಾಕು ಗಿಡಗಳನ್ನು ಹಾಳು ಮಾಡುವ ಹುಳುಗಳು ಮಾಯವಾಗುತ್ತದೆ. ನಿಮಗೆ ಈ ಪುಡಿ ಮನೆಯಲ್ಲಿ ಮಾಡಲು ಸಾಧ್ಯವಿಲ್ಲ ಎಂದರೆ ಮಾರುಕಟ್ಟೆಯಲ್ಲಿ ಪೆಪ್ಪರ್ ಸ್ಪ್ರೇ ಲಭ್ಯವಿದೆ, ಅದನ್ನು ಬಳಕೆ ಮಾಡಬಹುದು.
4/ 8
ಬೀರ್: ಈ ಆಲ್ಕೋಹಾಲ್ಯುಕ್ತ ಪಾನೀಯ ಸಹ ನಿಮ್ಮ ಗಾರ್ಡನ್ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದನ್ನು ಗಿಡಗಳಿಗೆ ಸ್ಪ್ರೇ ಮಾಡಿ. ಆದರೆ ರಾತ್ರಿ ಮಾತ್ರ ಮಾಡಿ, ಬೆಳಗ್ಗೆ ಚೆಕ್ ಮಾಡುತ್ತಿರಿ.
5/ 8
ವಿನೆಗರ್: ವಿನೆಗರ್ ಅನ್ನು ಬೆಚ್ಚಗಿನ ನೀರಿಗೆ ಮಿಶ್ರಣ ಮಾಡಿ, ಅದಕ್ಕೆ ಸ್ವಲ್ಪ ಸೋಪಿನ ಪುಡಿ ಅಥವಾ ಡಿಶ್ ವಾಶ್ ಲಿಕ್ವಿಡ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸ್ಪ್ರೇ ಬಾಟಲಿಗೆ ಹಾಕಿ, ದಿನಕ್ಕೆ 2 ಬಾರಿ ಸ್ಪ್ರೇ ಮಾಡಿ.
6/ 8
ಬೆಳ್ಳುಳ್ಳಿ: 6 ರಿಂದ 7 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿಕೊಳ್ಳಿ. ನಂತರ ಒಂದು ಲೋಟ ನೀರಿಗೆ ಡಿಶ್ ವಾಶ್ ಲಿಕ್ವಿಡ್ ಹಾಕಿ ಅದಕ್ಕೆ ಈ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಲಸಿ. ಅದನ್ನು ಗಿಡಗಳಿಗೆ ಹಾಕಿ.
7/ 8
ಬೇವಿನ ಎಣ್ಣೆ: ಬೇವಿನ ಎಣ್ಣೆ ಬ್ಯಾಕ್ಟೀರಿಯಾ ನಿವಾರಣೆಗೆ ಹೆಸರುವಾಸಿಯಾಗಿದೆ. ಇದರ ವಾಸನೆ ಹುಳಗಳು ಹಾಗೂ ಕೀಟಾಣುಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಎಣ್ಣೆಯನ್ನು ಸೋಪಿನ ನೀರಿಗೆ ಮಿಕ್ಸ್ ಮಾಡಿ, ಗಿಡಗಳಿಗೆ ಸ್ಪ್ರೇ ಮಾಡುತ್ತಿರಿ.
8/ 8
ಈ ಎಲ್ಲಾ ಮನೆಮದ್ದುಗಳನ್ನು ಮಾಡಿದ ನಂತರ ಸಹ ಮತ್ತೆ ಮತ್ತೆ ಹುಳುಗಳು ಬಂದರೆ ಮಾರುಕಟ್ಟೆಯಲ್ಲಿ ಇದಕ್ಕೆ ಸ್ಪ್ರೇ ಲಭ್ಯವಿದೆ. ಅದನ್ನು ನೀವು ತಂದು ಬಳಕೆ ಮಾಡಬಹುದು. ಆದರೆ ಇದರಲ್ಲಿ ಸ್ವಲ್ಪ ಕೆಮಿಕಲ್ ಅಂಶ ಇರುತ್ತದೆ.