Beauty Tips: ಮುಖದ ಮೇಲಿನ ಕಪ್ಪು ಮಚ್ಚೆ ಅಂದ ಹಾಳು ಮಾಡುತ್ತಿದ್ರೆ ಇಲ್ಲಿದೆ ನೋಡಿ ಮನೆಮದ್ದು
Home Remedies For Moles: ಮುಖದ ಮೇಲೆ ಕಲೆಗಳು, ಸಣ್ಣ ಸಣ್ಣ ಗುಳ್ಳೆಗಳು, ಮಚ್ಚೆಗಳು ಅಂದವನ್ನು ಹಾಳು ಮಾಡುತ್ತದೆ. ಸಣ್ಣ ಸಣ್ಣ ಗುಳ್ಳೆಗಳು, ಮೊಡವೆಗಳು ಹೋದ ನಂತರ ಉಳಿದುಕೊಳ್ಳುವ ಕಲೆಗಳು ನಿಜಕ್ಕೂ ಅಂದವನ್ನು ಹಾಳು ಮಾಡುತ್ತದೆ. ಹಾಗಾದ್ರೆ ಈ ಕಲೆಗಳಿಗೆ ಮುಕ್ತಿ ಪಡೆಯಲು ಇಲ್ಲಿದೆ ಟಿಪ್ಸ್.
ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿಕೊಳ್ಳಿ. ಆ ಪೇಸ್ಟ್ ತೆಗೆದುಕೊಂಡು ಮಚ್ಚೆಗಳಿರುವ ಜಾಗದಲ್ಲಿ ಹಚ್ಚಿ, ಇದನ್ನ ವಾರಕ್ಕೆ 3 ಬಾರಿ ಬಳಸಿದ್ರೆ ಕಲೆ ಮಾಯವಾಗುತ್ತದೆ.
2/ 7
ಮಚ್ಚೆ ಇರುವ ಜಾಗಕ್ಕೆ ಈ ತಾಜಾ ಅಲೋವೆರಾ ಜೆಲ್ ಅನ್ನು ಹಚ್ಚಿ ಮಸಾಜ್ ಮಾಡಿ. 2 ರಿಂದ 3 ಗಂಟೆಗಳ ನಂತರ ತಣ್ಣೀರಿನಿಂದ ತೊಳೆಯಿರಿ.
3/ 7
ಒಂದು ಟೇಬಲ್ ಚಮಚ ಬೇಕಿಂಗ್ ಸೋಡಾ ಮತ್ತು 2 ಟೇಬಲ್ ಚಮಚ ಹರಳೆಣ್ಣೆ ಬೆರೆಸಿ ದಪ್ಪ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನ ಮಚ್ಚೆ ಇರುವ ಕಡೆ ಹಚ್ಚಿ ಸುಮಾರು ಅರ್ಧ ಗಂಟೆ ತನಕ ಒಣಗಲು ಬಿಡಿ.
4/ 7
ಜೇನು ತುಪ್ಪ ಮತ್ತು ಫ್ಲಾಕ್ಸ್ ಸೀಡ್ ಆಯಿಲ್ ಮಚ್ಚೆಗಳಿಗೆ ಪರಿಹಾರ ನೀಡುತ್ತದೆ ಎನ್ನಲಾಗುತ್ತದೆ. ಇವುಗಳನ್ನು ಮಿಶ್ರಣ ಮಾಡಿ ಮುಖದ ಕಲೆಗಳ ಮೇಲೆ ಹಚ್ಚಿದರೆ ಬೇಗ ಪ್ರಯೋಜನ ಲಭಿಸುತ್ತದೆ.
5/ 7
ಆಲೂಗಡ್ಡೆಯನ್ನು ಒಂದು ಸಣ್ಣ ಚೂರಾಗಿ ಕತ್ತರಿಸಿಕೊಂಡು ಮಚ್ಚೆಯ ಮೇಲೆ ಒಂದೆರಡು ನಿಮಿಷಗಳವರೆಗೆ ಮಸಾಜ್ ಮಾಡಿದರೆ ಉತ್ತಮ ಪ್ರಯೋಜನ ನೀಡುತ್ತದೆ.
6/ 7
ಅರಿಶಿನದಲ್ಲಿ ಆ್ಯಂಟಿ ಆಕ್ಸಿಡೆಂಟ್ ಗುಣಗಳು ಹೆಚ್ಚಿದ್ದು, ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಅರಿಶಿನ ಪುಡಿಗೆ ನೀರನ್ನು ಹಾಕಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ.
7/ 7
ಮೇಲಿನ ಈ ಎಲ್ಲಾ ಟಿಪ್ಸ್ ಫಾಲೋ ಮಾಡುವುದರಿಂದ ಮುಖದ ಮೇಲಿನ ಕಲೆಗಳು ಬೇಗ ಮಾಯವಾಗುತ್ತದೆ.