ನಿಂಬೆ, ರೋಸ್ ವಾಟರ್ ಬಳಕೆ: ಕನ್ನಡಕದಿಂದ ಉಂಟಾಗಿರುವ ಕಲೆಗಳ ಮೇಲೆ ನಿಂಬೆ ರಸವನ್ನು ಹಚ್ಚಿ. ಕೆಲವು ಸಮಯದ ಬಳಿಕ ತೊಳೆಯುವುದರಿಂದ ಈ ಕಲೆಯನ್ನು ಹೋಗಲಾಡಿಸಬಹುದು. ನಿಂಬೆ ರಸದ ಜೊತೆಗೆ ರೋಸ್ ವಾಟರ್ ಮಿಕ್ಸ್ ಮಾಡಿ ಕಲೆಯ ಮೇಲೆ ಹಚ್ಚಿ 15 ನಿಮಿಷ ಹಾಗೇ ಬಿಡಿ. ಬಳಿಕ ಅದನ್ನು ಚೆನ್ನಾಗಿ ತೊಳೆಯಿರಿ. ಇದೂ ಸಹ ನಿಮ್ಮ ಮುಖದ ಕಲೆಯನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ.