Dark Neck: ಕುತ್ತಿಗೆಯ ಕಪ್ಪು ಕಲೆಗಳಿಗೆ ಇಲ್ಲಿದೆ ಪರಿಹಾರ
How to Get Rid of Dark Neck : ಕುತ್ತಿಗೆಯ ಭಾಗದಲ್ಲಿ ಕಪ್ಪಾದ ಕಲೆಗಳು ಕಂಡು ಬಂದು ನಮ್ಮ ಸೌಂದರ್ಯವನ್ನು ಹಾಳು ಮಾಡುತ್ತದೆ. ಇದಕ್ಕಾಗಿ ರಾಸಾಯನಿಕಯುಕ್ತ ಕ್ರೀಮ್ಗಳನ್ನು ಬಳಕೆ ಮಾಡಲಾಗುತ್ತದೆ. ಆದರೆ ಮನೆಯಲ್ಲಿರುವ ಕೆಲ ವಸ್ತುಗಳು ಇದಕ್ಕೆ ಪರಿಹಾರ ನೀಡುತ್ತದೆ. ಯಾವ ವಸ್ತುಗಳನ್ನು ಬಳಸಿದ್ರೆ ಕಪ್ಪು ಕಲೆಗಳಿಂದ ಮುಕ್ತಿ ಪಡೆಯಬಹುದು ಎಂಬುದು ಇಲ್ಲಿದೆ.
ಅಲೋವೇರಾ ಜೆಲ್ ಅನ್ನು ನಿಮ್ಮ ಕುತ್ತಿಗೆಗೆ ಹಚ್ಚಿ 20 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ.ನಂತರ ನೀರಿನಿಂದ ಅದನ್ನು ತೊಳೆಯಿರಿ.
2/ 8
ಅಡಿಗೆ ಸೋಡಾ ಮತ್ತೆ ನೀರನ್ನು ಮಿಶ್ರಣ ಮಾಡಿ, ಕುತ್ತಿಗೆಯ ಭಾಗಗಳಿಗೆ ಹಚ್ಚಿ ಒಣಗಲು ಬಿಡಿ. ಇದು ಕುತ್ತಿಗೆಯ ಕಪ್ಪು ಕಲೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ.
3/ 8
ತುರಿದ ಸೌತೆಕಾಯಿ ಅಥವಾ ಸೌತೆಕಾಯಿ ರಸವನ್ನು ಹಚ್ಚಿ ಮಸಾಜ್ ಮಾಡುವುದರಿಂದ ಕಪ್ಪು ಕಲೆಗಳಿಗೆ ಮುಕ್ತಿ ನೀಡುತ್ತದೆ.
4/ 8
ಒಂದು ಚಮಚದಷ್ಟು ಬಾದಾಮಿ ಪುಡಿಯನ್ನು ತೆಗೆದುಕೊಂಡು, ಅದನ್ನು ಹಾಲು ಮತ್ತು ಜೇನು ತುಪ್ಪದೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ,ಅದನ್ನ ಕುತ್ತಿಗೆಗೆ ಹಚ್ಚಿ, 20 ನಿಮಿಷಗಳ ನಂತರ ತೊಳೆಯಿರಿ.
5/ 8
ವಾಲ್ ನಟ್ಸ್ ಗಳನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಅದನ್ನು ಸ್ವಲ್ಪ ಮೊಸರಿನೊಂದಿಗೆ ಮಿಶ್ರಣ ಮಾಡಿ, ಕುತ್ತಿಗೆಗೆ ಹಚ್ಚಿ ಒಣಗಿದ ನಂತರ ತೊಳೆಯಿರಿ.
6/ 8
ರಾತ್ರಿ ಮಲಗುವ ಮುನ್ನ ರೋಸ್ ವಾಟರ್ ಅನ್ನು ಕುತ್ತಿಗೆಗೆ ಹಚ್ಚಿ ಬೆಳಗ್ಗೆ ತೊಳೆಯುವುದರಿಂದ ಬೇಗನೆ ಕಪ್ಪುಗಳನ್ನು ಹೋಗಲಾಡಿಸಬಹುದು.
7/ 8
ನಿಂಬೆ ಹಣ್ಣು ಬ್ಲೀಚಿಂಗ್ ಏಜೆಂಟ್ ಹೊಂದಿದ್ದು, ಇದು ಕಪ್ಪು ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
8/ 8
ಅಲ್ಲದೇ ಬರೀ ಮೊಸರನ್ನ ನೀವು ಕುತ್ತಿಗೆಯ ಕಪ್ಪು ಕಲೆಗಳಿಗೆ ಹಚ್ಚಿದರೆ ಪರಿಣಾಮಕಾರಿ ಪ್ರಯೋಜನ ಲಭಿಸುತ್ತದೆ.