DIY Hacks: ಅಡುಗೆ ಮನೆಯಲ್ಲಿರುವ ಈ ವಸ್ತುಗಳು ಮಂಡಿ, ಮೊಣಕೈ ಟ್ಯಾನಿಂಗ್ಗೆ ರಾಮಬಾಣ
How to Get Rid of Dark Knees: ಹೊರಗಿನ ಬಿಸಿಲು ಅಥವಾ ಬೇರೆ ಹಲವಾರು ಕಾರಣಗಳಿಂದ ಮಂಡಿ ಹಾಗೂ ಮೊಣಕೈ ಬಹಳ ಕಪ್ಪಾಗಿರುತ್ತದೆ. ಈ ರೀತಿ ಟ್ಯಾನ್ ಆದರೆ ಅದು ನಮ್ಮ ದೇಹದ ಅಂದವನ್ನು ಹಾಳು ಮಾಡುತ್ತದೆ ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಕೆಲವರು ಬಳಸುತ್ತಾರೆ. ಆದರೆ. ಅದರ ಬದಲು ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿದರೆ ಸಾಕು. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.
ನಿಂಬೆಹಣ್ಣು: ಈ ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ನಿಮ್ಮ ಟ್ಯಾನಿಂಗ್ ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದನ್ನು ನೇರವಾಗಿ ಚರ್ಮದ ಮೇಲೆ ಹಚ್ಚಲು ಭಯ ಇದ್ದರೆ, ಜೇನುತುಪ್ಪದ ಜೊತೆ ಸೇರಿಸಿ ಬಳಸಬಹುದು.
2/ 8
ಕಡಲೆಹಿಟ್ಟು: ಕಡಲೆಹಿಟ್ಟು ನಮ್ಮ ಚರ್ಮದ ಅಂದವನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಸ್ವಲ್ಪ ಕಡಲೆಹಿಟ್ಟಿಗೆ ನಿಂಬೆರಸ ಹಾಗೂ ವಿನೆಗರ್ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.ಇದನ್ನು ಟ್ಯಾನ್ ಆಗಿರುವ ಕಡೆ ಹಚ್ಚಿ. ಸುಮಾರು 1 ಗಂಟೆಯ ನಂತರ ಇದನ್ನು ತೊಳೆಯಿರಿ.
3/ 8
ಅಲೋವೆರಾ: ಅಲೋವೆರಾ ಒಂದಿದ್ದರೆ ಸಾಕು ಟ್ಯಾನಿಂಗ್ಗೆ ಪರಿಹಾರ ಸಿಗುತ್ತದೆ. ಸ್ವಲ್ಪ ಅಲೋವೆರಾವನ್ನು ತೆಗೆದುಕೊಂಡು, ಅದನ್ನು ಮಂಡಿ ಹಾಗೂ ಮೊಣಕೈಗೆ ಹಚ್ಚಿ ಮಸಾಜ್ ಮಾಡಿ.
4/ 8
ಕೊಬ್ಬರಿ ಎಣ್ಣೆ: ಕೊಬ್ಬರಿ ಎಣ್ಣೆಗಿಂತ ಬೇರೆ ಮನೆಮದ್ದು ಈ ಟ್ಯಾನ್ ಹೋಗಲಾಡಿಸಲು ಇಲ್ಲ ಎನ್ನಬಹುದು. ಸ್ವಲ್ಪ ಕೊಬ್ಬರಿ ಎಣ್ಣೆಗೆ ನಿಂಬೆರಸ ಮಿಕ್ಸ್ ಮಾಡಿ ಹಚ್ಚಿ. ಇದನ್ನು ದಿನ ಪೂರ್ತಿ ಬಿಟ್ಟರೂ ಸಹ ತೊಂದರೆಯಿಲ್ಲ.
5/ 8
ಆಲಿವ್ ಆಯಿಲ್: ಆಲಿವ್ ಆಯಿಲ್ಗೆ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ವಾರಕ್ಕೆ 3 ಬಾರಿ ಹಚ್ಚಿ, ನಂತರ ತಣ್ಣೀರಿನಿಂದ ತೊಳೆಯಿರಿ. ತೊಳೆದು ಒಣಗಿಸಿ, ಅದಕ್ಕೆ ಮಾಯಿಶ್ಚರೈಸರ್ ಹಚ್ಚಿ.
6/ 8
ಟೊಮ್ಯಾಟೋ: ಟೊಮ್ಯಾಟೋ ಹಾಗೂ ಸಕ್ಕರೆಯ ಸ್ಕ್ರಬ್ ಟ್ಯಾನಿಂಗ್ ಸಮಸ್ಯೆಗೆ ಪರಿಹಾರ ನೀಡುತ್ತದೆ. ಟೊಮ್ಯಾಟೋ ಹಣ್ಣನ್ನು ರೌಂಡ್ ಆಗಿ ಕತ್ತರಿಸಿಕೊಳ್ಳಿ ಅದನ್ನು ಸಕ್ಕರೆಯಲ್ಲಿ ಅದ್ದಿ, ಚೆನ್ನಾಗಿ ಸ್ಕ್ರಬ್ ಮಾಡಿ.
7/ 8
ಓಟ್ಸ್ ಮತ್ತು ಯೋಗರ್ಟ್: ಸ್ವಲ್ಪ ಓಟ್ಸ್ ಪುಡಿ ಮಾಡಿಕೊಂಡು ಅದಕ್ಕೆ ಯೋಗರ್ಟ್ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಗಟ್ಟಿಯಾದ ಈ ಪೇಸ್ಟ್ ಅನ್ನು ಮಂಡಿ ಹಾಗೂ ಮೊಣಕೈಗೆ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ.
8/ 8
ಅರಿಶಿನ: ಚರ್ಮದ ಸಮಸ್ಯೆಗಳಿಗೆ ಹೇಗೆ ಅರಿಶಿನ ಪ್ರಯೋಜನ ನೀಡುತ್ತದೆ ಎಂಬುದನ್ನ ನಾವು ಹೇಳಬೇಕಿಲ್ಲ. ಸ್ವಲ್ಪ ಅರಿಶಿನಕ್ಕೆ ಹಾಲಿನ ಕೆನೆ ಮಿಕ್ಸ್ ಮಾಡಿ ಟ್ಯಾನ್ ಆಗಿರುವ ಕಡೆ ಹಚ್ಚುವುದು ಒಳ್ಳೆಯದು.