Home Hacks: ಮನೆಯಲ್ಲಿ ಜಿರಳೆಗಳ ಕಾಟ ಜಾಸ್ತಿ ಆಗಿದ್ರೆ ಈ 5 ಮನೆ ಮದ್ದುಗಳನ್ನು ಬಳಸಿ

How to Get Rid of Cockroaches: ಮನೆಗಳಲ್ಲಿ ಸೊಳ್ಳೆ, ಇಲಿ, ಇರುವೆಗಳು, ಜಿರಳೆಗಳ ಕಾಟ ಇದ್ದೇ ಇರುತ್ತೆ. ಆದರೆ ಹುಳ ಹುಪ್ಪಟೆಗಳ ಕಾಟ ಜಾಸ್ತಿ ಆದ್ರೆ ಕಿರಿಕಿರಿ ಎನಿಸೋದು ಗ್ಯಾರಂಟಿ. ಅದರಲ್ಲೂ ಮನೆಯಲ್ಲಿ ಜಿರಳೆಗಳ ಸಂಖ್ಯೆ ಜಾಸ್ತಿ ಆದ್ರೆ ಕಿರಿಕಿರಿ ಮಾತ್ರವಲ್ಲ ಗಂಭೀರ ಕಾಯಿಲೆಗಳಿಗೆ ನಾಂದಿ ಹಾಡುತ್ತದೆ.

First published:

  • 17

    Home Hacks: ಮನೆಯಲ್ಲಿ ಜಿರಳೆಗಳ ಕಾಟ ಜಾಸ್ತಿ ಆಗಿದ್ರೆ ಈ 5 ಮನೆ ಮದ್ದುಗಳನ್ನು ಬಳಸಿ

    ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾದ್ರೆ ದುಬಾರಿ ಔಷಧಿಗಳನ್ನು ಬಳಸುವ ಅಗತ್ಯವಿಲ್ಲ. ಮನೆಯಲ್ಲಿ ಅತಿಯಾದ ಕೆಮಿಕಲ್ ಬಳಕೆ ವೃದ್ಧರು-ಮಕ್ಕಳು, ರೋಗಿಗಳಿಗೆ ಒಳ್ಳೆಯದಲ್ಲ. ಹಣ ಕೂಡ ಜಾಸ್ತಿ ಖರ್ಚಾಗುತ್ತದೆ. ಹಾಗಾಗಿ ಜಿರಳೆ ಕಾಟಕ್ಕೆ ಸಿಂಪಲ್ಲಾದ ಮನೆ ಮದ್ದುಗಳನ್ನು ಬಳಸಿ, ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

    MORE
    GALLERIES

  • 27

    Home Hacks: ಮನೆಯಲ್ಲಿ ಜಿರಳೆಗಳ ಕಾಟ ಜಾಸ್ತಿ ಆಗಿದ್ರೆ ಈ 5 ಮನೆ ಮದ್ದುಗಳನ್ನು ಬಳಸಿ

    ಅಡಿಗೆ ಸೋಡಾ ಬಳಸಿ: ಜಿರಳೆಗಳನ್ನು ತೊಡೆದುಹಾಕಲು ನೀವು ಅಡಿಗೆ ಸೋಡಾದ ಸಹಾಯವನ್ನು ತೆಗೆದುಕೊಳ್ಳಬಹುದು. ಅಡಿಗೆ ಸೋಡಾವನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ. ಜಿರಳೆಗಳ ಜಾಸ್ತಿ ಕಾಣಿಸಿಕೊಳ್ಳುವ ಸ್ಥಳಗಳಲ್ಲಿ ಈ ಮಿಶ್ರಣವನ್ನು ಸಿಂಪಡಿಸಿ.

    MORE
    GALLERIES

  • 37

    Home Hacks: ಮನೆಯಲ್ಲಿ ಜಿರಳೆಗಳ ಕಾಟ ಜಾಸ್ತಿ ಆಗಿದ್ರೆ ಈ 5 ಮನೆ ಮದ್ದುಗಳನ್ನು ಬಳಸಿ

    ಸೀಮೆ ಎಣ್ಣೆಯನ್ನು ಬಳಸಬಹುದು: ಸೀಮೆ ಎಣ್ಣೆಯ ಸಹಾಯದಿಂದ ನೀವು ಕೆಲವೇ ನಿಮಿಷಗಳಲ್ಲಿ ಜಿರಳೆಗಳನ್ನು ತೊಡೆದುಹಾಕಬಹುದು. ಇದಕ್ಕಾಗಿ, ಸ್ಪ್ರೇ ಬಾಟಲಿಯಲ್ಲಿ ಸೀಮೆ ಎಣ್ಣೆಯನ್ನು ತುಂಬಿಸಿ ಮತ್ತು ಜಿರಳೆಗಳು ಹೆಚ್ಚಾಗಿ ಇರುವ ಸ್ಥಳಗಳಲ್ಲಿ ಸಿಂಪಡಿಸಿ. ಇದರ ವಾಸನೆಯಿಂದ ಜಿರಳೆಗಳು ಕೆಲವೇ ನಿಮಿಷಗಳಲ್ಲಿ ಓಡಿಹೋಗುತ್ತವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Home Hacks: ಮನೆಯಲ್ಲಿ ಜಿರಳೆಗಳ ಕಾಟ ಜಾಸ್ತಿ ಆಗಿದ್ರೆ ಈ 5 ಮನೆ ಮದ್ದುಗಳನ್ನು ಬಳಸಿ

    ಪಲಾವ್ ಎಲೆಯ ಪುಡಿಯನ್ನು ಬಳಸಿ: ಜಿರಳೆಗಳನ್ನು ತೊಡೆದುಹಾಕಲು ನೀವು ಪಲಾವ್ ಎಲೆಯ ಪುಡಿಯನ್ನು ಸಹ ಬಳಸಬಹುದು. ಇದಕ್ಕಾಗಿ ಎಲೆಯನ್ನು ನುಣ್ಣಗೆ ಪುಡಿ ಮಾಡಿ. ಇದಾದ ನಂತರ ಈ ಪುಡಿಯನ್ನು ಮನೆಯ ಮೂಲೆ ಮೂಲೆಯಲ್ಲಿ ಸ್ವಲ್ಪ ಸ್ವಲ್ಪವಾಗಿ ಉದುರಿಸಿ.

    MORE
    GALLERIES

  • 57

    Home Hacks: ಮನೆಯಲ್ಲಿ ಜಿರಳೆಗಳ ಕಾಟ ಜಾಸ್ತಿ ಆಗಿದ್ರೆ ಈ 5 ಮನೆ ಮದ್ದುಗಳನ್ನು ಬಳಸಿ

    ಪುದೀನಾ ಎಣ್ಣೆಯನ್ನು ಸಿಂಪಡಿಸಿ: ಜಿರಳೆಗಳನ್ನು ತೊಡೆದುಹಾಕಲು ನೀವು ಪುದೀನಾ ಎಣ್ಣೆಯನ್ನು ಸಹ ಬಳಸಬಹುದು. ಇದಕ್ಕಾಗಿ, ಒಂದು ಲೋಟ ನೀರಿನಲ್ಲಿ ಅರ್ಧ ಗ್ಲಾಸ್ ಪುದೀನಾ ಎಣ್ಣೆಯನ್ನು ಮಿಶ್ರಣ ಮಾಡಿ. ನಂತರ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಸ್ಪ್ರೇ ಬಾಟಲಿಯಲ್ಲಿ ತುಂಬಿ ಮನೆಯಲ್ಲಿ ಸಿಂಪಡಿಸಿ.

    MORE
    GALLERIES

  • 67

    Home Hacks: ಮನೆಯಲ್ಲಿ ಜಿರಳೆಗಳ ಕಾಟ ಜಾಸ್ತಿ ಆಗಿದ್ರೆ ಈ 5 ಮನೆ ಮದ್ದುಗಳನ್ನು ಬಳಸಿ

    ಲವಂಗವನ್ನು ಬಳಸಿ: ಜಿರಳೆಗಳನ್ನು ಮನೆಯಿಂದ ಓಡಿಸಲು ನೀವು ಲವಂಗದ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ಇದಕ್ಕಾಗಿ 12-15 ಲವಂಗಗಳ ಪುಡಿಯನ್ನು ಮಾಡಿ ಮತ್ತು ಜಿರಳೆಗಳು ಕಂಡುಬರುವ ಸ್ಥಳಗಳಲ್ಲಿ ಇರಿಸಿ. ಲವಂಗವನ್ನು ನೀರಿನಲ್ಲಿ ಕುದಿಸಿ ಸಿಂಪಡಿಸಿ.

    MORE
    GALLERIES

  • 77

    Home Hacks: ಮನೆಯಲ್ಲಿ ಜಿರಳೆಗಳ ಕಾಟ ಜಾಸ್ತಿ ಆಗಿದ್ರೆ ಈ 5 ಮನೆ ಮದ್ದುಗಳನ್ನು ಬಳಸಿ

    Disclaimer: ಈ ಲೇಖನದಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. News18 ಕನ್ನಡ ಇವುಗಳನ್ನು ಖಚಿತಪಡಿಸುವುದಿಲ್ಲ. ಇವುಗಳನ್ನು ಅಳವಡಿಸುವ ಮೊದಲು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ.

    MORE
    GALLERIES