Bed Bugs: ಏನೇ ಸರ್ಕಸ್ ಮಾಡಿದ್ರೂ ತಿಗಣೆ ಹೋಗ್ತಿಲ್ವಾ? ನಿಮ್ಮ ಮನೆಯಲ್ಲಿಯೇ ಇದೇ ಪರಿಹಾರ
How to Get Rid of Bed Bugs: ನೀವು ಬೆಡ್ಬಗ್ ಸಮಸ್ಯೆ ಅನುಭವಿಸುತ್ತಿದ್ದರೆ, ಅದು ನಿಜಕ್ಕೂ ತಲೆನೋವಿನ ವಿಚಾರ ಎನ್ನಬಹುದು. ಇದು ನೀವು ನಿದ್ದೆ ಮಾಡುವಾಗ ನಿಮ್ಮ ರಕ್ತವನ್ನು ಹೀರುತ್ತದೆ. ಇದಕ್ಕೆ ನೀವು ಕೀಟನಾಶಕಗಳನ್ನು ಸಿಂಪಡಿಸಬೇಕಾಗುತ್ತದೆ. ಆದರೆ ಮನೆಯಲ್ಲಿಯೇ ಸಿಂಪಲ್ ಮನೆಮದ್ದುಗಳು ತಿಗಣೆ ಓಡಿಸಲು ಸಹಾಯ ಮಾಡುತ್ತದೆ.
ಲವಂಗ ಎಣ್ಣೆ ಲವಂಗ ಎಣ್ಣೆ ನಿಮಗೆ ತಿಗಣೆ ಕಾಟದಿಂದ ಮುಕ್ತಿ ನೀಡುತ್ತದೆ. ನೀರಿಗೆ ಲವಂಗ ಎಣ್ಣೆ ಮಿಕ್ಸ್ ಮಾಡಿ, ಅದನ್ನು ನಿಮ್ಮ ರೂಂ ಪೂರ್ತಿ ಸ್ಪ್ರೇ ಮಾಡಿ. ಇದು ಬೇಗ ತಿಗಣೆ ಹೋಗಲಾಡಿಸಲು ಸಹಾಯ ಮಾಡುತ್ತದೆ.
2/ 8
ನಿಂಬೆಹುಲ್ಲು ಒಂದು ಬಟ್ಟಲು ನೀರನ್ನು ಚೆನ್ನಾಗಿ ಕುದಿಸಿ, ನೀರು ಕುದಿಯುತ್ತಿರುವಾಗ ನಿಂಬೆಹುಲ್ಲನ್ನು ಹಾಕಿ ಮತ್ತೊಮ್ಮೆ ಕುದಿಸಿ. ತಿಗಣೆ ಎಲ್ಲಿ ಹೆಚ್ಚಿದೆಯೋ, ಆ ಜಾಗಕ್ಕೆ ಸಿಂಪಡಿಸಿದರೆ ಸಾಕು.
3/ 8
ಬ್ಲ್ಯಾಕ್ ಟೀ ಬ್ಲ್ಯಾಕ್ ಟೀ ಕೇವಲ ಆರೋಗ್ಯಕ್ಕೆ ಮಾತ್ರ ಒಳ್ಳೆಯದಲ್ಲ, ತಿಗಣೆ ಓಡಿಸಲು ಸಹ ಸಹಾಯ ಮಾಡುತ್ತದೆ. ಸ್ಪ್ರೇ ಬಾಟಲಿಗೆ ಬ್ಲ್ಯಾಕ್ ಟೀ ಹಾಕಿ, ಅದನ್ನು ರೂಂನ ಮೂಲೆ ಮೂಲೆಗೆ ಸಿಂಪಡಿಸಿ.
4/ 8
ಅಡಿಗೆ ಸೋಡಾ ಅಡಿಗೆ ಸೋಡಾ ನಮ್ಮ ಮನೆಯನ್ನು ಸ್ವಚ್ಛ ಮಾಡುವಲ್ಲಿ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಹಾಗೆಯೇ ತಿಗಣೆ ಓಡಿಸಲು ಇದು ಬಹಳ ಮುಖ್ಯವಾಗುತ್ತದೆ. ಇದನ್ನು ಒಂದು ಬಟ್ಟಲಿನಲ್ಲಿ ಹಾಕಿ, ತಿಗಣೆ ಇರುವ ಜಾಗದಲ್ಲಿ ಇಡಿ.
5/ 8
ಮೆಣಸು ಒಣ ಮೆಣಸು ನಿಮಗೆ ತಿಗಣೆ ಓಡಿಸಲು ಸಹಾಯ ಮಾಡುತ್ತದೆ. ಒಂದು ಲೋಟ ನೀರನ್ನು ಕುದಿಸಿ, ಅದಕ್ಕೆ ಒಣ ಮೆಣಸು ಹಾಕಿ. ನಂತರ ಸ್ಪ್ರೇ ಬಾಟಲಿಗೆ ಹಾಕಿ, ದಿನಕ್ಕೆ 3 ಬಾರಿ ಅದನ್ನು ತಿಗಣೆ ಇರುವ ಜಾಗದಲ್ಲಿ ಹಾಕಿ.
6/ 8
ಆಲ್ಕೊಹಾಲ್ ಆಲ್ಕೊಹಾಲ್ ಕೇವಲ ಪಾನೀಯ ಅಲ್ಲ, ಇದು ಸಣ್ಣ ವೈರಸ್ಗಳನ್ನು ಹೋಗಲಾಡಿಸಲು ಸಹ ಸಹಾಯ ಮಾಡುತ್ತದೆ. ಹಾಗೆಯೇ, ತಿಗಣೆ ಕಾಟ ತಡೆಯಲು ಸಾಧ್ಯವಾಗದಿದ್ದರೆ, ನೀವು ಆಲ್ಕೊಹಾಲ್ ಅನ್ನು ಹತ್ತಿಯಲ್ಲಿ ಅದ್ದಿ, ತಿಗಣೆ ಇರುವ ಕಡೆ ಇಡಿ.
7/ 8
ಬೇವಿನ ಎಣ್ಣೆ ಬೇವಿನ ಎಣ್ಣೆ ವಾಸನೆ ಯಾವುದೇ ಕ್ರೀಮಿ ಕೀಟಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಬೇವಿನ ಎಣ್ಣೆಯನ್ನು ನೀವು ರೂಂನ ಮೂಲೆ ಮೂಲೆಯಲ್ಲಿ ಸಿಂಪಡಿಸಿ. ಇಲ್ಲದಿದ್ದರೆ, ಅದನ್ನು ಒಂದು ಪಾತ್ರೆಯಲ್ಲಿ ಹಾಕಿ , ಮೂಲೆಯಲ್ಲಿ ಇಡಿ. ವಾರಕ್ಕೆ 2 ಬಾರಿ ಬದಲಾಯಿಸಿ.
8/ 8
ಪುದೀನ ಎಲೆ ಪುದೀನ ಎಲೆ ಸಹ ಬೇವಿನ ಎಣ್ಣೆಯಂತೆ ಪರಿಮಳವನ್ನು ಹೊಂದಿರುತ್ತದೆ. ಸ್ವಲ್ಪ ಪುದೀನ ಎಲೆಯನ್ನು ತೆಗೆದುಕೊಂಡು ಜಜ್ಜಿ, ಪುಡಿ ಮಾಡಿಕೊಳ್ಳಿ. ಅದನ್ನು ಸಣ್ಣ ಕವರ್ನಲ್ಲಿ ಕಟ್ಟಿ, ತಿಗಣೆ ಇರುವಲ್ಲಿ ಇಡಿ.