Skin Care Tips: ಹೆಚ್ಚು ಖರ್ಚು ಮಾಡದೇ ಸುಂದರ ತ್ವಚೆ ಪಡೆಯಲು ಹೀಗೆ ಮಾಡಿ
How To Get Glowing Skin: ತ್ವಚೆಯ ಅಂದ ಕಾಪಾಡಿಕೊಳ್ಳಲು ಹಲವಾರು ರೀತಿಯ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಹೆಚ್ಚಿನ ಪ್ರಯೋಜನ ಸಿಗುವುದಿಲ್ಲ. ಸುಮ್ಮನೆ ದುಡ್ಡು ವೇಸ್ಟ್. ಅದರ ಬದಲು ಜೀವನಶೈಲಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡರೆ ಹೆಚ್ಚಿನ ಖರ್ಚಿಲ್ಲದೆ ಮನೆಯಲ್ಲಿಯೇ ತ್ವಚೆಯ ಅಂದವನ್ನು ಕಾಪಾಡಿಕೊಳ್ಳಬಹುದು.
ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೆಲಸ. ಆದರೆ ಅದನ್ನು ಎಚ್ಚರಿಕೆಯಿಂದ ಮಾಡಬೇಕು. ನಾವು ಮಾಡುವ ಕೆಲ ತಪ್ಪುಗಳು ನಮ್ಮ ಅಂದವನ್ನು ಹಾಳು ಮಾಡುತ್ತದೆ.
2/ 7
ನಮ್ಮಲ್ಲಿ ಹೆಚ್ಚಿನವರು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಇದು ಕೆಲವೊಮ್ಮೆ ನಮ್ಮ ಚರ್ಮದ ಮೇಲೆ ಕಾಣುತ್ತದೆ. ಅನೇಕ ಜನರು ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಲು ಮರೆಯುತ್ತಾರೆ ಜೊತೆಗೆ ದುಬಾರಿ ಸೌಂದರ್ಯವರ್ಧಕಗಳತ್ತ ಮುಖ ಮಾಡುತ್ತಾರೆ. ಈ ಉತ್ಪನ್ನಗಳು ನಮಗೆ ಬಾಹ್ಯ ಪ್ರಯೋಜನಗಳನ್ನು ಮಾತ್ರ ನೀಡುತ್ತವೆ.
3/ 7
ಪ್ರತಿದಿನ ನೀರು ಕುಡಿಯಿರಿ: ನಮ್ಮ ದೇಹಕ್ಕೆ ಜೀರ್ಣಕ್ರಿಯೆ, ಚರ್ಮದ ಆರೈಕೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ನೀರು ಬೇಕು. ನೀವು ದಿನಕ್ಕೆ 3-5 ಲೀಟರ್ ನೀರನ್ನು ಕುಡಿಯಬೇಕು. ಇದು ನಿಮ್ಮ ಜೀರ್ಣಕ್ರಿಯೆಯನ್ನು ಬಲಪಡಿಸಲು, ಚರ್ಮದ ಹೊಳಪು ಕಾಪಾಡಲು ಮತ್ತು ಆಮ್ಲಜನಕವನ್ನು ಸರಿಯಾಗಿ ವಿತರಿಸಲು ಸಹಾಯ ಮಾಡುತ್ತದೆ.
4/ 7
ಮೊಳಕೆ ಕಾಳುಗಳನ್ನು ಹೆಚ್ಚು ತಿನ್ನಿ. ಆಹಾರವು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಿಮಗೆ ಸುಂದರವಾದ ಹೊಳಪನ್ನು ನೀಡುತ್ತದೆ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
5/ 7
ವೆಜ್ ಸಲಾಡ್: ವೆಜ್ ಸಲಾಡ್ ಕೇವಲ ರುಚಿಕರವಾದ ತಿಂಡಿ ಮಾತ್ರವಲ್ಲ, ಆರೋಗ್ಯಕರ ಅಭ್ಯಾಸಗಳನ್ನು ಕಾಪಾಡಿಕೊಳ್ಳಲು ಮತ್ತು ಹೆಚ್ಚು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. ನಿಮ್ಮ ಊಟದೊಂದಿಗೆ ಈ ಸಲಾಡ್ ಅನ್ನು ತಿನ್ನುವುದು ಹೆಚ್ಚು ಪ್ರಯೋಜನಕರ.
6/ 7
ಸಮಯದ ಅಭಾವದ ಕಾರಣದಿಂದ ನಮ್ಮ ನಿಯಮಿತ, ಆರೋಗ್ಯಕರ ಆಹಾರಕ್ಕಿಂತ ತ್ವರಿತ ಆಹಾರದ ಮೇಲೆ ಹೆಚ್ಚು ಅವಲಂಬಿತರಾಗುವಂತೆ ಮಾಡುತ್ತದೆ. ಆದರೆ, ತ್ವರಿತ ಆಹಾರವು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.
7/ 7
ಹೆಚ್ಚು ಟೀ ಮತ್ತು ಕಾಫಿ ಕುಡಿಯಬೇಡಿ: ಟೀ ಮತ್ತು ಕಾಫಿ ಬಳಸಿ ಕೆಲಸದ ಒತ್ತಡವನ್ನು ನಿರ್ವಹಿಸುವುದು ಕೆಟ್ಟ ಅಭ್ಯಾಸ. ಪರ್ಯಾಯವಾಗಿ ನೀವು ಗಿಡಮೂಲಿಕೆ ಚಹಾ, ಹಸಿರು ಚಹಾ ಅಥವಾ ನಿಂಬೆ ಚಹಾವನ್ನು ಸೇವನೆ ಮಾಡಬಹುದು.