ಜನ ತಾವು ಫಿಟ್ ಆ್ಯಂಡ್ ಫೈನ್ ಆಗಿ ಕಾಣಿಲು, ತೂಕ ಇಳಿಸಿಕೊಳ್ಳಲು ಜಿಮ್ಗೆ ಹೋಗಿ ಬೆವರಿಳಿಸುತ್ತಾರೆ. ಅದೇ ರೀತಿ ತುಂಬಾ ಕಡಿಮೆ ತೂಕ ಇರುವವರು ತೂಕ ಹೆಚ್ಚಿಸಿಕೊಳ್ಳುವುದು ಸುಲಭದ ಮಾತಲ್ಲ. ವರ್ಕ್ಔಟ್ ಮಾಡುವುದರಿಂದ ತೂಕ ಹೆಚ್ಚಾಗಲು ಸಹ ಸಹಾಯ ಮಾಡುತ್ತದೆ. ಆದರೆ ಇದಕ್ಕಾಗಿ ನೀವು ವ್ಯಾಯಾಮದ ಜೊತೆಗೆ ನಿಮ್ಮ ಆಹಾರಕ್ರಮವನ್ನು ಸಮೃದ್ಧಗೊಳಿಸಬೇಕು. ಆದರೆ ನೀವು ಸಣ್ಣ ಇದ್ದೀರಾ ಎಂದು ಚಿಂತಿಸಬಾರದು. ಬದಲಿಗೆ ಉತ್ತಮ ಆಕೃತಿಗಾಗಿ ಸ್ನಾಯುಗಳನ್ನು ಪಡೆಯಲು ಬಯಸಿದರೆ, ನಿಮ್ಮ ಆಹಾರದ ಜೊತೆಗೆ ಈ ಪದಾರ್ಥಗಳನ್ನು ಕೂಡ ಸೇವಿಸಿ.
ತುಪ್ಪದೊಂದಿಗೆ ಸಕ್ಕರೆಯ ಬಳಕೆ: ಸ್ಟೈಲ್ಕ್ರೀಸ್ನ ವರದಿಯ ಪ್ರಕಾರ, ನೀವು ಆರೋಗ್ಯಕರ ರೀತಿಯಲ್ಲಿ ತೂಕವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ ಸಕ್ಕರೆ ಮತ್ತು ತುಪ್ಪವು ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಒಂದು ಚಮಚ ತುಪ್ಪವನ್ನು ಒಂದು ಚಮಚ ಸಕ್ಕರೆಯೊಂದಿಗೆ ಬೆರೆಸಿ, ಈ ಮಿಶ್ರಣವನ್ನು ಊಟಕ್ಕೆ ಅರ್ಧ ಗಂಟೆಗೂ ಮುಂಚೆ ತಿನ್ನಿ. ಒಂದು ತಿಂಗಳವರೆಗೂ ಪ್ರತಿದಿನ ಹೀಗೆ ಮಾಡುವುದರಿಂದ ನಿಮ್ಮ ತೂಕವನ್ನು ವೇಗವಾಗಿ ಹೆಚ್ಚಿಸಿಕೊಳ್ಳಬಹುದು.
ಹಾಲಿನೊಂದಿಗೆ ಬಾಳೆಹಣ್ಣು ತಿನ್ನಿ: ಬೆಳಗಿನ ಉಪಾಹಾರಕ್ಕೆ ಒಂದು ಲೋಟ ಹಾಲಿನೊಂದಿಗೆ ಎರಡು ಬಾಳೆಹಣ್ಣುಗಳನ್ನು ತಿನ್ನಿ ಅಥವಾ ಮಿಲ್ಕ್ ಶೇಕ್ ಮಾಡಿ ಬೇಕಾದರೂ ಕುಡಿಯಬಹುದು. ಬಾಳೆಹಣ್ಣು ಮತ್ತು ಹಾಲನ್ನು ಸೇವಿಸುವುದರಿಂದ ದೇಹದಲ್ಲಿ ತ್ವರಿತ ವ್ಯತ್ಯಾಸವನ್ನು ಕಾಣಬಹುದು. ವಾಸ್ತವವಾಗಿ ಬಾಳೆಹಣ್ಣುಗಳು ಮತ್ತು ಹಾಲು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ, ಇದು ನಿಮ್ಮ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಅದು ನಿಮ್ಮನ್ನು ಬಲಶಾಲಿಯಾಗಿಸುತ್ತದೆ.
ಒಣ ಫ್ರೂಟ್ಸ್ ಸೇವಿಸುವುದು : ನೀವು ಕಡಲೆಕಾಯಿ, ಗೋಡಂಬಿ, ಬಾದಾಮಿ, ವಾಲ್ನಟ್, ಒಣದ್ರಾಕ್ಷಿ ಇತ್ಯಾದಿಗಳನ್ನು ಪ್ರತಿದಿನ ಸೇವಿಸಿದರೆ, ನೀವು ಹಲವಾರು ರೀತಿಯಲ್ಲಿ ಪ್ರಯೋಜನವನ್ನು ಪಡೆಯಬಹುದು. ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಬೆಳಗ್ಗೆ ಒಂದು ಹಿಡಿ ಡ್ರೈ ಫ್ರೂಟ್ಸ್ ತಿನ್ನುವುದರಿಂದ ದಪ್ಪ ಆಗಲು ಸಹಾಯ ಮಾಡುತ್ತದೆ. ಇವುಗಳನ್ನು ಸೇವಿಸುವುದರಿಂದ ನಿಮ್ಮ ದೌರ್ಬಲ್ಯವನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು.