ಇನ್ನೂ ಚಾಕಲೇಟ್ನಲ್ಲಿ ಕೇಕ್, ಬಿಸ್ಕೇಟ್, ಐಸ್ ಕ್ರೀಮ್ ಹೀಗೆ ನಾನಾ ರೀತಿಯ ತಿಂಡಿಗಳನ್ನು ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಎಂದಾದರೂ ಚಾಕಲೇಟ್ನಲ್ಲಿ ಜಾಮೂನ್ ಮಾಡಿರುವುದನ್ನು ಕೇಳಿದ್ದೀರಾ? ಹೌದು, ಸಾಮಾನ್ಯವಾಗಿ ಮೈದಾ ಮತ್ತು ಗೋಧಿ ಹಿಟ್ಟಿನಲ್ಲಿ ಜಾಮೂನ್ ಮಾಡುವುದು ಎಲ್ಲರಿಗೂ ತಿಳಿದಿದೆ. ಆದರೆ ಚಾಕಲೇಟ್ನಲ್ಲಿಯೂ ಗುಲಾಬ್ ಜಾಮೂನ್ ಮಾಡಬಹುದು. ಅದರಲ್ಲಿಯೂ ಈ ಜಾಮೂನ್ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.
ಇದೇ ವೇಳೆ ಮಿಕ್ಸಿಂಗ್ ಕಪ್ನಲ್ಲಿ ಮೈದಾ, ಕೋಕೋ ಪೌಡರ್, ಚಾಕೊಲೇಟ್ ಪೌಡರ್ ಮತ್ತು ಬೇಕಿಂಗ್ ಪೌಡರ್ ಅನ್ನು ಒಟ್ಟಿಗೆ ಮಿಶ್ರಣ ಮಾಡಿ. ಇದಕ್ಕೆ ಸ್ವಲ್ಪ ನೀರು ಮತ್ತು ಬೇಕಾದಷ್ಟು ತುಪ್ಪವನ್ನು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ. ಗುಲಾಬ್ ಜಾಮೂನ್ ಮಾಡುವ ಮಿಶ್ರಣ ಸಿದ್ಧವಾದ ನಂತರ ಈಗ, ಜಾಮೂನ್ ಅನ್ನು ಬೇಯಿಸಲು ಒಲೆಯ ಮೇಲೆ ಪ್ಯಾನ್ ಇಟ್ಟು, ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ.
ಎಣ್ಣೆ ಬಿಸಿಯಾದಾಗ, ಕಲಸಿದ ಹಿಟ್ಟನ್ನು ಸಣ್ಣ ಉಂಡೆಗಳಾಗಿ ತೆಗೆದುಕೊಂಡು ಎಣ್ಣೆಯಲ್ಲಿ ಕರಿಯಿರಿ. ಸಿದ್ಧಪಡಿಸಿದ ಸಕ್ಕರೆ ಪಾಕಕ್ಕೆ ಈ ಗೋಲ್ಡನ್ ಫ್ರೈಡ್ ಜಾಮೂನ್ ಉಂಡೆಗಳನ್ನು ಹಾಕಿ, 2 ಗಂಟೆಗಳ ಕಾಲ ನೆನೆಸಿ. ಇದೀಗ ರುಚಿಕರವಾದ ಚಾಕೊಲೇಟ್ ಗುಲೋಬ್ ಜಾಮೂನ್ ಸವಿಯಲು ಸಿದ್ಧ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)