Traveling Tips: ಕಾರಿನಲ್ಲಿ ಪ್ರಯಾಣಿಸುವಾಗ ನಿಮಗೆ ವಾಂತಿ ಬರುತ್ತಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

ಇಂದು ನಾವು ನಿಮಗೆ ಕೆಲವು ಟಿಪ್ಸ್​ಗಳನ್ನು ನೀಡುತ್ತೇವೆ. ಇದನ್ನು ಫಾಲೋ ಮಾಡುವುದರಿಂದ ನಿಮಗೆ ವಾಕರಿಕೆ ಆಗಲಿ ಅಥವಾ ವಾಂತಿ ಆಗಲಿ ಇನ್ಮುಂದೆ ಬರುವುದಿಲ್ಲ.

First published:

  • 17

    Traveling Tips: ಕಾರಿನಲ್ಲಿ ಪ್ರಯಾಣಿಸುವಾಗ ನಿಮಗೆ ವಾಂತಿ ಬರುತ್ತಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    ಸ್ನೇಹಿತರೊಂದಿಗೆ ಆಗಲಿ ಅಥವಾ ಕುಟುಂಬಸ್ಥರೊಂದಿಗೆ ಆಗಲಿ ಜನ ಹೆಚ್ಚಾಗಿ ಸುತ್ತಾಡಲು ಇಷ್ಟಪಡುತ್ತಾರೆ. ಆದರೆ ಕೆಲವರು ಮಾತ್ರ ಹೆಚ್ಚು ದೂರ ನಡೆದುಕೊಂಡು ಹೋಗಲು ಇಷ್ಟಪಡುವುದಿಲ್ಲ. ಎಲ್ಲಗಾದರೂ ಹೊರಗೆ ಹೋಗಬೇಕೆಂದರೆ ಅವರಲ್ಲಿ ಉತ್ಸಾಹ ಕಡಿಮೆ ಆಗುತ್ತದೆ. ಇನ್ನೂ ರೋಡ್ ಟ್ರಿಪ್ ಪ್ಲ್ಯಾನ್ ಮಾಡಿದಾಗಂತೂ ಕೆಲವರಿಗೆ ವಾಂತಿ ಮಾಡಿಕೊಳ್ಳುತ್ತಾರೆ ಎಂಬ ಆತಂಕ ಎದುರಾಗುತ್ತದೆ.

    MORE
    GALLERIES

  • 27

    Traveling Tips: ಕಾರಿನಲ್ಲಿ ಪ್ರಯಾಣಿಸುವಾಗ ನಿಮಗೆ ವಾಂತಿ ಬರುತ್ತಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    ಆದರೆ ಚಿಂತೆ ಬಿಡಿ, ಇಂದು ನಾವು ನಿಮಗೆ ಕೆಲವು ಟಿಪ್ಸ್ಗಳನ್ನು ನೀಡುತ್ತೇವೆ. ಇದನ್ನು ಫಾಲೋ ಮಾಡುವುದರಿಂದ ನಿಮಗೆ ವಾಕರಿಕೆ ಆಗಲಿ ಅಥವಾ ವಾಂತಿ ಆಗಲಿ ಇನ್ಮುಂದೆ ಬರುವುದಿಲ್ಲ.

    MORE
    GALLERIES

  • 37

    Traveling Tips: ಕಾರಿನಲ್ಲಿ ಪ್ರಯಾಣಿಸುವಾಗ ನಿಮಗೆ ವಾಂತಿ ಬರುತ್ತಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    ಹೌದು, ಪ್ರವಾಸಕ್ಕೆ ಹೊರಡುವ ಮುನ್ನ ನೀವು ವಾಂತಿ ನಿಯಂತ್ರಿಸುವ ಮಾತ್ರೆಯನ್ನು ಯಾವಾಗ ತೆಗೆದುಕೊಳ್ಳಬಹುದು ಎಂದು ತಿಳಿದುಕೊಳ್ಳಿ. ಈ ಔಷಧಿ ಸುಲಭವಾಗಿ ಅಂಗಡಿಗಳಲ್ಲಿ ಲಭ್ಯವಿದ್ದರೂ, ವೈದ್ಯರನ್ನು ಸಂಪರ್ಕಿಸಿದ ನಂತರ ಅದನ್ನು ತೆಗೆದುಕೊಳ್ಳುವುದು ಉತ್ತಮ.

    MORE
    GALLERIES

  • 47

    Traveling Tips: ಕಾರಿನಲ್ಲಿ ಪ್ರಯಾಣಿಸುವಾಗ ನಿಮಗೆ ವಾಂತಿ ಬರುತ್ತಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    ನೀವು ಕಾರಿನಲ್ಲಿ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳಿ. ಸಾಮಾನ್ಯವಾಗಿ ಹಿಂಭಾಗದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ. ಏಕೆಂದರೆ ಹಿಂಭಾಗದಲ್ಲಿ ಕುಳಿತುಕೊಂಡರೆ ವಾಹನ ಚಲನೆಯು ಕೆಟ್ಟದಾಗಿ ಅನಿಸಬಹುದು.

    MORE
    GALLERIES

  • 57

    Traveling Tips: ಕಾರಿನಲ್ಲಿ ಪ್ರಯಾಣಿಸುವಾಗ ನಿಮಗೆ ವಾಂತಿ ಬರುತ್ತಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    ತಾಜಾ ಗಾಳಿಯು ವಾಹನವನ್ನು ಪ್ರವೇಶಿಸಲು ಕಾರಿನ ಕಿಟಕಿಗಳನ್ನು ತೆರೆದಿಡಿ. ಪ್ರಯಾಣ ಮಾಡುವಾಗ ಸುಮ್ಮನಿರಬೇಡಿ, ನಿಮ್ಮನ್ನು ಬ್ಯುಸಿಯಾಗಿ ಇಟ್ಟುಕೊಳ್ಳಿ. ಹೊರಗೆ ನೋಡುತ್ತಾ ಮಾತನಾಡುತ್ತಾ ಇರಿ.

    MORE
    GALLERIES

  • 67

    Traveling Tips: ಕಾರಿನಲ್ಲಿ ಪ್ರಯಾಣಿಸುವಾಗ ನಿಮಗೆ ವಾಂತಿ ಬರುತ್ತಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    ಹೆಚ್ಚು ಹೊತ್ತು ಪ್ರಯಾಣಿಸುವ ಬದಲು ಮಧ್ಯೆ ಕಾರನ್ನು ನಿಲ್ಲಿಸಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ಪ್ರಯಾಣಕ್ಕೂ ಮುನ್ನ ಮತ್ತು ಪ್ರಯಾಣದ ಸಮಯದಲ್ಲಿ ಹೆಚ್ಚು ಊಟವನ್ನು ತಿನ್ನುವುದನ್ನು ತಪ್ಪಿಸಿ. ಜೊತೆಗೆ ಎಣ್ಣೆಯುಕ್ತ ಆಹಾರದ ಬದಲಿಗೆ ಸರಳವಾದ ಆಹಾರವನ್ನು ಸೇವಿಸುವುದು ಉತ್ತಮ.

    MORE
    GALLERIES

  • 77

    Traveling Tips: ಕಾರಿನಲ್ಲಿ ಪ್ರಯಾಣಿಸುವಾಗ ನಿಮಗೆ ವಾಂತಿ ಬರುತ್ತಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

    ಇದರೊಂದಿಗೆ ಟೋಫಿ, ಚೂಯಿಂಗ್ ಗಮ್ ಅಥವಾ ಹಜ್ಮೋಲಾವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ ಮತ್ತು ತಿನ್ನುವುದನ್ನು ಮುಂದುವರಿಸಿ.(Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES