ಅನಾನುಕೂಲಗಳನ್ನು ಮಕ್ಕಳಿಗೆ ತಿಳಿಸಿ: ಮೊಬೈಲ್ ಹೆಚ್ಚಾಗಿ ಬಳಸುವುದರಿಂದ ಆಗುವ ಅನಾನುಕೂಲಗಳನ್ನು ಮಕ್ಕಳಿಗೆ ಹಂತ ಹಂತವಾಗಿ ತಿಳಿಸಬೇಕು. ಅದು ಕೂಡ ಅವರಿಗೆ ಅರ್ಥವಾಗುವ ವಿಧಾನಗಳ ಮೂಲಕ ತಿಳಿಸಬೇಕು. ಜಾಸ್ತಿ ಮೊಬೈಲ್ ಬಳಕೆಯಿಂದ ಕಣ್ಣು ಬೇಗ ಹಾಳಾಗುತ್ತದೆ, ಮೆದುಳು ಹಾಳಾಗುವುದರ ಬಗ್ಗೆ ಹೀಗೆ ಇನ್ನಿತರ ಉದಾಹರಣೆಗಳ ಮೂಲಕ ಮಕ್ಕಳಿಗೆ ತಿಳಿಸಬೇಕು. ಖಂಡಿತವಾಗಿಯೂ ಈ ಟ್ರಿಕ್ಸ್ ಸಕ್ಸಸ್ ಆಗೇ ಆಗುತ್ತೆ.
ಇನ್ನಿತರ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿ. ಕೇವಲ ಮೊಬೈಲ್ ಒಂದೇ ಜಗತ್ತಲ್ಲ. ಇದರ ಹೊರತಾಗಿಯೂ ಅದ್ಭುತ ಜಗತ್ತೊಂದಿದೆ ಎಂಬುದನ್ನು ಮಕ್ಕಳಿಗೆ ತಿಳಿಸಬೇಕು. ಜೊತೆಗೆ ಒಂದು ವೇಳಾಪಟ್ಟಿಯನ್ನು ಪೋಷಕರೇ ರಚಿಸಿ, ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಿ. ಉದಾಹರಣೆಗೆ, ಕ್ರೀಡೆ, ಚಿತ್ರಕಲೆ, ವಾಕಿಂಗ್ ಹೀಗೆ ಇನ್ನಿತರ ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಹಾಗೆ ಪೋಷಕರು ಮಾಡಬೇಕು.