ನಿಮ್ಮ ಜೊತೆ ನೀವೇ ಮಾತನಾಡಿ: ಸಿಟ್ಟು ಬಂದ ತಕ್ಷಣ ನಿಮಗೆ ನೀವೇ 'ಇದೇನು ದೊಡ್ಡ ವಿಷಯವಲ್ಲ, ರಿಲ್ಯಾಕ್ಸ್' ಈ ರೀತಿಯ ಮಾತುಗಳನ್ನು ಆಡಿ. ಅವಾಗ ಕೋಪ ತಾನಾಗಿಯೇ ಕಂಟ್ರೋಲ್ ಗೆ ಬರುತ್ತದೆ. ಸಿಟ್ಟು ಬಂದೊಡನೆ ನಿಮಗೆ ನೀವೇ 'ಇದೇನು ದೊಡ್ಡ ವಿಷಯವಲ್ಲ, ರಿಲ್ಯಾಕ್ಸ್' ಎಂದೋ, 'ಇದೆಲ್ಲ ತಾತ್ಕಾಲಿಕವಷ್ಟೇ, ಆರಾಮಾಗಿ ತೆಗೆದುಕೊಳ್ತೀನಿ, ಕಂಟ್ರೋಲ್' ಎಂದೆಲ್ಲ ಹೇಳಿಕೊಳ್ಳುತ್ತಿದ್ದರೆ ಮನಸ್ಸು ತಹಬಂದಿಗೆ ಬರುತ್ತದೆ.