Summer Hacks: ಬೆವರಿನ ವಾಸನೆಯಿಂದ ಮುಕ್ತಿ ಪಡೆಯಲು ಈ ಸಿಂಪಲ್ ವಿಧಾನ ಬಳಸಿ ಸಾಕು

Tips to Remove Sweat Smell From Clothes: ಬೇಸಿಗೆ ಕಾಲದಲ್ಲಿ ಬೆವರುವುದು ಸಾಮಾನ್ಯ. ಸುಡುವ ಬಿಸಿಲಿನಿಂದ ಕೆಲವರಿಗೆ ವಿಪರೀತ ಬೆವರು ಬರುತ್ತದೆ. ಬೆವರಿನಿಂದಾಗಿ ಬಟ್ಟೆಯ ಮೇಲೆ ಬಿಳಿ ಗುರುತುಗಳು ಸಹ ರೂಪುಗೊಳ್ಳುತ್ತವೆ. ಸಾಕಷ್ಟು ಪ್ರಯತ್ನಗಳ ನಂತರವೂ, ವಾಸನೆಯ ಬೆವರಿನ ಕಲೆಯು ಬಟ್ಟೆಯಿಂದ ಹೋಗುವುದೇ ಇಲ್ಲ. ಕೆಲವು ಸುಲಭವಾದ ಟಿಪ್ಸ್ ಸಹಾಯದಿಂದ ಬಟ್ಟೆಗಳನ್ನು ಸ್ವಚ್ಛಗೊಳಿಸಬಹುದು, ವಾಸನೆಯಿಂದ ಮುಕ್ತಿ ಪಡೆಯಬಹುದು.

First published:

  • 17

    Summer Hacks: ಬೆವರಿನ ವಾಸನೆಯಿಂದ ಮುಕ್ತಿ ಪಡೆಯಲು ಈ ಸಿಂಪಲ್ ವಿಧಾನ ಬಳಸಿ ಸಾಕು

    ನಿಂಬೆ ಬಳಸಿ: ಬಟ್ಟೆಯಿಂದ ಬೆವರು ಕಲೆಗಳನ್ನು ತೆಗೆದುಹಾಕಲು ನಿಂಬೆ ರಸವನ್ನು ಬಳಸಬಹುದು. ಇದಕ್ಕಾಗಿ ನೀರಿನಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ಕಲೆ ಇರುವ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಶುದ್ಧ ನೀರಿನಿಂದ ತೊಳೆಯಿರಿ.

    MORE
    GALLERIES

  • 27

    Summer Hacks: ಬೆವರಿನ ವಾಸನೆಯಿಂದ ಮುಕ್ತಿ ಪಡೆಯಲು ಈ ಸಿಂಪಲ್ ವಿಧಾನ ಬಳಸಿ ಸಾಕು

    ಅಡಿಗೆ ಸೋಡಾ ಬಳಸಿ: ಅಡಿಗೆ ಸೋಡಾವನ್ನು ಬಳಸಿ ನೀವು ಬಟ್ಟೆಯ ಮೇಲಿನ ಕಲೆಗಳನ್ನು ತೆಗೆದುಹಾಕಬಹುದು. ಇದಕ್ಕಾಗಿ ಬೇಕಿಂಗ್ ಸೋಡಾದಲ್ಲಿ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈಗ ಈ ಪೇಸ್ಟ್ ಅನ್ನು ಬೆವರು ಕಲೆಯ ಮೇಲೆ ಹಚ್ಚಿ. ಒಣಗಿದ ನಂತರ, ಶುದ್ಧ ನೀರಿನಿಂದ ಬಟ್ಟೆಯನ್ನು ತೊಳೆಯಿರಿ.

    MORE
    GALLERIES

  • 37

    Summer Hacks: ಬೆವರಿನ ವಾಸನೆಯಿಂದ ಮುಕ್ತಿ ಪಡೆಯಲು ಈ ಸಿಂಪಲ್ ವಿಧಾನ ಬಳಸಿ ಸಾಕು

    ಲಿಕ್ವಿಡ್ ಸೋಪ್ ಬಳಸಿ: ಕೆಲವೇ ನಿಮಿಷಗಳಲ್ಲಿ ಬೆವರು ಕಲೆಗಳನ್ನು ತೊಡೆದುಹಾಕಬಹುದು. ಇದಕ್ಕಾಗಿ, ಮೊದಲು ಉಗುರು ಬೆಚ್ಚಗಿನ ನೀರಿನಲ್ಲಿ ಬಟ್ಟೆಯನ್ನು ನೆನೆಸಿ. ನಂತರ ಬಟ್ಟೆಯ ಮೇಲೆ ಲಿಕ್ವಿಡ್ ಡಿಟರ್ಜೆಂಟ್ ಹಚ್ಚಿ 5-10 ನಿಮಿಷಗಳ ನಂತರ ಬಟ್ಟೆಯನ್ನು ಉಜ್ಜಿ ತೊಳೆಯಿರಿ.

    MORE
    GALLERIES

  • 47

    Summer Hacks: ಬೆವರಿನ ವಾಸನೆಯಿಂದ ಮುಕ್ತಿ ಪಡೆಯಲು ಈ ಸಿಂಪಲ್ ವಿಧಾನ ಬಳಸಿ ಸಾಕು

    ಬಿಳಿ ವಿನೆಗರ್ : ಬಿಳಿ ವಿನೆಗರ್ ಬಳಕೆಯು ಬಟ್ಟೆ ಮೇಲಿನ ಬೆವರು ಕೆಲಗಳನ್ನು ತೊಡೆದುಹಾಕಲು ಸಹ ಉತ್ತಮವಾಗಿದೆ. ಇದಕ್ಕಾಗಿ, 1 ಟೀಚಮಚ ವಿನೆಗರ್ನಲ್ಲಿ ಸ್ವಲ್ಪ ಬೆಚ್ಚಗಿನ ನೀರನ್ನು ಹಾಕಿ. ಈಗ ಕಲೆಯನ್ನು ಈ ನೀರಿನಲ್ಲಿ ನೆನೆಸಿಡಿ. ಬಟ್ಟೆಯ ಮೇಲಿನ ಗುರುತು ಸ್ವಲ್ಪ ಸಮಯದ ನಂತರ ಕಣ್ಮರೆಯಾಗುತ್ತದೆ.

    MORE
    GALLERIES

  • 57

    Summer Hacks: ಬೆವರಿನ ವಾಸನೆಯಿಂದ ಮುಕ್ತಿ ಪಡೆಯಲು ಈ ಸಿಂಪಲ್ ವಿಧಾನ ಬಳಸಿ ಸಾಕು

    ಮೌತ್ ವಾಶ್ ಬಳಸಿ: ಬಟ್ಟೆಯಿಂದ ಬೆವರಿನ ಕಲೆ ಮತ್ತು ವಾಸನೆಯನ್ನು ಹೋಗಲಾಡಿಸಲು ನೀವು ಮೌತ್ ವಾಶ್ ಅನ್ನು ಕೂಡ ಬಳಸಬಹುದು. ಇದಕ್ಕಾಗಿ ಎರಡು ಮುಚ್ಚಳಗಳ ಮೌತ್ ವಾಶ್ ಅನ್ನು ಎರಡು ಮಗ್ ನೀರಿನಲ್ಲಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣದಲ್ಲಿ ಬಟ್ಟೆಯ ಮೇಲೆ ಕಲೆಯಾದ ಜಾಗವನ್ನು ಅದ್ದಿ ಮತ್ತು 15 ನಿಮಿಷಗಳ ಕಾಲ ಬಿಡಿ. ನಂತರ ಸಾಮಾನ್ಯ ರೀತಿಯಲ್ಲಿ ಬಟ್ಟೆಯನ್ನು ತೊಳೆಯಿರಿ.

    MORE
    GALLERIES

  • 67

    Summer Hacks: ಬೆವರಿನ ವಾಸನೆಯಿಂದ ಮುಕ್ತಿ ಪಡೆಯಲು ಈ ಸಿಂಪಲ್ ವಿಧಾನ ಬಳಸಿ ಸಾಕು

    ವಾಷಿಂಡ್ ಸೋಡಾ ಬಳಸಬಹುದು: ಇದನ್ನು ಸೋಡಿಯಂ ಕಾರ್ಬೋನೇಟ್ ಎಂದೂ ಕರೆಯುತ್ತಾರೆ. ಬಟ್ಟೆಯ ಮೇಲಿನ ಕಲೆಗಳನ್ನು ತೆಗೆದುಹಾಕಲು, 2 ಚಮಚ ಸೋಡಾದಲ್ಲಿ ಸ್ವಲ್ಪ ನೀರು ಬೆರೆಸಿ ಪೇಸ್ಟ್ ಮಾಡಿ. ನಂತರ ಅದನ್ನು ಕಲೆ ಇರುವ ಜಾಗಕ್ಕೆ ಹಚ್ಚಿ ಇಪ್ಪತ್ತು ನಿಮಿಷಗಳ ಕಾಲ ಬಿಡಿ. ನಂತರ ಸಾಮಾನ್ಯ ರೀತಿಯಲ್ಲಿ ಬಟ್ಟೆಗಳನ್ನು ತೊಳೆಯಿರಿ.

    MORE
    GALLERIES

  • 77

    Summer Hacks: ಬೆವರಿನ ವಾಸನೆಯಿಂದ ಮುಕ್ತಿ ಪಡೆಯಲು ಈ ಸಿಂಪಲ್ ವಿಧಾನ ಬಳಸಿ ಸಾಕು

    ಆಸ್ಪಿರಿನ್ ಸಹಾಯವನ್ನು ತೆಗೆದುಕೊಳ್ಳಿ: ಬಟ್ಟೆಗಳ ಮೇಲಿನ ಬೆವರಿನ ವಾಸನೆಯ ಕಲೆಗಳನ್ನು ತೆಗೆದುಹಾಕಲು, ಒಂದು ಕಪ್ ಬೆಚ್ಚಗಿನ ನೀರಿನಲ್ಲಿ 2 ಮಾತ್ರೆಗಳ ಆಸ್ಪಿರಿನ್ ಅನ್ನು ಮಿಶ್ರಣ ಮಾಡಿ. ನಂತರ ಹಳೆಯ ಬ್ರಶ್ ಸಹಾಯದಿಂದ ಈ ಮಿಶ್ರಣವನ್ನು ಕಲೆ ಇರುವ ಜಾಗಕ್ಕೆ ಹಚ್ಚಿ 20 ನಿಮಿಷ ಹಾಗೆಯೇ ಬಿಡಿ. ನಂತರ ಸಾಮಾನ್ಯ ಬಟ್ಟೆ ಸೋಪಿನಿಂದ ತೊಳೆಯಿರಿ.

    MORE
    GALLERIES