ಮನೆಯಲ್ಲಿ ಬೆಳ್ಳಿ ವಸ್ತುಗಳನ್ನು ಸ್ವಚ್ಛಗೊಳಿಸಲು ಕೆಚಪ್ ಅನ್ನು ಸಹ ನೀವು ಬಳಸಬಹುದು. ನೀವು ಕೇವಲ ಒಂದು ಸಣ್ಣ ಪ್ರಮಾಣದ ಕೆಚಪ್ ಅನ್ನು ಪೇಪರ್ ಟವೆಲ್ ಮೇಲೆ ಹಾಕಬೇಕು, ನಂತರ ಪಾತ್ರೆಗಳ ಮೇಲೆ ನಿಧಾನವಾಗಿ ಉಜ್ಜಬೇಕು. ಒಂದು ವೇಳೆ, ನಿಮ್ಮ ಬೆಳ್ಳಿಯು ಹೊಳಪು ಪಡೆಯದಿದ್ದರೆ, ಕೆಚಪ್ ಅನ್ನು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ಮೃದುವಾದ ಬಟ್ಟೆಯಿಂದ ಉಜ್ಜಿ ಮತ್ತು ಸ್ವಚ್ಛವಾಗಿ ತೊಳೆಯಿರಿ.
ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಲು ಇದು ಜನಪ್ರಿಯ ಮತ್ತು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ನಿಮ್ಮ ಬೆಳ್ಳಿಯ ಆಭರಣಗಳು ಹಳದಿ ಅಥವಾ ಕಪ್ಪು ಬಣ್ಣಕ್ಕೆ ತಿರುಗಿದರೆ ನೀವು ಈ ಸರಳ ವಿಧಾನವನ್ನು ಬಳಸಬಹುದು. ಇದಕ್ಕೆ ನೀವು ಯಾವುದೇ ದುಬಾರಿ ಉತ್ಪನ್ನವನ್ನು ಖರೀದಿಸುವ ಅಗತ್ಯವಿಲ್ಲ, ಮೊದಲು, ನೀರನ್ನು ಕುದಿಸಿ 1 ಚಮಚ ಅಡಿಗೆ ಸೋಡಾವನ್ನು ಸೇರಿಸಿ ಅದರಿಂದ ಪಾತ್ರೆಯನ್ನು ಉಜ್ಜಿದರೆ, 30 ನಿಮಿಷಗಳ ಒಳಗೆ ಪಾತ್ರೆ ಹೊಳೆಯುತ್ತದೆ.