ಎಸಿ ಕ್ಲೀನ್ ಮಾಡುವುದೇಗೆ? ಎಸಿ ಸ್ವಚ್ಛಗೊಳಿಸಲು ಮುಂದಾದಾಗ ಮೊದಲು ವಿದ್ಯುತ್ ಪೂರೈಕೆಯನ್ನು ಸ್ವಿಚ್ ಆಫ್ ಮಾಡಬೇಕು. ಈಗ AC ಪ್ಯಾನೆಲ್ ತೆರೆಯಿರಿ ಮತ್ತು ಫಿಲ್ಟರ್ ತೆಗೆದುಹಾಕಿ. ನಿಮ್ಮ AC ಒಂದಕ್ಕಿಂತ ಹೆಚ್ಚು ಫಿಲ್ಟರ್ಗಳನ್ನು ಹೊಂದಿದ್ದರೆ, ಅವುಗಳನ್ನು ಒಂದೊಂದಾಗಿ ಡಿಸ್ಅಸೆಂಬಲ್ ಮಾಡಿ. ಹೊಸ ಟೂತ್ ಬ್ರಷ್ ಅನ್ನು ತೆಗೆದುಕೊಳ್ಳಿ ಮತ್ತು ವೇಪರೈಸರ್ನಿಂದ ಧೂಳನ್ನು ನಿಧಾನವಾಗಿ ತೆಗೆದುಹಾಕಿ. ಇದನ್ನು ಮಾಡುವಾಗ ತುಂಬಾ ಜಾಗರೂಕರಾಗಿರಿ. ಕ್ಲೀನ್ ಮಾಡುವ ಭರದಲ್ಲಿ ತಂತಿಗಳು ಸಡಿಲಗೊಳ್ಳಬಹುದು.