Happy Valentine’s Week 2022: ಪ್ರೇಮಿಗಳ ದಿನಕ್ಕೂ ಮುಂಚೆ ಈ ದಿನಗಳನ್ನು ಮಿಸ್ ಮಾಡ್ದೇ ಆಚರಿಸಿ
Valentines Day Week
ಪ್ರೇಮಿಗಳ ದಿನವನ್ನು ಸೇಂಟ್ ವ್ಯಾಲೆಂಟೈನ್ಸ್ ಡೇ ಎಂದೂ ಕರೆಯಲಾಗುತ್ತದೆ. ಇದು ಪ್ರತಿ ವರ್ಷ ಫೆಬ್ರವರಿ 14 ರಂದು ನಡೆಯುತ್ತದೆ.ಪ್ರಪಂಚದಾದ್ಯಂತ ಇದನ್ನು ಪ್ರೀತಿಯ ಸಂಕೇತವಾಗಿ ಆಚರಿಸಲಾಗುತ್ತದೆ. ಆದರೆ, ಇದನ್ನು ವಾರವಿಡೀ ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತಿದ್ದಾರೆ. ಫೆಬ್ರವರಿ 7 ರಿಂದ ರೋಸ್ ಡೇ ಫೆಬ್ರವರಿ 14 ರವರೆಗೆ ಪ್ರೇಮಿಗಳ ದಿನವನ್ನು ವಾರವಿಡೀ ವಿವಿಧ ವಿಶೇಷ ದಿನಗಳಾಗಿ ಆಚರಿಸಲಾಗುತ್ತದೆ. ಆ ವಿಶೇಷ ದಿನಗಳ ಬಗ್ಗೆ ಮಾಹಿತಿ ಇಲ್ಲಿದೆ
ಫೆಬ್ರವರಿ 7 –ರೋಸ್ ಡೇ : ಗುಲಾಬಿ ದಿನದಂದು ನಿಮ್ಮ ನೆಚ್ಚಿನ ಗುಲಾಬಿಗಳನ್ನು ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು.
2/ 8
ಫೆಬ್ರವರಿ 8-ಪ್ರಪೋಸ್ ಡೇ : ಇಂದು ನೀವು ಪ್ರೀತಿಸುವವರಿಗೆ ಪ್ರಪೋಸ್ ಮಾಡಲು ಸೂಕ್ತವಾದ ದಿನ ಎನ್ನಲಾಗುತ್ತದೆ.
3/ 8
ಫೆಬ್ರವರಿ 9 -ಚಾಕೊಲೇಟ್ ಡೇ : ಚಾಕೊಲೇಟ್ಗಳನ್ನು ಯಾರು ಇಷ್ಟಪಡುವುದಿಲ್ಲ ಹೇಳಿ? ನೀವು ಇಂದು ನಿಮ್ಮ ಪ್ರೀತಿಪಾತ್ರರಿಗೆ ಚಾಕಲೇಟ್ ಬಾಕ್ಸ್ ಅನ್ನು ಉಡುಗೊರೆಯಾಗಿ ನೀಡಬಹುದು.
4/ 8
ಫೆಬ್ರವರಿ 10 –ಪ್ರಾಮಿಸ್ ಡೇ : ಪ್ರಾಮಿಸ್ ದಿನದಂದು, ಇಬ್ಬರೂ ಒಟ್ಟಿಗೆ ಜೀವನದುದ್ದಕ್ಕೂ ಜೊತೆ ಇರುವ ಭರವಸೆಯನ್ನು ನೀಡಬಹುದು, ಅದಕ್ಕೇ ಈ ದಿನ ವಿಶೇಷ..
5/ 8
ಫೆಬ್ರವರಿ 11 -ಟೆಡ್ಡಿ ಡೇ : ಟೆಡ್ಡಿ ಎಂದರೆ ನಿಮ್ಮ ಪ್ರಿಯತಮೆ ಖಂಡಿತವಾಗಿ ಇಷ್ಟಪಡುತ್ತಾರೆ. ಆದ್ದರಿಂದ ಈ ವಿಶೇಷ ದಿನದಂದು ಟೆಡ್ಡಿಯನ್ನ ಉಡುಗೊರೆಯನ್ನು ನೀಡಿ.
6/ 8
ಫೆಬ್ರವರಿ 12 -ಅಪ್ಪುಗೆಯ ದಿನ : ಈ ವಿಶೇಷ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಅಪ್ಪುಗೆಯನ್ನು ನೀಡಿ. ಅವರನ್ನು ತಬ್ಬಿಕೊಂಡು ನಿಮ್ಮ ಕಷ್ಟ ಮತ್ತು ಸುಖದ ಬಗ್ಗೆ ಮಾತನಾಡಿ.
7/ 8
ಫೆಬ್ರವರಿ 13 -ಕಿಸ್ ಡೇ :ಈ ವಾರವನ್ನೆಲ್ಲ ಪ್ರೀತಿಗಾಗಿ ಮೀಸಲಿಟ್ಟ ಮೇಲೆ ಮುತ್ತು ಕೊಟ್ಟು ಪ್ರೀತಿ ವ್ಯಕ್ತಪಡಿಸುವುದು ತಪ್ಪಿಲ್ಲ.
8/ 8
ಫೆಬ್ರವರಿ 14 - ಪ್ರೇಮಿಗಳ ದಿನ .. ಇಂದು ಶುಭಾಶಯ ಪತ್ರಗಳು, ಹೂವುಗಳು, ಯಾವುದೇ ಉಡುಗೊರೆಯನ್ನು ನೀಡಿ ಮತ್ತು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಇಂದು ನೀವು ನಿಮ್ಮ ನೆಚ್ಚಿನ ದೇವಾಲಯಕ್ಕೆ ಹೋಗಬಹುದು. ಡೇಟಿಂಗ್ ಕೂಡ ಪ್ಲಾನ್ ಮಾಡಬಹುದು.