ಅಷ್ಟಕ್ಕೂ ಮೀನು ಕೊಳ್ಳುವಾಗ ಇದು ಒಳ್ಳೆಯ ಮೀನು ಅಥವಾ ತಾಜಾ ಮೀನು ಎಂಬುವುದನ್ನು ಪರಿಶೀಲಿಸುವುದು ಹೇಗೆ ಎಂಬ ಬಗ್ಗೆ ನಿಮಗೆ ತಿಳಿದಿದ್ಯಾ? ಏಕೆಂದರೆ ಮೀನಿನ ಬೇಡಿಕೆಗೆ ಅನುಗುಣವಾಗಿ ಅದರ ಕಲಬೆರಕೆಯೂ ಹೆಚ್ಚು. ಅದರಲ್ಲೂ ಎರಡು ಮೂರು ದಿನಗಳ ಕಾಲ ಐಸ್ ಕ್ಯೂಬ್ ಇರುವ ಬಾಕ್ಸ್ ಗಳಲ್ಲಿ ಮೀನು ಇಟ್ಟು ನಂತರ ಮಾರಾಟ ಮಾಡುವುದನ್ನು ಕಾಣಬಹುದು. ಹಾಗೇ ತಿನ್ನುವುದರಿಂದ ಆಹಾರ ವಿಷವಾಗುತ್ತದೆ. ಹಾಗಾದರೆ ಉತ್ತಮ ಮೀನುಗಳನ್ನು ಹೇಗೆ ಖರೀದಿಸುವುದು ಎಂದು ನೋಡೋಣ.