ಸಾಮಾನ್ಯವಾಗಿ ಜೋಡಿಗಳು ಮತ್ತು ರಿಲೇಶನ್ ಶಿಪ್ನಲ್ಲಿರುವವರು ಮಾತ್ರ ವ್ಯಾಲೆಂಟೈನ್ಸ್ ಡೇಯನ್ನು ಸೆಲೆಬ್ರೇಟ್ ಮಾಡುತ್ತಾರೆ ಎಂದು ಜನ ಹೇಳುತ್ತಾರೆ. ಆದರೆ ವಾಸ್ತವವಾಗಿ ಪ್ರೇಮಿಗಳ ದಿನ ಪ್ರೀತಿಯ ಹಬ್ಬವಾಗಿದೆ. ಹಾಗಾಗಿ ವ್ಯಾಲೆಂಟೈನ್ಸ್ ಡೇಯನ್ನು ನೀವು ರಿಲೇಶನ್ ಶಿಪ್ನಲ್ಲಿ ಇಲ್ಲವಾದರೂ ಆಚರಿಸಬಹುದು. ಪ್ರೇಮಿಗಳ ದಿನಚನ್ನು ಆಚರಿಸಲು ಸಿಂಗಲ್ಸ್ಗಳಿಗಾಗಿ ಕೆಲವು ಟಿಪ್ಸ್ ಈ ಕೆಳಗಿನಂತಿದೆ.
ಕುಟುಂಬ ಪ್ರವಾಸವನ್ನು ಯೋಜಿಸಿ : ಕುಟುಂಬದೊಂದಿಗೆ ಪ್ರೇಮಿಗಳ ದಿನವನ್ನು ಆಚರಿಸುವುದು ಸಹ ಅತ್ಯುತ್ತಮ ಆಯ್ಕೆಯಾಗಿದೆ. ನೀವು ಪ್ರೇಮಿಗಳ ದಿನದಂದು ಕುಟುಂಬದೊಂದಿಗೆ ಪಿಕ್ನಿಕ್ಗೆ ಪ್ಲ್ಯಾನ್ ಮಾಡಬಹು. ಅಲ್ಲದೇ, ಪ್ರೇಮಿಗಳ ದಿನದಂದು, ನೀವು ಕುಟುಂಬದೊಂದಿಗೆ ಮೀಟಿಂಗ್ ಯೋಜಿಸಬಹುದು ಅಥವಾ ರಾತ್ರಿ ಡಿನ್ನರ್ಗೆ ಹೋಗಬಹುದು. ಅದೇ ಸಮಯದಲ್ಲಿ ಕುಟುಂಬದ ಮೇಲಿನ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಕುಟುಂಬದ ಎಲ್ಲಾ ಸದಸ್ಯರಿಗೆ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹೇಳಬಹುದು. (ಸಾಂಕೇತಿಕ ಚಿತ್ರ)