Pineapple And Arthritis: ಅನಾನಸ್​ ತಿನ್ನುವುದರಿಂದ ಸಂಧಿವಾತ ಸಮಸ್ಯೆ ದೂರವಾಗುತ್ತಾ?

ಇತ್ತೀಚಿನ ದಿನಗಳಲ್ಲಿ ಸಂಧಿವಾತ ಸಮಸ್ಯೆ ಹೆಚ್ಚಿದೆ. ಎಲ್ಲಾ ವಯೋಮಾನದವರು ಸಂಧಿವಾತ ಸಮಸ್ಯೆ ಎದುರಿಸುತ್ತಿದ್ದಾರೆ. ಕೀಲುಗಳಲ್ಲಿ ನೋವು ಅಥವಾ ಉರಿಯೂತ ಉಂಟಾಗುವುದೇ ಸಂಧಿವಾತ ಆಗಿದೆ. ವಯಸ್ಸಾದಂತೆ ಮೂಳೆಗಳು ವೀಕ್ ಆಗುತ್ತವೆ. ಇದು ಮೊಣಕಾಲು ನೋವಿನ ಸಮಸ್ಯೆಗೆ ಕಾರಣವಾಗುತ್ತದೆ. ಇದನ್ನು ನಿಯಂತ್ರಿಸಲು ಅನಾನಸ್ ಸಹಕಾರಿಯಂತೆ.

First published:

  • 18

    Pineapple And Arthritis: ಅನಾನಸ್​ ತಿನ್ನುವುದರಿಂದ ಸಂಧಿವಾತ ಸಮಸ್ಯೆ ದೂರವಾಗುತ್ತಾ?

    ಅನಾನಸ್ ಜ್ಯೂಸ್‌ ಸೇವನೆ ಸಂಧಿವಾತ ಸಮಸ್ಯೆ ನಿವಾರಣೆಗೆ ಸಹಕಾರಿ. ಇದು ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ ಅಂಶ ಹೊಂದಿದೆ. ಅನಾನಸ್ ರಸವು ಬೀಟಾ-ಕ್ಯಾರೋಟಿನ್, ವಿಟಮಿನ್ ಎ ಹೊಂದಿದೆ. ಇದು ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಡಿಮೆ ಮಾಡುತ್ತದೆ. ಅಸ್ಥಿಸಂಧಿವಾತ ಮತ್ತು ರುಮಟಾಯ್ಡ್ ಸಂಧಿವಾತ ಕಡಿಮೆ ಮಾಡಲು ಸಹಕಾರಿ.

    MORE
    GALLERIES

  • 28

    Pineapple And Arthritis: ಅನಾನಸ್​ ತಿನ್ನುವುದರಿಂದ ಸಂಧಿವಾತ ಸಮಸ್ಯೆ ದೂರವಾಗುತ್ತಾ?

    ರಕ್ತದಲ್ಲಿ ಹೆಚ್ಚಿನ ಯೂರಿಕ್ ಆಮ್ಲವು ಇದು ಯೂರಿಕ್ ಆಸಿಡ್ ಸ್ಫಟಿಕಗಳ ರಚನೆ ಉಂಟು ಮಾಡುತ್ತದೆ. ಇದು ಗೌಟ್ ಸಮಸ್ಯೆ ಹೆಚ್ಚಿಸುತ್ತದೆ. ಸಂಧಿವಾತದಲ್ಲಿ ತೀವ್ರವಾದ ನೋವು ಇರುತ್ತದೆ. ತಜ್ಞರು ಆಹಾರದಲ್ಲಿ ಅನಾನಸ್ ಸೇರಿಸುವಂತೆ ತಿಳಿಸುತ್ತಾರೆ. ಇದು ಸಂಧಿವಾತದ ನೋವನ್ನು ನಿವಾರಿಸುತ್ತದೆ.

    MORE
    GALLERIES

  • 38

    Pineapple And Arthritis: ಅನಾನಸ್​ ತಿನ್ನುವುದರಿಂದ ಸಂಧಿವಾತ ಸಮಸ್ಯೆ ದೂರವಾಗುತ್ತಾ?

    ಸಂಧಿವಾತ ಸಮಸ್ಯೆಗೆ ಹಲವು ಕಾರಣಗಳಿವೆ. ಆನುವಂಶಿಕ ಕಾರಣವೂ ಒಂದು. ಪೋಷಕಾಂಶದ ಕೊರತೆ, ಕ್ಯಾಲ್ಸಿಯಂ ಕೊರತೆ, ಮೂಳೆಗಳ ದುರ್ಬಲತೆ, ಚಯಾಪಚಯ ದರದಲ್ಲಿ ಬದಲಾವಣೆ, ಬೊಜ್ಜು ಸಂಧಿವಾತಕ್ಕೆ ಕಾರಣವಾಗಿದೆ. ಸಂಧಿವಾತ ಸಮಸ್ಯೆ ಕಡಿಮೆ ಮಾಡಲು ಅನಾನಸ್ ಸೇವಿಸಿ ಅಂತಾರೆ ವೈದ್ಯರು.

    MORE
    GALLERIES

  • 48

    Pineapple And Arthritis: ಅನಾನಸ್​ ತಿನ್ನುವುದರಿಂದ ಸಂಧಿವಾತ ಸಮಸ್ಯೆ ದೂರವಾಗುತ್ತಾ?

    ಅನಾನಸ್ ನಲ್ಲಿ ಬ್ರೋಮೆಲಿನ್ ಎಂಬ ಅಂಶವಿದೆ. ಇದು ಸಂಧಿವಾತ ಸಮಸ್ಯೆ ನಿವಾರಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಪ್ರಯೋಗದಲ್ಲಿ ಬ್ರೊಮೊಲಿನ್ ಉರಿಯೂತದ ಔಷಧ ಡಿಕ್ಲೋಫೆನಾಕ್ ಸೇವನೆ ಮಾಡಿದ ಜನರಲ್ಲಿ ಸಂಧಿವಾತ ಸಮಸ್ಯೆ ಕಡಿಮೆ ಆಗಿರುವುದು ಕಮಡು ಬಂದಿದೆ.

    MORE
    GALLERIES

  • 58

    Pineapple And Arthritis: ಅನಾನಸ್​ ತಿನ್ನುವುದರಿಂದ ಸಂಧಿವಾತ ಸಮಸ್ಯೆ ದೂರವಾಗುತ್ತಾ?

    ಸಂಧಿವಾತ ಕಡಿಮೆ ಮಾಡಲು ಅನಾನಸ್ ತಿನ್ನಲು ತಜ್ಞರು ಏಕೆ ಸಲಹೆ ನೀಡುತ್ತಿದ್ದಾರೆಂದರೆ ಇದರಲ್ಲಿ ಬ್ರೋಮೆಲಿನ್ ಅಂಶವಿದೆ. ಇದು ಕಿಣ್ವಗಳ ಗುಂಪಿನ ಬ್ರೋಮೆಲಿನ್ ಹೊಂದಿದೆ. ಇದು ಉರಿಯೂತದ ಮತ್ತು ನೋವು ನಿವಾರಕ ಗುಣಲಕ್ಷಣ ಹೊಂದಿದೆ. ಅಸ್ಥಿಸಂಧಿವಾತಕ್ಕೆ ಸಂಭಾವ್ಯ ಚಿಕಿತ್ಸೆ ನೀಡುತ್ತದೆ. ಬ್ರೋಮೆಲಿನ್ ಸಾರವನ್ನು ಅನಾನಸ್‌ ನಿಂದ ಪಡೆಯಬಹುದು.

    MORE
    GALLERIES

  • 68

    Pineapple And Arthritis: ಅನಾನಸ್​ ತಿನ್ನುವುದರಿಂದ ಸಂಧಿವಾತ ಸಮಸ್ಯೆ ದೂರವಾಗುತ್ತಾ?

    ದೇಹದಲ್ಲಿ ಒಟ್ಟಾರೆ ಉರಿಯೂತದ ಪರಿಣಾಮ ಕಡಿಮೆ ಮಾಡಲು ಬ್ರೊಮೆಲಿನ್, ಮೂರು ಮುಖ್ಯ ಚಯಾಪಚಯ ಮಾರ್ಗಗಳ ಮೂಲಕ ಉರಿಯೂತ ಹಾಗು ಉರಿಯೂತದ ಸಿಗ್ನಲಿಂಗ್ ಅಣುಗಳ ಮೇಲೆ ಕೆಲಸ ಮಾಡುತ್ತದೆ. ಸಂಧಿವಾತ ರೋಗಿಗಳಿಗೆ ಬ್ರೋಮೆಲಿನ್ ಸ್ಟಿರಾಯ್ಡ್ ಅಲ್ಲದ ಉರಿಯೂತದ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.

    MORE
    GALLERIES

  • 78

    Pineapple And Arthritis: ಅನಾನಸ್​ ತಿನ್ನುವುದರಿಂದ ಸಂಧಿವಾತ ಸಮಸ್ಯೆ ದೂರವಾಗುತ್ತಾ?

    ಅನಾನಸ್ ರಸ ಸೇವನೆಯು ಕೀಲುಗಳನ್ನು ಪೋಷಿಸುತ್ತದೆ. ಇದು ವಿಟಮಿನ್ ಸಿ ಕೊರತೆ ನಿವಾರಿಸುತ್ತದೆ. ಕೀಲುಗಳ ನೋವನ್ನು ಕಡಿಮೆ ಮಾಡುತ್ತದೆ. ಅನಾನಸ್ ಅದರ ವಿಟಮಿನ್ ಸಿ ಅಥವಾ ಆಸ್ಕೋರ್ಬಿಕ್ ಆಮ್ಲ ಹೊಂದಿದೆ. ಇದು ಕೀಲುಗಳನ್ನು ಪೋಷಿಸುತ್ತದೆ. ಇದು ಕಾಲಜನ್ ಉತ್ಪಾದಿಸಲು ಸಹಕಾರಿ. ಆರೋಗ್ಯಕರ ಅಂಗಾಂಶಕ್ಕೆ ಸಹಕಾರಿ.

    MORE
    GALLERIES

  • 88

    Pineapple And Arthritis: ಅನಾನಸ್​ ತಿನ್ನುವುದರಿಂದ ಸಂಧಿವಾತ ಸಮಸ್ಯೆ ದೂರವಾಗುತ್ತಾ?

    ಅನಾನಸ್ ಕೀಲುಗಳಿಗೆ ತಾಮ್ರ ಒದಗಿಸುತ್ತದೆ. ಇದು ತಾಮ್ರದ ಉತ್ತಮ ಮೂಲವಾಗಿದೆ, ಆರೋಗ್ಯಕರ ಕೀಲುಗಳಿಗೆ ಅಗತ್ಯವಾದ ಖನಿಜ ತಾಮ್ರ. ತಾಮ್ರವು ಕಾಲಜನ್ ಮೇಲೆ ಪರಿಣಾಮ ಬೀರುತ್ತದೆ. ಅಂಗಾಂಶವನ್ನು ಸ್ಥಿರಗೊಳಿಸುತ್ತದೆ. ಮೂಳೆ ಬೆಳವಣಿಗೆಯಲ್ಲಿ ಮುಖ್ಯವಾಗಿದೆ. ದಿನವೂ ಒಂದು ಕಪ್ ಅನಾನಸ್ ಸೇವಿಸಿ. ಜ್ಯೂಸ್ ಕುಡಿಯಿರಿ.

    MORE
    GALLERIES