Health Tips: ನೀವು ಸರಿಯಾಗಿ ಹಲ್ಲು ಉಜ್ಜದಿದ್ದರೆ ಶ್ವಾಸಕೋಶಕ್ಕೆ ಹಾನಿ! ಹುಷಾರ್ ಅಂತಿದ್ದಾರೆ ತಜ್ಞರು
ಯಾರೇ ಆಗಲಿ ನಕ್ಕಾಗ ಮೊದಲು ಎದ್ದು ಕಾಣುವುದೇ ಹಲ್ಲುಗಳು. ಇಂತಹ ಹಲ್ಲುಗಳು ಆಹಾರ ಸೇವನೆಯಲ್ಲಿ ಉತ್ತಮ ಪಾತ್ರವಹಿಸುತ್ತದೆ. ಹಾಗಾಗಿ ಹಲ್ಲನ್ನು ಪ್ರತಿನಿತ್ಯ ಶುಚಿಯಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಹಲ್ಲನ್ನು ಕ್ಲೀನ್ ಮಾಡಿಕೊಳ್ಳದಿದ್ದರೆ ಶ್ವಾಸಕೋಶದ ಸೋಂಕಿಗೆ ಕಾರಣವಾಗಬಹುದು.
ಹಲ್ಲುಗಳನ್ನು ಹೇಗೆ ನೋಡಿಕೊಳ್ಳಬೇಕು ಎಂದು ಅದೆಷ್ಟೋ ಜನಕ್ಕೆ ತಿಳಿದಿರುವುದಿಲ್ಲ. ಆದರೆ ಹಲ್ಲನ್ನು ಹೇಗೆ ನೋಡಿಕೊಳ್ಳಬೇಕು ಎಂದು ಅರ್ಥಮಾಡಿಸಲು ವೈದ್ಯರು ನಮಗೆ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.
2/ 7
ಯಾರೇ ಆಗಲಿ ನಕ್ಕಾಗ ಮೊದಲು ಎದ್ದು ಕಾಣುವುದೇ ಹಲ್ಲುಗಳು. ಇಂತಹ ಹಲ್ಲುಗಳು ಆಹಾರ ಸೇವನೆಯಲ್ಲಿ ಉತ್ತಮ ಪಾತ್ರವಹಿಸುತ್ತದೆ. ಹಾಗಾಗಿ ಹಲ್ಲನ್ನು ಪ್ರತಿನಿತ್ಯ ಶುಚಿಯಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಹಲ್ಲನ್ನು ಕ್ಲೀನ್ ಮಾಡಿಕೊಳ್ಳದಿದ್ದರೆ ಶ್ವಾಸಕೋಶದ ಸೋಂಕಿಗೆ ಕಾರಣವಾಗಬಹುದು.
3/ 7
ಹಲ್ಲುಜ್ಜುವುದು ಬಹಳ ಮುಖ್ಯ. ಅಷ್ಟೇ ಅಲ್ಲ ಬ್ರಶ್ ಸಹಾಯದಿಂದ ಹಲ್ಲುಜ್ಜುವುದು ಉತ್ತಮ. ವೈದ್ಯರ ಪ್ರಕಾರ, ಸರಿಯಾಗಿ ಹಲ್ಲುಜ್ಜುವುದೇ ಇರುವುದು ಅನೇಕ ರೋಗಗಳಿಗೆ ಕಾರಣವಾಗಬಹುದು.
4/ 7
ಸರಿಯಾಗಿ ಹಲ್ಲುಜ್ಜದೇ ಇರುವುದರಿಂದ ಪ್ರತಿ ವರ್ಷ ಲಕ್ಷಾಂತರ ಜನರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
5/ 7
ಹಲವಾರು ದೇಶಗಳಲ್ಲಿ ಜನರು ಬೆಳಗ್ಗೆ ಎದ್ದ ನಂತರ ದಿನಕ್ಕೆ ಒಂದು ಬಾರಿ ಹಲ್ಲುಜ್ಜುತ್ತಾರೆ. ಆದರೆ ಅದು ಸರಿಯಲ್ಲ. ವೈದ್ಯರ ಪ್ರಕಾರ, ದಿನಕ್ಕೆ ಮೂರು ಬಾರಿ ಹಲ್ಲುಜ್ಜುವುದು ಬಹಳ ಮುಖ್ಯ.
6/ 7
ಹಗಲು ರಾತ್ರಿ. ಮಧ್ಯಾಹ್ನದ ಊಟದ ನಂತರವೂ ಬ್ರಷ್ ಮಾಡಬೇಕು. ಇದು ಹಲ್ಲಿನ ಮೂಲೆಗಳಲ್ಲಿ ಅಂಟಿಕೊಂಡಿರುವ ಆಹಾರದ ಕಣಗಳನ್ನು ತೆಗೆದುಹಾಕುತ್ತದೆ.
7/ 7
ತಿನ್ನುವ ಯಾವುದೇ ಆಹಾರವು ಹಲ್ಲುಗಳ ನಡುವೆ ಸಿಲುಕಿಕೊಳ್ಳಬಹುದು. ಆಹಾರದ ಕಣಗಳು ಹಲ್ಲುಗಳಲ್ಲಿ ದೀರ್ಘಕಾಲ ಅಂಟಿಕೊಂಡರೆ ಬ್ಯಾಕ್ಟೀರಿಯಾದ ಸೋಂಕು ಉಂಟಾಗುತ್ತದೆ. ಬ್ಯಾಕ್ಟೀರಿಯಾಗಳು ಹಲ್ಲು ಅಥವಾ ಒಸಡುಗಳಿಗೆ ಸೀಮಿತವಾಗಿಲ್ಲದಿರಬಹುದು. ಆದರೆ ಇದು ಸುಲಭವಾಗಿ ಶ್ವಾಸಕೋಶವನ್ನು ತಲುಪುತ್ತದೆ.