ಒಬ್ಬ ವ್ಯಕ್ತಿಯು ತನ್ನ ಜೀವನದುದ್ದಕ್ಕೂಹೆಚ್ಚಾಗಿ ಪುರುಷ ಸ್ನೇಹಿತರೊಂದಿಗೆ ಇರಲು ಬಯಸುತ್ತಾರೆ. ಆದರೆ ಒಂದು ಹುಡುಗಿ ತನ್ನ ಜೀವನದಲ್ಲಿ ಇದ್ದಕ್ಕಿದ್ದಂತೆ ಪ್ರವೇಶಿಸಿದಾಗ, ಆಕೆಯೊಂದಿಗೆ ಹೇಗೆ ವರ್ತಿಸಬೇಕು ಮತ್ತು ಆಕೆಯೊಂದಿಗೆ ಹೇಗೆ ಸಂಬಂಧವನ್ನು ಬೆಳೆಸಿಕೊಳ್ಳಬೇಕು ಎಂಬುದರ ಬಗ್ಗೆ ಅನೇಕ ಮಂದಿಗೆ ಸರಿಯಾಗಿ ತಿಳಿದಿರುವುದಿಲ್ಲ. ಏಕೆಂದರೆ ಯುಗಯುಗಗಳಿಂದಲೂ ನಮಗೆ ವಿರುದ್ಧ ಲಿಂಗದವರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಸರಿಯಾದ ತಿಳುವಳಿಕೆಯನ್ನು ನೀಡಲಾಗಿಲ್ಲ.
ಒಬ್ಬ ಪುರುಷ ಎಂದಾದರೂ ಮಹಿಳೆಯೊಂದಿಗೆ ಸಂಬಂಧವನ್ನು ಬೆಳೆಸಲು ಹೋದಾಗ, ಅವನು ಮೊದಲ ಭೇಟಿಯಲ್ಲಿಯೇ ಆಕೆಗೆ ಪಾಸಿಟಿವ್ ಭಾವನೆಯನ್ನು ಮೂಡಿಸಬೇಕು. ಮೊದಲ ಬಾರಿಗೆ ಮಹಿಳೆಯನ್ನು ಭೇಟಿಯಾದಾಗ ಅನೇಕ ಪುರುಷರು ಒಪನ್ ಆಗಿ ಮಾತನಾಡಲು ಹೆದರುತ್ತಾರೆ. ಇದರಿಂದ ಅವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಷ್ಟಕ್ಕೂ ಮೊದಲ ಡೇಟ್ನಲ್ಲಿಯೇ ಗರ್ಲ್ಫ್ರೆಂಡ್ ಅನ್ನು ಇಂಪ್ರೆಸ್ ಮಾಡಲು ಕೆಲವು ಟಿಪ್ಸ್ ಈ ಕೆಳಗಿನಂತಿದೆ ನೋಡಿ.
ಅವರ ಆಸಕ್ತಿಗಳನ್ನು ತಿಳಿದುಕೊಳ್ಳಿ: ಯಾವಾಗಲೂ ಹುಡುಗಿಯರನ್ನು ಅವರ ಆಸಕ್ತಿಗಳ ಬಗ್ಗೆ ಕೇಳುವುದು ನಿಮಗೆ ಉತ್ತಮ ಅನಿಸಿಕೆ ನೀಡುತ್ತದೆ ಮತ್ತು ಈ ಮೂಲಕ ನೀವು ನಿಮ್ಮ ನಡುವಿನ ಸಂವಹನವನ್ನು ಹೆಚ್ಚಿಸಬಹುದು ಮತ್ತು ನಿಮ್ಮಿಬ್ಬರ ನಡುವಿನ ಕೆಲವು ಸಾಮಾನ್ಯ ಆಸಕ್ತಿಗಳು ಮತ್ತು ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಬಹುದು. ಅಲ್ಲದೇ ಇಬ್ಬರ ನಡುವೆ ಗೊಂದಲಮಯವಾಗಿರುವ ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಸಹಾಯಕವಾಗಿದೆ.