ಮೊಟ್ಟೆ ಹಳದಿ: ಡಯಟ್ನಲ್ಲಿರುವವರು ಸಾಮಾನ್ಯವಾಗಿ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸೇವಿಸುತ್ತಾರೆ. ಇದಕ್ಕೆ ಒಂದು ಕಾರಣ ಕ್ಯಾಲೋರಿ ಹೆಚ್ಚಾಗಿರುವ ಹಳದಿ ಭಾಗ ಸೇವಿಸಿದ್ರೆ ದಪ್ಪ ಹೆಚ್ಚಾಗುತ್ತದೆ ಎಂಬ ಆತಂಕ. ಆದರೆ ಮೊಟ್ಟೆಯ ಹಳದಿಯಲ್ಲಿ ಅತ್ಯಧಿಕ ಪೋಷಕಾಂಶವಿರುತ್ತದೆ. ಇದನ್ನು ಸೇವಿಸುವುದರಿಂದ ನಿಮ್ಮ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ನೀವು ಚೆನ್ನಾಗಿ ವರ್ಕೌಟ್ ಮಾಡಿದಂತೆ ಇದರಿಂದ ಕ್ಯಾಲೋರಿ ಕೂಡ ಚೆನ್ನಾಗಿ ಬರ್ನ್ ಆಗುತ್ತದೆ.