ಪ್ರೀತಿಯನ್ನು ಯಾರು ಬೇಕಾದರೂ ಮಾಡುತ್ತಾರೆ. ಆದರೆ ಅದನ್ನ ಯಾವ ರೀತಿಯಾಗಿ ಮತ್ತು ಎಷ್ಟು ವರ್ಷಗಳ ತನಕ ಉಳಿಸಿಕೊಳ್ಳುತ್ತಾರೆ ಅನ್ನುವುದು ಬಹಳ ಮುಖ್ಯ. ಪ್ರೀತಿ ಇದ್ದಲ್ಲಿ ಜಗಳ ಮತ್ತು ಮುನಿಸು ಕಾಮನ್. ಆದರೆ ಇದು ಅತಿ ಆಗಬಾರದು. ಹೆಚ್ಚಾಗಿ ಜಗಳ ಆಗ್ತಾ ಇರುವಂತಹ ರಿಲೇಷನ್ಶಿಪ್ ಗೆ ಟಾಕ್ಸಿಕ್ ರಿಲೇಶನ್ಶಿಪ್ ಅಂತ ಹೇಳಲಾಗುತ್ತೆ. ಇದನ್ನ ಕಡಿಮೆ ಮಾಡೋದು ಹೇಗೆ ತಿಳಿಯೋಣ.
ನಿಮ್ಮ ಪ್ರೀತಿ ಪಾತ್ರರೊಂದಿಗೆ ಜಗಳವಾದ ತಕ್ಷಣ ಅದನ್ನು ಇನ್ನೊಬ್ಬರಿಗೆ ದೂರು ನೀಡುವುದನ್ನ ಮೊದಲು ತಪ್ಪಿಸಿ. ಇದರಿಂದ ಇನ್ನಷ್ಟು ನೀವು ಮತ್ತು ನಿಮ್ಮವರು ದೂರವಾಗಬಹುದು. ಇಬ್ಬರೂ ಕೂಡ ಸ್ವಾತಂತ್ರ್ಯವಾಗಿ ಇರಬೇಕು. ಪ್ರೀತಿಯಲ್ಲಿ ನೋವಾದ ಕೂಡಲೇ ಇನ್ನೊಬ್ಬರಲ್ಲಿ ಹೇಳಿಕೊಂಡು ಅಳುವ ಬದಲು ಒಬ್ಬರೇ ಕುಳಿತುಕೊಂಡು ಈ ರೀತಿ ಜಗಳವಾಡದೇ ಇರೋದು ಹೇಗೆ ಎಂಬುದರ ಬಗ್ಗೆ ಯೋಚನೆ ಮಾಡಿ.