ಬ್ರೆಡ್ ತಯಾರಿಸುವ ಹಿಟ್ಟಿನಲ್ಲಿ ಗ್ಲುಟನ್ ಎಂಬ ಪ್ರೋಟೀನ್ ಮಿಶ್ರಣ ಇರುತ್ತದೆ. ಗ್ಲುಟನ್ ಎನ್ನುವುದು ಧಾನ್ಯಗಳ ಎಂಡೋಸ್ಪರ್ಮ್ ಗಳ ಪಿಷ್ಟದೊಂದಿಗೆ ಇರುತ್ತದೆ.ಇದು ಬೇಯಿಸಿದಾಗ ಬ್ರೆಡ್ನ ಸೂಕ್ತ ವಿನ್ಯಾಸ ತರಲು ಸಹಕರಿಸುವುದು. ಬ್ರೆಡ್ ಹಿಟ್ಟಿನಲ್ಲಿ ಫೈಟಿಕ್ ಆಮ್ಲಗಳು ಇರುತ್ತವೆ. ಇದು ವಿರೋಧಿ ಪೋಷಕಾಂಶ ಎಂದು ಕರೆಯಲಾಗುತ್ತದೆ. ಇದು ಅಂಟುವ ಪರಿಣಾಮವನ್ನು ಉಂಟುಮಾಡುತ್ತದೆ.