ಸೊಳ್ಳೆಗಳು ಎಷ್ಟು ಎತ್ತರಕ್ಕೆ ಹಾರಬಲ್ಲವು? ಇಂತಹ ಪ್ರಶ್ನೆಗಳು ಅನೇಕ ಮಂದಿಗೆ ಮೂಡುತ್ತದೆ. ಆದರೆ ಸೊಳ್ಳೆಗಳು ಒಂದು ನಿರ್ದಿಷ್ಟ ಹಂತದವರೆಗೂ ಹಾರಬಲ್ಲವು ಅದರ ನಂತರ ಅವುಗಳಿಗೆ ಹಾರಲು ಸಾಧ್ಯವಿಲ್ಲ ಎಂದು ಕೆಲ ಮಂದಿ ಭಾವಿಸುತ್ತಾರೆ. ಹಾಗಾಗಿ ಎತ್ತರವಿರುವ ಮನೆ ಮತ್ತು ಫ್ಲ್ಯಾಟ್ಗಳಲ್ಲಿ ಸೊಳ್ಳೆ ಹೆಚ್ಚಾಗಿ ಇರುವುದಿಲ್ಲ. ಆದರೆ ಕೆಲ ಮಂದಿ ಎಷ್ಟೇ ಎತ್ತರದಲ್ಲಿ ವಾಸವಾಗಿದ್ದರೂ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸೊಳ್ಳೆಗಳು ನೆಲದಿಂದ 25 ಅಡಿ ಎತ್ತರದವರೆಗೆ ಮಾತ್ರ ಹಾರಬಲ್ಲವು ಎಂದು ಜನ ಅಂದುಕೊಂಡಿದ್ದಾರೆ. ಆದರೆ ಈ ಕಲ್ಪನೆಯು ಸಂಪೂರ್ಣವಾಗಿ ತಪ್ಪು. ನಿಜವಾದ ವಿಚಾರ ತಿಳಿದುಕೊಂಡರೆ ಖಂಡಿತವಾಗಿಯೂ ಬೆಚ್ಚಿ ಬೀಳ್ತೀರಿ.
ಸೊಳ್ಳೆಗಳು ಅನಗತ್ಯವಾಗಿ ಹೆಚ್ಚು ಎತ್ತರಕ್ಕೆ ಹಾರಲು ಬಯಸುವುದಿಲ್ಲ ನಿಜ. ಆದರೆ, ಅಗತ್ಯವಿರುವ ಸಂದರ್ಭದಲ್ಲಿ ಅವು ಎತ್ತರಕ್ಕೂ ಹಾರಬಲ್ಲದು. ಆದರೆ ಎಷ್ಟು ಎತ್ತರಕ್ಕೆ ಹಾರಬಲ್ಲವು ಎಂಬುವುದನ್ನು ನೀವು ಕೂಡ ಊಹಿಸಲು ಸಾಧ್ಯವಿಲ್ಲ. ಕೆಲವು ಜಾತಿ ಸೊಳ್ಳೆಗಳು 40 ಅಡಿ ಎತ್ತರದ ಮರಗಳ ಮೇಲೆ ವಾಸಿಸುತ್ತವೆ. ಕೆಲವು ಜಾತಿ ಸೊಳ್ಳೆಗಳು 20 ಮಹಡಿಗಳಷ್ಟು ಎತ್ತರಕ್ಕೆ ಸುಲಭವಾಗಿ ಹಾರಬಲ್ಲದು. ಮತ್ತೆ ಒಂದು ಇಂಚು ನೀರು ನಿಂತಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ.
ಆದರೆ, ಸಾಲ್ಟ್ಮಾರ್ಷ್ ಎಂದು ಕರೆಯಲ್ಪಡುವ ಸೊಳ್ಳೆಗಳ ಪ್ರಭೇದವಿದೆ. ಇದು ತನ್ನ ಸಂತಾನೋತ್ಪತ್ತಿ ಪ್ರದೇಶದಿಂದ 32 ರಿಂದ 64 ಕಿ.ಮೀ ದೂರದವರೆಗೆ ಪ್ರಯಾಣಿಸಬಲ್ಲದು. ಮುಖ್ಯ ಕಾರಣವೆಂದರೆ ಆಹಾರ ಮತ್ತು ಸಂತಾನೋತ್ಪತ್ತಿಯ ಸ್ಥಳಗಳನ್ನು ಕಂಡುಹಿಡಿಯುವುದು. ಈ ಸೊಳ್ಳೆಗಳು ಎತ್ತರಕ್ಕೆ ಹಾರಲು ಗಾಳಿಯ ಸಹಾಯವನ್ನು ತೆಗೆದುಕೊಳ್ಳುತ್ತದೆ. ಸೊಳ್ಳೆಗಳ ವೇಗವು ಸೊಳ್ಳೆಗಳ ಜಾತಿ ಮತ್ತು ಅವುಗಳ ಲಿಂಗವನ್ನು ಅವಲಂಬಿಸಿರುತ್ತದೆ. ಅದರ ಸಾಮಾನ್ಯ ವೇಗ ಗಂಟೆಗೆ ಒಂದರಿಂದ ಒಂದೂವರೆ ಮೈಲಿ ಮಾತ್ರ.