Children Care: ನನ್ನ ಮಕ್ಕಳು ತುಂಬಾ ಮೊಬೈಲ್ ಯೂಸ್ ಮಾಡ್ತಾರೆ ಅಂತ ಕಂಪ್ಲೈಂಟ್ ಮಾಡ್ಬೇಡಿ, ಇಲ್ಲಿದೆ ಪರಿಹಾರ!
ಈಗಿನ ಕಾಲದ ಮಕ್ಕಳು ಮೊಬೈಲ್ ಅಂದ್ರೆ ಸಾಕು ಬೇರೆ ಪ್ರಪಂಚವೇ ಇಲ್ಲ ಅನ್ನುವ ಹಾಗೆ ಇದ್ದು ಬಿಡ್ತಾರೆ. ಹಾಗಾದ್ರೆ, ಈ ಮೊಬೈಲ್ ನಿಂದ ಹೊರಗೆ ಅವರನ್ನು ಹೇಗೆ ತರುವುದು? ಅಂತ ಕೇಳಿದ್ರೆ, ಇಲ್ಲಿದೆ ನೋಡಿ ಸುಲಭ ಉಪಾಯ.
ಅದೊಂದು ಸುಂದರವಾದ ಕಾಲವಿತ್ತು. ಮಕ್ಕಳು ಹಠ ಮಾಡಿದ್ರೆ ಚಂದಮಾಮನನ್ನು ತೋರಿಸಿ ಕಥೆ ಹೇಳುತ್ತಾ ಊಟ ಮಾಡಿಸುವುದು ಅಥವಾ ಪುರಾಣದ ಕಥೆಗಳನ್ನು ಹೇಳುವುದು.
2/ 8
ಆದರೆ ಈ ಕಾಲ ಇದರ ವಿರುದ್ಧವಾಗಿದೆ. ಮಕ್ಕಳು ಸ್ವಲ್ಪ ಹಠ ಮಾಡಿದ್ರೂ ಸಾಕು ಅವರ ಕೈಗೆ ಮೊಬೈಲ್ ಕೊಡೋದು. ಇದರಲ್ಲಿ ಬರುವ ಕಾರ್ಟೂನ್ಗಳನ್ನು ನೋಡ್ತಾ ಇದ್ರೆ ಹಠ ಮಾಡೋಲ್ಲ ಅಂತ ಪೋಷಕರು ಅಭ್ಯಾಸ ಮಾಡಿಸಿಕೊಟ್ಟಿದ್ದಾರೆ.
3/ 8
ಹಾಗಾದ್ರೆ ನಿಮ್ಮ ಮಗುವನ್ನು ಮೊಬೈಲ್ ಆಟದಿಂದ ಈಸಿಯಾಗಿ ಹೊರಗಡೆ ತರುವುದು ಹೇಗೆ ಅಂತ ಇಲ್ಲಿದೆ ನೋಡಿ ಟಿಪ್ಸ್. ಯೆಸ್, ಒಂದೇ ಬಾರಿಗೆ ಮಕ್ಕಳನ್ನು ಮೊಬೈಲ್ನಿಂದ ಹೊರಗೆ ತರಲು ಆಗೋಲ್ಲ. ಅವರಿಗೆ ಅಸಮಧಾನವಾಗಬಹುದು.
4/ 8
ಸಿಂಪಲ್ ವೇಳಾಪಟ್ಟಿಯನ್ನು ರೆಡಿ ಮಾಡಿ: ಅಂದ್ರೆ ಯಾವ ಸಮಯದಲ್ಲಿ ಅವರು ಮೊಬೈಲ್ಗಳನ್ನು ಬಳಕೆ ಮಾಡಬೇಕು, ಯಾವಾಗ ಮಾಡಬಾರದು ಅಂತ. ಆಗ ಮಾತ್ರ ಮೊಬೈಲ್ ಬಳಸಲು ಅವರ ಕೈಗೆ ನೀಡಿ.
5/ 8
ಮಕ್ಕಳಿಗೆ ಹೊರ ಪ್ರಪಂಚವನ್ನು ಪರಿಚಯಿಸಿ. ಅಂದರೆ, ಅಪ್ಪ ಅಮ್ಮನೊಂದಿಗೆ ಮಾತನಾಡುವುದರ ಜೊತೆಗೆ ಕುಟುಂಬದ ಇನ್ನಿತರ ಸದಸ್ಯರುಗಳನ್ನು ಪರಿಚಯ ಮಾಡಿಕೊಡಿ. ಆಗ ಅವರೊಂದೊಗೆ ಸಮಯವನ್ನು ಕಳೆಯುತ್ತಾರೆ. ಇದರಿಂದ ಮೊಬೈಲ್ ನೆನಪು ಆಗುವುದಿಲ್ಲ.
6/ 8
ನಿಮ್ಮ ಮಕ್ಕಳ ಆಪ್ತ ಸ್ನೇಹಿತರೊಂದಿಗೆ ಬೆರೆಯಲು ಬಿಡಿ. ಯಾಕೆಂದರೆ ಅವರೊಂದಿಗೆ ಸಂತೋಷದಿಂದ ಇರುತ್ತಾರೆ. ಮಣ್ಣಿನಲ್ಲಿ ಮಕ್ಕಳು ಹೆಚ್ಚಾಗಿ ಆಡಬೇಕು, ಹಾಗೆಯೇ ಮಕ್ಕಳು ವಾತಾವರಣದೊಂದಿಗೆ ಎಷ್ಟು ಜಾಸ್ತಿ ಬೆರೆಯುತ್ತಾರೆಯೋ, ಅಷ್ಟೇ ಚುರುಕಾಗುತ್ತಾರೆ ಎಂದು ಸಂಶೋಧನೆಯಲ್ಲಿ ಸಾಭೀತಾಗಿದೆ.
7/ 8
ನಿಮ್ಮ ಮಕ್ಕಳ ಆಪ್ತ ಸ್ನೇಹಿತರೊಂದಿಗೆ ಬೆರೆಯಲು ಬಿಡಿ. ಯಾಕೆಂದರೆ ಅವರೊಂದಿಗೆ ಸಂತೋಷದಿಂದ ಇರುತ್ತಾರೆ. ಮಣ್ಣಿನಲ್ಲಿ ಮಕ್ಕಳು ಹೆಚ್ಚಾಗಿ ಆಡಬೇಕು, ಹಾಗೆಯೇ ಮಕ್ಕಳು ವಾತಾವರಣದೊಂದಿಗೆ ಎಷ್ಟು ಜಾಸ್ತಿ ಬೆರೆಯುತ್ತಾರೆಯೋ, ಅಷ್ಟೇ ಚುರುಕಾಗುತ್ತಾರೆ ಎಂದು ಸಂಶೋಧನೆಯಲ್ಲಿ ಸಾಭೀತಾಗಿದೆ.
8/ 8
ನಿಮ್ಮ ಮಕ್ಕಳಿಗೆ ಮೋಟಿವೇಷ್ನಲ್ ಅಥವಾ ಇನ್ಸ್ಪಿರೇಷನ್ ಕಥೆಗಳನ್ನು ಹೇಳಿ. ಆಗ ನಾವು ಕೂಡ ಈ ವ್ಯಕ್ತಿಯಂತೆಯೇ ಆಗಬೇಕು ಎಂದು ಅದರ ಬಗ್ಗೆ ಹೆಚ್ಚು ಗಮನವನ್ನು ನೀಡುತ್ತಾರೆ.