ಬೆಂಡೆಕಾಯಿಯು ವಿವಿಧ ತರಕಾರಿಗಳಲ್ಲಿ ಒಂದು. ಇದನ್ನು ಅಸ್ತಮ ಇರುವವರು ತಿನ್ನಲೇ ಬಾರದು. ಈ ತರಕಾರಿಯಿಂದ ಸಾಂಬಾರ್, ಪಲ್ಯ, ಗ್ರೇವಿ ಹೀಗೆ ಅನೇಕ ಪದಾರ್ಥಗಳನ್ನು ಮಾಡಬಹುದು.
2/ 8
ಆದರೆ ಈ ಬೆಂಡೆಕಾಯಿಯ ಅಡುಗೆ ಮಾಡ್ಬೇಕಾದ್ರೆ ಲೋಳೆ ಲೋಳೆ ಬರ್ತಾ ಇದ್ಯಾ? ಏನು ಮಾಡ್ಬೇಕು ಅಂತ ಯೋಚ್ನೆ ಮಾಡ್ತಾ ಇದ್ರೆ ಇಲ್ಲಿದೆ ನೋಡಿ ಒಂದಷ್ಟು ಅಡುಗೆಗೆ ಸಲಹೆಗಳು.
3/ 8
ನೀವು ಬೆಂಡೆಕಾಯಿ ಅಡುಗೆ ಮಾಡುವ ಮೊದಲು ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳಬೇಕು. ನಂತರ ಒದ್ದೆಯಾದ ಬೆಂಡೆಕಾಯಿಯನ್ನು ಒಣಗಿರುವ ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಳ್ಳಬೇಕು.
4/ 8
ಬಾಣಲೆಗೆ ಕೊಂಚ ಅಡುಗೆ ಎಣ್ಣೆಯನ್ನು ಹಾಕಿ, ಚಿಕ್ಕದಾಗಿ ಕತ್ತಿರಿಸಿದ ಬೆಂಡೆಕಾಯಿಯನ್ನು ಬಾಣಲೆಗೆ ಹಾಕಿ 5 ರಿಂದ 10 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಬೇಕು. ಆ ಬೆಂಡೆಕಾಯಿಯು ಕಂದು ಬಣ್ಣಕ್ಕೆ ಬರಬೇಕು. ಆಗ ಲೋಳೆ ರಸ ಹೋಗಿರುತ್ತದೆ.
5/ 8
ನೀವು ಬೆಂಡೆಕಾಯಿಯನ್ನು ಬೇಯಿಸುವಾಗ ಯಾವುದೇ ಕಾರಣಕ್ಕೂ ಮುಚ್ಚಿಡಬೇಡಿ. ಇದರಿಂದ ಹಬೆ ಹೆಚ್ಚಾಗಿ ಲೋಳೆ ಹಾಗೆಯೇ ಉಳಿದಿರುತ್ತದೆ.
6/ 8
ಬೆಂಡೆಕಾಯಿ ಫ್ರೈ ಮಾಡುವಾಗ ಅದಕ್ಕೆ ಮೊದಲೇ ಉಪ್ಪನ್ನು ಹಾಕಬೇಡಿ. ಸಂಪೂರ್ಣ ಎಲ್ಲಾ ಮಸಾಲೆಗಳನ್ನು ಹಾಕಿದ ನಂತರ, ಕೊನೆಯಲ್ಲಿ ಉಪ್ಪನ್ನು ಹಾಕಿ. ಹಾಗೆಯೇ ನಿಂಬೆ ರಸವನ್ನು ಕೂಡ ಹಾಕಬೇಡಿ.
7/ 8
ಬೆಂಡೆಕಾಯಿಯನ್ನು ಹುರಿಯುವಾಗ ಕೊಂಚ ಕಡಲೆ ಹಿಟ್ಟನ್ನು ಮಿಶ್ರಣ ಮಾಡಿದ್ರೆ ಆಗ ಲೋಳೆ ಆಗೋದಿಲ್ಲ. ಈ ಹಿಟ್ಟನ್ನು ಹಾಕಿ 3 ನಿಮಷವಾದ್ರೂ ಹುರಿಬೇಕು. ಆಗ ಫುಲ್ ಲೋಳೆ ಹೋಗುತ್ತದೆ.
8/ 8
ಕಾಶ್ಮೀರಿ ಚಿಲ್ಲಿ ಮತ್ತು ಇತರ ಮಸಾಲೆಗಳನ್ನು ನೀವು ಈ ಕತ್ತರಿಸಿದ ಬೆಂಡೆಕಾಯಿಯೊಂದಿಗೆ ಹುರಿಯಬೇಕು. ಆಗ ಎಲ್ಲಾ ಮಸಾಲೆಗಳು ಇದರ ಒಳಗೆ ಹೋಗಿ ರುಚಿ ಹೆಚ್ಚಿಸುವುದರ ಜೊತೆಗೆ, ಎಲ್ಲಾ ಅಂಟಂಟು ಹೋಗಿ ಬಿಡುತ್ತದೆ.
First published:
18
Kitchen Hacks: ಲೋಳೆಯಾಗದಂತೆ ಬೆಂಡೆಕಾಯಿಂದ ಅಡುಗೆ ಮಾಡಬಹುದು, ಇಲ್ಲಿದೆ ಈಸಿ ಟಿಪ್ಸ್!