Weight Loss Tips: ಹಸಿ ಮೆಣಸಿನಕಾಯಿಯಿಂದ ತೂಕ ಇಳಿಸಬಹುದಂತೆ! ಕಣ್ಣಲ್ಲಿ ನೀರು ಹಾಕ್ಬೇಡಿ, ಇದನ್ನ ಬಳಸೋದು ಹೇಗೆ ಅಂತ ತಿಳಿಯಿರಿ
Chilli For Weight Loss: ತೂಕ ಇಳಿಸೋದು ಸುಲಭವಲ್ಲ, ಹಾಗೆಯೇ ಕಷ್ಟವೂ ಅಲ್ಲ. ಆದರೆ, ನಮಗೆ ಗೊತ್ತಿಲ್ಲದ ಕೆಲ ವಸ್ತುಗಳು ನಿಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ. ಅದರಲ್ಲಿ ಒಂದು ಮೆಣಸಿನಕಾಯಿ. ಈ ಹಸಿಮೆಣಸು ತೂಕ ಇಳಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.
ಹಸಿರು ಮೆಣಸಿನಕಾಯಿಗಳಲ್ಲಿ ಕ್ಯಾಪ್ಸೈಸಿನ್, ಕಬ್ಬಿಣ, ವಿಟಮಿನ್ ಸಿ, ವಿಟಮಿನ್ ಎ, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಡಯೆಟರಿ ಫೈಬರ್ ಎಂಬ ಆ್ಯಂಟಿ ಆಕ್ಸಿಡೆಂಟ್ಗಳ ಸಮೃದ್ಧ ಮೂಲವಾಗಿದೆ.
2/ 9
ಕೆಲವರಿಗಂತೂ ಹಸಿ ಮೆಣಸಿನಕಾಯಿ ಇಲ್ಲದೇ ಅಡುಗೆ ಮಾಡುವುದೇ ಇಲ್ಲ. ಇನ್ನು ಕೆಲವರಿಗೆ ಹಸಿ ಮೆಣಸಿನಕಾಯಿ ಇದ್ದರೇ ಮಾತ್ರ ರುಚಿ. ಬಹುತೇಕ ಭಾರತೀಯ ಅಡುಗೆಗಳಲ್ಲಿ ಬಳಕೆ ಮಾಡಲಾಗುತ್ತದೆ. ಈ ಹಸಿ ಮೆಣಸಿನಕಾಯಿ ಚಯಾಪಚಯವನ್ನು ಹೆಚ್ಚಿಸುತ್ತದೆ. ಅಲ್ಲದೇ ತೂಕ ಇಳಿಸಲು ಸಹಾಯ ಮಾಡುತ್ತದೆ
3/ 9
ತಜ್ಞರ ಪ್ರಕಾರ ಹಸಿ ಮೆಣಸಿನಕಾಯಿ ಚಯಾಪಚಯ ಕ್ರಿಯೆಯನ್ನು 50%ಹೆಚ್ಚಿಸುತ್ತದೆ. ಸೀಮಿತ ಪ್ರಮಾಣದಲ್ಲಿ ಹಸಿರು ಮೆಣಸಿನಕಾಯಿ ಸೇವನೆ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.
4/ 9
ಮಸಾಲೆಯುಕ್ತ ಆಹಾರವು ನಿಮ್ಮ ಹಸಿವನ್ನು ನಿಗ್ರಹಿಸುತ್ತದೆ ಮತ್ತು ನಿಮಗೆ ದೀರ್ಘಕಾಲದವರೆಗೆ ಹಸಿವು ಆಗದಂತೆ ಮಾಡುತ್ತದೆ ಇದರಿಂದಾಗಿ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ.
5/ 9
ಈ ಹಸಿ ಮೆಣಸಿನಕಾಯಿಯಲ್ಲಿ ಕಡಿಮೆ ಕ್ಯಾಲೋರಿ ಇದ್ದು ಇದು ತೂಕ ಇಳಿಸಲು ಬೋನಸ್ ಅಂಶವಾಗುತ್ತದೆ. ಬೀಜಗಳನ್ನು ಹಿಡಿದಿರುವ ಮೆಣಸಿನಕಾಯಿಯ ಬಿಳಿ ಪೊರೆ ಕ್ಯಾಪ್ಸೈಸಿನ್ನ ಶ್ರೀಮಂತ ಮೂಲವಾಗಿದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ.
6/ 9
ತೂಕ ಇಳಿಸಿಕೊಳ್ಳಲು, ತಜ್ಞರು ಹಸಿ ಮೆಣಸಿನಕಾಯಿಯನ್ನು ವೆಜ್ ಕರಿಗಳಲ್ಲಿ ಬಳಸಲು ಅಥವಾ ಕೆಂಪು ಮೆಣಸಿನ ಪುಡಿಗೆ ಬದಲಿಯಾಗಿ ಬಳಸಲು ಸೂಚಿಸಿದ್ದಾರೆ. ಯಾಕೆಂದರೆ ಕೆಂಪು ಮೆಣಸಿನಪುಡಿಯಲ್ಲಿ ಬಣ್ಣಗಳನ್ನು ಸೇರಿಸಿರಬಹುದು.
7/ 9
ಅದಲ್ಲದೆ, ಈ ಮೆಣಸಿನಕಾಯಿಗಳನ್ನು ನಿಮ್ಮ ಉಪ್ಪಿನಕಾಯಿ, ಸಲಾಡ್ಗಳಲ್ಲಿ ಅಥವಾ ದಾಲ್, ಸಾಂಬಾರ್ ಹೀಗೆ ಎಲ್ಲ ಅಡುಗೆಗಳಲ್ಲಿ ಬಳಕೆ ಮಾಡಬಹುದು. ಒಂದು ದಿನದಲ್ಲಿ ಕೇವಲ 12-15 ಗ್ರಾಂ ಮೆಣಸಿನಕಾಯಿಯನ್ನು ಮಾತ್ರ ಸೇವನೆ ಮಾಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ
8/ 9
ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳುವ ಪ್ರಕ್ರಿಯೆಯನ್ನು ಸರಾಗಗೊಳಿಸಿ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಆದರೆ ಹಸಿ ಮೆಣಸಿನಕಾಯಿಯ ಚಯಾಪಚಯ ವರ್ಧಕ ಗುಣಗಳು ಮತ್ತು ತೂಕ ಇಳಿಸಲು ಸಹಾಯ ಮಾಡುವ ಅಂಶಗಳು ಪರೋಕ್ಷವಾಗಿ ಮಧುಮೇಹವನ್ನು ಕಡಿಮೆ ಮಾಡುತ್ತದೆ.
9/ 9
ತರಕಾರಿ, ರೈತ, ಸಾಂಬಾರ್ ಮತ್ತು ಕೆಲ ಆಹಾರ ಪದಾರ್ಥಗಳ ಮೂಲಕ ಕೇವಲ 12 ಗ್ರಾಂ ಹಸಿರು ಮೆಣಸಿನಕಾಯಿಗಳನ್ನು ಸೇವನೆ ಮಾಡುವುದು ಸುರಕ್ಷಿತ ಮತ್ತು ಪ್ರಯೋಜನಕಾರಿ. ಅದನ್ನು ಮೀರಿ ಸೇವನೆ ಮಾಡುವುದು ಹೊಟ್ಟೆ ನೋವು, ಸೆಳೆತ, ಅತಿಸಾರಕ್ಕೆ ಕಾರಣವಾಗಬಹುದು ಮತ್ತು ಚರ್ಮದ ಅಲರ್ಜಿಗೂ ಕಾರಣವಾಗಬಹುದು.