ಮಕ್ಕಳು ಮಳೆಯಲ್ಲಿ ಆಟವಾಡಲು ಬಯಸುತ್ತಾರೆ. ಅನೇಕ ಬಾರಿ ಶಾಲೆಯಿಂದ ಮನೆಗೆ ಬರುವಾಗ ಮಳೆ ನೀರಿಗೆ ಕೈ ಹಿಡಿಯುತ್ತಾ ಆಟವಾಡುತ್ತಾ ಮನ ಸೇರುತ್ತಾರೆ. ಆದರೆ ಇದರಿಂದ ಅವರು ಅನಾರೋಗ್ಯಕ್ಕೆ ತುತ್ತಾಗುವ ಅಪಾಯ ಹೆಚ್ಚು. ಮಳೆಗಾಲದಲ್ಲಿ ಅನೇಕ ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ಹರಡುವಿಕೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ಸೋಂಕಿನ ಅಪಾಯವೂ ಹೆಚ್ಚಾಗುತ್ತದೆ.