ಬೇಕಿಂಗ್ ಸೋಡಾದೊಂದಿಗೆ ನಿಂಬೆ ಹಣ್ಣನ್ನು ಬಳಸಬೇಕು. ಹೌದು, ನಿಂಬೆ ಹಣ್ಣಿನಲ್ಲಿ ಸಿಟ್ರಸ್ ಅಂಶ ಹೆಚ್ಚಿರೋದ್ರಿಂದ ನಿಮ್ಮ ಕಪ್ಪು ಕಲೆಯನ್ನು ತೆಗೆದು ಹಾಕುತ್ತದೆ. ಬೇಕಿಂಗ್ ಸೋಡಾ ಜೊತೆ ನಿಂಬೆಹಣ್ಣಿನ ಜ್ಯೂಸ್ ಮಿಶ್ರಣ ಮಾಡಿ ಹಚ್ಚಿಕೊಳ್ಳಿ. ಮತ್ತು ನಯವಾಗಿ ಮಸಾಜ್ ಮಾಡಿ 10 ನಿಮಿಷಗಳು ಹಾಗೆ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳುವು ದರಿಂದ ನಿಮಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ. ಸುಮಾರು 10 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ, ಉಗುರು ಬೆಚ್ಚಗಿನ ನೀರಿನಿಂದ ವಾಶ್ ಮಾಡಿ. ಹೀಗೆ ವಾರಕ್ಕೆ 2 ಬಾರಿ ಆದ್ರೂ ಮಾಡೋದ್ರಿಂದ ಮೊಣಕಾಲಿನಲ್ಲಿರುವ ಕಪ್ಪನ್ನು ತೆಗಿಯಬಹುದು.
ಜೇನುತುಪ್ಪಕ್ಕೆ ಸಕ್ಕರೆ ಮಿಶ್ರಣ: ಎಸ್, ಮುಖ ಟ್ಯಾನ್ ಆಗಿದ್ರೂ ಕೂಡ ನೀವು ಜೇನುತುಪ್ಪ ಹಚ್ಚಿದ್ರೆ ಸರಿ ಆಗುತ್ತೆ. ಹಾಗೆಯೇ, ಒಂದು ಟೀ ಚಮಚ ಜೇನುತುಪ್ಪಕ್ಕೆ ಕೊಂಚ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಪೇಸ್ಟ್ ಮಾಡಿ. 10 ನಿಮಿಷಗಳ ಕಾಲ ಹಾಗೆ ಬಿಟ್ಟು ಆನಂತರ ಉಗುರು ಬೆಚ್ಚಗಿನ ನೀರಿನಲ್ಲಿ ವಾಶ್ ಮಾಡಿ. ವಾರದಲ್ಲಿ ಮೂರು ಬಾರಿ ಹೀಗೆ ಮಾಡಿದ್ರೆ ಕಪ್ಪು ಕಲೆಗಳು ಮಾಯ.