Biotin Side Effects: ನೀವು ಸೇವಿಸೋ ಬಯೋಟಿನ್​ನಿಂದಲೇ ಕೂದಲು, ಉಗುರು ಹಾಳಾಗುತ್ತೆ ಹುಷಾರ್!

ಪ್ರತಿಯೊಬ್ಬರೂ ದಪ್ಪ ಮತ್ತು ಉದ್ದ ಕೂದಲು ಬೇಕೆಂದು ಬಯಸುತ್ತಾರೆ. ಜೊತೆಗೆ ಉದ್ದ ಹಾಗೂ ದಪ್ಪ ಉಗುರು ಹೊಂದಿರಲು ಬಯಸುತ್ತಾರೆ. ಆದರೆ ನಿಮ್ಮ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯು ಇದಕ್ಕೆ ಅಡ್ಡಿ ಉಂಟು ಮಾಡುತ್ತದೆ. ಹೀಗೆ ಕೂದಲು ಮತ್ತು ಉಗುರು ಹಾನಿ ತಡೆಗೆ ಬಯೋಟಿನ್ ಸಹಕಾರಿ. ಆದರೆ ಇದು ಕೆಲವು ಅಡ್ಡ ಪರಿಣಾಮ ಬೀರುತ್ತವೆ.

First published:

  • 18

    Biotin Side Effects: ನೀವು ಸೇವಿಸೋ ಬಯೋಟಿನ್​ನಿಂದಲೇ ಕೂದಲು, ಉಗುರು ಹಾಳಾಗುತ್ತೆ ಹುಷಾರ್!

    ಒತ್ತಡದ ಜೀವನಶೈಲಿಯು ನಿಮ್ಮ ಕೂದಲು ಮತ್ತು ಉಗುರು ಹಾನಿಗೆ ಕಾರಣವಾಗುತ್ತದೆ. ಈ ತಡೆಗೋಡೆ ನಿವಾರಿಸಲು ನಿಮಗೆ ಬಯೋಟಿನ್ ಬೇಕು. ಇದು ನಿಮ್ಮ ಕೂದಲು ಮತ್ತು ಉಗುರುಗಳ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಹೆಚ್ಚಿನ ಫಲಿತಾಂಶಕ್ಕಾಗಿ ತುಂಬಾ ಜನರು ಪೂರಕ ಸೇವಿಸುತ್ತಾರೆ.

    MORE
    GALLERIES

  • 28

    Biotin Side Effects: ನೀವು ಸೇವಿಸೋ ಬಯೋಟಿನ್​ನಿಂದಲೇ ಕೂದಲು, ಉಗುರು ಹಾಳಾಗುತ್ತೆ ಹುಷಾರ್!

    ಹೀಗೆ ತ್ವರಿತ ರಿಸಲ್ಟ್ ಪಡೆಯಲು ಪೂರಕಗಳನ್ನು ಸೇವನೆ ಮಾಡುವುದು ಹಲವು ರೀತಿಯಲ್ಲಿ ಅಡ್ಡ ಪರಿಣಾಮ ಬೀರುತ್ತದೆ. ಅದರಲ್ಲೂ ನೀವು ಆರೋಗ್ಯಕರ ಕೂದಲು ಮತ್ತು ದಪ್ಪ ಕೂದಲು ಪಡೆಯಲು ಬಯೋಟಿನ್ ಪೂರಕ ಸೇವಿಸುತ್ತಿದ್ದರೆ ಕೆಲವು ಅಡ್ಡಪರಿಣಾಮಗಳ ಬಗ್ಗೆ ತಿಳಿಯುವುದು ಮುಖ್ಯ.

    MORE
    GALLERIES

  • 38

    Biotin Side Effects: ನೀವು ಸೇವಿಸೋ ಬಯೋಟಿನ್​ನಿಂದಲೇ ಕೂದಲು, ಉಗುರು ಹಾಳಾಗುತ್ತೆ ಹುಷಾರ್!

    ಇದಕ್ಕೂ ಮೊದಲು ಬಯೋಟಿನ್ ಎಂದರೇನು ಎಂದು ತಿಳಿಯಿರಿ. ಬಯೋಟಿನ್ B ಜೀವಸತ್ವಗಳ ಗುಂಪಿಗೆ ಸೇರಿದೆ. ವಿಟಮಿನ್ ಎಚ್ ಅಥವಾ ವಿಟಮಿನ್ ಬಿ 7 ಎಂದೂ ಇದನ್ನು ಕರೆಯುತ್ತಾರೆ. ಇದು ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ. ಬಯೋಟಿನ್ ನಮ್ಮ ದೇಹದಲ್ಲಿನ ಕಿಣ್ವಗಳ ಒಂದು ಅಂಶ.

    MORE
    GALLERIES

  • 48

    Biotin Side Effects: ನೀವು ಸೇವಿಸೋ ಬಯೋಟಿನ್​ನಿಂದಲೇ ಕೂದಲು, ಉಗುರು ಹಾಳಾಗುತ್ತೆ ಹುಷಾರ್!

    ಇದು ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಅವುಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ದೇಹವು ನೀರಿನಲ್ಲಿ ಕರಗುವ ಜೀವಸತ್ವಗಳನ್ನು ಸಂಗ್ರಹಿಸಲ್ಲ. ಹಾಗಾಗಿ ಇವುಗಳನ್ನು ಆಹಾರದಿಂದ ಪಡೆಯಬೇಕು. ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿ. ಇಲ್ಲದಿದ್ದರೆ ಅಡ್ಡ ಪರಿಣಾಮ ಬೀರುತ್ತವೆ.

    MORE
    GALLERIES

  • 58

    Biotin Side Effects: ನೀವು ಸೇವಿಸೋ ಬಯೋಟಿನ್​ನಿಂದಲೇ ಕೂದಲು, ಉಗುರು ಹಾಳಾಗುತ್ತೆ ಹುಷಾರ್!

    ಬಯೋಟಿನ್ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಉಪಯುಕ್ತ. ಆದರೆ ಇದರ ಮಿತಿಮೀರಿದ ಸೇವನೆಯು ನಿಮ್ಮ ದೇಹಕ್ಕೆ ಅನೇಕ ನಕಾರಾತ್ಮಕ ಪರಿಣಾಮ ಉಂಟು ಮಾಡಬಹುದು. ಹೆಚ್ಚು ಬಯೋಟಿನ್ ಸೇವನೆಯು ವಿಟಮಿನ್ ಸಿ ಮಟ್ಟವನ್ನು ಕಡಿಮೆ ಮಾಡುತ್ತದೆ. ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತದೆ. ಜೀರ್ಣಕಾರಿ ಸಮಸ್ಯೆ ಉಂಟಾಗುತ್ತದೆ.

    MORE
    GALLERIES

  • 68

    Biotin Side Effects: ನೀವು ಸೇವಿಸೋ ಬಯೋಟಿನ್​ನಿಂದಲೇ ಕೂದಲು, ಉಗುರು ಹಾಳಾಗುತ್ತೆ ಹುಷಾರ್!

    ಇದು ಕರುಳಿಗೆ ಸಂಬಂಧಿಸಿದ ಸಮಸ್ಯೆ ಉಂಟು ಮಾಡುತ್ತದೆ. ಇನ್ಸುಲಿನ್ ಅನ್ನು ಬಿಡುಗಡೆ ಮಾಡುವಲ್ಲಿ ಸಮಸ್ಯೆ ಉಂಟು ಮಾಡುತ್ತದೆ. ಯಕೃತ್ತು ಸರಿಯಾಗಿ ಕಾರ್ಯ ನಿರ್ವಹಿಸದೇ ಇರಲು ಕಾರಣವಾಗುತ್ತದೆ. ಮೂತ್ರ ವಿಸರ್ಜನೆಯ ಪ್ರಮಾಣ ಹೆಚ್ಚಿಸುತ್ತದೆ. ಮೂತ್ರಪಿಂಡಗಳ ಮೇಲೆ ಹೆಚ್ಚಿನ ಹೊರೆ ಉಂಟಾಗುತ್ತದೆ.

    MORE
    GALLERIES

  • 78

    Biotin Side Effects: ನೀವು ಸೇವಿಸೋ ಬಯೋಟಿನ್​ನಿಂದಲೇ ಕೂದಲು, ಉಗುರು ಹಾಳಾಗುತ್ತೆ ಹುಷಾರ್!

    ಬಯೋಟಿನ್ ತ್ವಚೆಯನ್ನು ನಿಷ್ಕಳಂಕ ಮತ್ತು ಉತ್ತಮವಾಗಿಸುತ್ತದೆ. ಅತಿಯಾಗಿ ಸೇವಿಸಿದರೆ ಚರ್ಮದ ಮೇಲೆ ದದ್ದು ಉಂಟಾಗುತ್ತದೆ. ರಕ್ತದ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು. ಇದು ಸಕ್ಕರೆ ರೋಗಿಗಳಿಗೆ ಅಪಾಯಕಾರಿ. ಹೃದಯದ ಮೇಲೂ ಪರಿಣಾಮ ಬೀರುತ್ತದೆ.

    MORE
    GALLERIES

  • 88

    Biotin Side Effects: ನೀವು ಸೇವಿಸೋ ಬಯೋಟಿನ್​ನಿಂದಲೇ ಕೂದಲು, ಉಗುರು ಹಾಳಾಗುತ್ತೆ ಹುಷಾರ್!

    ಹೆಚ್ಚಿನ ಬಯೋಟಿನ್ ವಿಟಮಿನ್ ಬಿ 6 ಮಟ್ಟ ಕಡಿಮೆ ಮಾಡುತ್ತದೆ. ಇದು ನರವೈಜ್ಞಾನಿಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೈನಂದಿನ ಡೋಸೇಜ್ 30 ಮೈಕ್ರೋಗ್ರಾಂ. ಮಹಿಳೆ ಹಾಲುಣಿಸುತ್ತಿದ್ದರೆ, 35 ಮೈಕ್ರೋಗ್ರಾಂಗಳು ಸೇವಿಸಿ. ಮೊಟ್ಟೆ, ಬೀಜಗಳು, ಮೀನು, ಸಿಹಿ ಆಲೂಗಡ್ಡೆ, ಸೋಯಾಬೀನ್, ಧಾನ್ಯಗಳು ಬಯೋಟಿನ್ ಸಮೃದ್ಧ ಆಹಾರ ಸೇವಿಸಿ.

    MORE
    GALLERIES