ಕನ್ನಡಿಗರಿಗೆ (Kannadigas) ಹೊಸ ವರ್ಷ ಎಂದರೆ ಯುಗಾದಿ ಹಬ್ಬ (Ugadi Festival). ಯುಗಾದಿಗೆ ಹೊಸ ಸಂವತ್ಸರ ಪ್ರಾರಂಭವಾಗುತ್ತೆ. ಇಂದು ಎಲ್ಲೆಡೆ ಯುಗಾದಿ ಸಂಭ್ರಮ (Ugadi Celebration) ಮನೆ ಮಾಡಿದೆ. ಆದರೆ ನಾಳೆ ಹೊಸ ತೊಡಕು (Hosatodaku) ಆಚರಿಸಲಾಗುತ್ತದೆ. ಈ ವೇಳೆ ಮಾಂಸದ (Nonveg) ಅಡುಗೆಗಳನ್ನು ಮಾಡಲಾಗುತ್ತದೆ. ಮನೆಯಲ್ಲಿಯೇ ವೈನ್ ಪಾರ್ಟಿ (Wine Party) ಕೂಡ ಇರುತ್ತದೆ, ಕೆಲವರು ಜಾಲಿಗಾಗಿ ಇಸ್ಪೀಟ್ (Ispit Card) ಕೂಡ ಆಡುತ್ತಾರೆ. ಈ ದಿನ ಜನರು ಸಖತ್ ಮೋಜು-ಮಸ್ತಿ ಮಾಡುತ್ತಾರೆ. ಸದ್ಯ ಈ ಬಾರಿಯ ಹೊಸ ತೊಡುಕಿಗೆ ಹೊಸತರಹದ ಅಡುಗೆ ರೆಸಿಪಿಯನ್ನು (Nonveg Recipe) ಇಂದು ನಾವು ನಿಮಗೆ ಹೇಳಿಕೊಡುತ್ತಿದ್ದೇವೆ. ಅದುವೇ ನುಗ್ಗೆಕಾಯಿ ಮಟನ್ ಗ್ರೇವಿ (Drumstick Mutton Curry). ಸಾಮಾನ್ಯವಾಗಿ ಮಟನ್ ಪ್ರೋಟೀನ್ ಭರಿತ ಆಹಾರಗಳಲ್ಲಿ ಒಂದಾಗಿದೆ. ಹಾಗಾಗಿ ಹೆಚ್ಚಾಗಿ ಜನ ಮಟನ್ (Mutton) ಅನ್ನು ಇಷ್ಟಪಡುತ್ತಾರೆ. ಅದರಲ್ಲಿಯೂ ನುಗ್ಗೆಕಾಯಿ ಜೊತೆಗಿನ ಮಟನ್ ಗ್ರೇವಿಯಂತೂ ಸಖತ್ ಟೇಸ್ಟಿ ಆಗಿರುವುದಷ್ಟೇ ಅಲ್ಲದೇ, ಅದರ ಪರಿಮಳ ಅದ್ಭುತ. ಈ ಘಮ ಘಮ ವಾಸನೆ ನಿಜಕ್ಕೂ ಎಲ್ಲರಿಗೂ ಬಾಯಿಯಲ್ಲಿ ನೀರೂರಿಸುತ್ತದೆ. ಈ ಗ್ರೇವಿ ಅನ್ನಕ್ಕೆ (Rice) ಮಾತ್ರವಲ್ಲದೇ ಇಡ್ಲಿ(Idli) ಮತ್ತು ದೋಸೆಗೆ (Dose) ಕೂಡ ಸೈಡ್ ಡಿಶ್ (Side Dish) ಆಗಿ ಸೂಪರ್ ಆಗಿರುತ್ತೆ. ಈ ನುಗ್ಗೆಕಾಯಿ ಮಟನ್ ಗ್ರೇವಿಯನ್ನು ಮನೆಯಲ್ಲಿ ನೀವು ಸುಲಭವಾಗಿ ಮಾಡಬಹುದು. ಅದು ಹೇಗಪ್ಪಾ ಅಂತೀರಾ, ಹಾಗಾದರೆ ಈ ಕೆಳಗೆ ನೀಡಿರುವ ರೆಸಿಪಿಯನ್ನು ಓದಿ. ಮನೆಯವರೆಲ್ಲ ನುಗ್ಗೆಕಾಯಿ ಮಟನ್ ಗ್ರೇವಿಯನ್ನು ಸವಿದು ಆನಂದಿಸಿ. ನುಗ್ಗೆಕಾಯಿ ಮಟನ್ ಗ್ರೇವಿ ನುಗ್ಗೆಕಾಯಿ ಮಟನ್ ಗ್ರೇವಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು: ಮಟನ್ - 1/4 ಕೆಜಿ ನುಗ್ಗೆಕಾಯಿ - 3 ಈರುಳ್ಳಿ - 2 ಟೊಮ್ಯಾಟೋ - 2 ಎಣ್ಣೆ - 4 ಟೀ ಸ್ಪೂನ್ ಹಸಿರು ಮೆಣಸಿನಕಾಯಿ - 3 ಉಪ್ಪು - 1/2 ಟೀಸ್ಪೂನ್ ಅರಿಶಿನ ಪುಡಿ - 1/4 ಟೀಸ್ಪೂನ್ ದನಿಯ ಪುಡಿ - 1/2 ಟೀಸ್ಪೂನ್ ಮೆಣಸಿನ ಪುಡಿ - 1/4 ಟೀಸ್ಪೂನ್ ನೀರು - 200 ಮಿಲಿ ತೆಂಗಿನಕಾಯಿ - 3 ತುಂಡುಗಳು ಕೊತ್ತಂಬರಿ ಸೊಪ್ಪು - ಸ್ವಲ್ಪ ನುಗ್ಗೆಕಾಯಿ ಮಟನ್ ಗ್ರೇವಿ ಪಾಕವಿಧಾನ: ಮೊದಲು ಕುಕ್ಕರ್ ನಲ್ಲಿ ಮಟನ್ ಹಾಕಿ 6 ಸೀಟಿ ಬರುವಂತೆ ಬೇಯಿಸಿ. ತೆಂಗಿನಕಾಯಿಗೆ ಒಂದು ಟೊಮೆಟೊ, ಒಂದು ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಅದು ಆರಿದ ನಂತರ ಈರುಳ್ಳಿ ಹಾಕಿ ಹುರಿಯಿರಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಹುರಿಯಿರಿ. ಇದನ್ನೂ ಓದಿ: Nonveg: ಮಟನ್ ಲಿವರ್ ಜಾಸ್ತಿ ತಿಂತೀರಾ? ಹುಷಾರ್, ಇದರಿಂದ ಆಗೋ ಸೈಡ್ ಎಫೆಕ್ಟ್ ಬಗ್ಗೆ ನಿಮಗೆಷ್ಟು ಗೊತ್ತು? ನಂತರ ಟೊಮ್ಯಾಟೊ ಸೇರಿಸಿ, ಹುರಿಯಿರಿ. ಉಪ್ಪು, ಮೆಣಸಿನ ಪುಡಿ, ದನಿಯ ಪುಡಿ, ಅರಿಶಿನ ಪುಡಿ ಸೇರಿಸಿ ಮತ್ತು ನುಗ್ಗೆ ಕಾಯಿ ಹಾಕಿ ಸೌಟ್ನಲ್ಲಿ ಬಾಡಿಸಿ. ಈಗ ಬೇಯಿಸಿದ ಮಟನ್ ಅನ್ನು ನೀರಿನೊಂದಿಗೆ ಸೇರಿಸಿ. ನಂತರ ತುರಿದ ತೆಂಗಿನಕಾಯಿ ಪೇಸ್ಟ್ ಅನ್ನು ಬೆರೆಸಿ, 5 ನಿಮಿಷ ಚೆನ್ನಾಗಿ ಕುದಿಸಿ. ಇದೀಗ ನುಗ್ಗೆಕಾಯಿ ಮಟನ್ ಗ್ರೇವಿ ಸವಿಯಲು ಸಿದ್ಧ.