30 ವರ್ಷಗಳಿಂದ ಯಶಸ್ಸಿ ದಾಂಪತ್ಯ ನಡೆಸುತ್ತಿರುವ ಶಾರುಖ್ ಖಾನ್ ಹಾಗೂ ಗೌರಿ ಖಾನ್ ಮೂರು ಸಲ ಮದುವೆಯಾಗಿರುವ ವಿಷಯ ತಿಳಿದೇ ಇದೆ. 1991ರಲ್ಲಿ ವಿವಾಹವಾದ ಈ ಜೋಡಿ ತಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಇನ್ನು ಮದುವೆಯಾದಾಗ ಶಾರುಖ್ ಖಾನ್ ಇನ್ನೂ ಉದಯೋನ್ಮುಖ ನಟರಾಗಿದ್ದರು. ಈ ಕಾರಣದಿಂದಲೇ ಕೈಯಲ್ಲಿ ಹಣವಿಲ್ಲ ಕಾರಣಕ್ಕೆ ಗೌರಿಯನ್ನು ತಮ್ಮ ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ಪ್ಯಾರಿಸ್ಗೆ ಕರೆದುಕೊಂಢು ಹೋಗಿದ್ದರಂತೆ.