ಬೇಸಿಗೆ ಕಾಲ ಆಗಿರುವುದರಿಂದ ಚಿಕನ್ ಪಾಕ್ಸ್ ಅಥವಾ ಸಿಡುಬು ಹರಡುವಿಕೆ ಹೆಚ್ಚುತ್ತಿದೆ. ಸಿಡುಬು ನಿವಾರಣೆಗೆ ಆರೋಗ್ಯಕರ ಆಹಾರ, ಸ್ವಚ್ಛ ಜೀವನ ಮತ್ತು ಸರಿಯಾದ ಚಿಕಿತ್ಸೆಯಿಂದ ಮಾತ್ರ ಚೇತರಿಕೆ ಪಡೆಯಬಹುದು. ಎಚ್ಚರ ತಪ್ಪಿದರೆ ಸಮಸ್ಯೆ ಉಲ್ಬಣಿಸಬಹುದು. ಹೋಮಿಯೋಪತಿ ಚಿಕಿತ್ಸೆ ಮೂಲಕ ಚಿಕನ್ ಪಾಕ್ಸ್ ಅನ್ನು ಗುಣಪಡಿಸಿಕೊಳ್ಳಬಹುದು. ಅಷ್ಟಕ್ಕೂ ಸಿಡುಬು ರೋಗವು ಹೇಗೆ ಸಂಭವಿಸುತ್ತದೆ. ಯಾವ ವಯಸ್ಸಿನಲ್ಲಿ ಈ ಸೋಂಕಿನ ಸಾಧ್ಯತೆಗಳು ಹೆಚ್ಚು ಎಂಬುವುದನ್ನು ತಿಳಿದುಕೊಳ್ಳೋಣ ಬನ್ನಿ.
ಹೋಮಿಯೋಪತಿ ಚಿಕಿತ್ಸೆಯಲ್ಲಿ ಕೆಲವು ಔಷಧಿಗಳಿವೆ, ಇದು ಒಂದೂವರೆ ಅಥವಾ ಎರಡು ತಿಂಗಳೊಳಗೆ ಚರ್ಮದ ಕಲೆಗಳನ್ನು ಗುಣಪಡಿಸುತ್ತದೆ. ಇದನ್ನು ತಡೆಗಟ್ಟುವ ಕ್ರಮವಾಗಿ ಪ್ರತಿಯೊಬ್ಬರೂ ಚಿಕನ್ಪಾಕ್ಸ್ ಲಸಿಕೆಯನ್ನು ಪಡೆಯಬೇಕು. ಈ ಲಸಿಕೆ ಎಲ್ಲೆಡೆ ಲಭ್ಯವಿದೆ. ಮೊದಲ ವ್ಯಾಕ್ಸಿನೇಷನ್ ಅನ್ನು ಜನನದ ನಂತರ ಮೂರನೇ ತಿಂಗಳಲ್ಲಿ ನೀಡಲಾಗುತ್ತದೆ ಮತ್ತು ಆರನೇ ತಿಂಗಳ ನಂತರ ಎರಡನೇಯದ್ದನ್ನು ನೀಡಲಾಗುತ್ತದೆ.