ಪೆಟ್ರೋಲಿಯಮ್ ಜಿಲ್ಲಿ: ಇದು ಕೇವಲ ಚರ್ಮದ ಹೊಳಪಿಗೆ ಮಾತ್ರವಲ್ಲದೇ, ತಲೆಯಲ್ಲಿರುವ ಹೊಟ್ಟು ಮತ್ತು ಹೇನಿಗೂ ರಾಮಬಾಣವಂತೆ. ಹೇನು ಇರುವ ಭಾಗದಲ್ಲಿ ಪೆಟ್ರೋಲಿಯಮ್ ಜೆಲ್ ಅನ್ನು ದಪ್ಪವಾಗಿ ಹಚ್ಚಿ. ಮಲಗುವಾಗ ಶವರ್ ಕ್ಯಾಪ್ ಧರಿಸಿ ಮಲಗಬೇಕು, ಮುಂಜಾನೆ ಕೂದಲನ್ನು ಬಾಚುವ ಮೊದಲು ಬಾಚಣಿಗೆಯ ಮೇಲೆ ಸ್ವಲ್ಪ ಬೇಬಿ ಎಣ್ಣೆಯನ್ನು ಅನ್ವಯಿಸಿಕೊಳ್ಳಿ. ನಂತರ ಕೂದಲನ್ನು ಬಾಚಿ. ಆಗ ಹೇನು ಉದುರುತ್ತವೆ.ಬೆಚ್ಚಗಿನ ನೀರಿನಲ್ಲಿ ಕೂದಲನ್ನು ತೊಳೆಯಿರಿ.