Hair Care Tips: ಚಳಿಗಾಲದಲ್ಲಿ ಕೂದಲು ಹೆಚ್ಚು ಉದುರುತ್ತಿದ್ರೆ ಇವುಗಳನ್ನು ಬಳಸಿ
Home Remedies: ಕೆಲಸದ ಒತ್ತಡ ಮತ್ತು ಆತಂಕದಿಂದ ಕೂದಲು ಉದುರಬಹುದು. ಇದಕ್ಕೆ ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳು ಲಭ್ಯವಿದೆ, ಆದರೆ ಲಭ್ಯವಿರುವ ಉತ್ಪನ್ನಗಳಿಗಿಂತ ಮನೆಯಲ್ಲಿ ತಯಾರಿಸಿದ ವಸ್ತುಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ. ಹಾಗಾದ್ರೆ ಕೂದಲು ಉದುರುವುದನ್ನ ತಪ್ಪಿಸಲು ಏನು ಮಾಡಬೇಕು ಎಂಬುದು ಇಲ್ಲಿದೆ.
ಮನುಷ್ಯನ ಸೌಂದರ್ಯವನ್ನು ಅವರ ಕೂದಲಿನಿಂದಲೂ ನಿರ್ಧಾರ ಮಾಡಲಾಗುತ್ತದೆ. ಅನೇಕ ಜನರು ತಮ್ಮ ಆಹಾರ ಪದ್ಧತಿ, ಜೀನ್ಗಳ ಕಾರಣದಿಂದಾಗಿ ಕೂದಲು ಉದುರುವಿಕೆ ಸಮಸ್ಯೆ ಎದುರಿಸುತ್ತಾರೆ.
2/ 9
ಪ್ರತಿಯೊಬ್ಬರೂ ಕಪ್ಪು ಕಪ್ಪು ಕೂದಲು ಬೇಕು ಎಂದು ಬಯಸುತ್ತಾರೆ. ಆದರೆ ಪ್ರಸ್ತುತ ಆರೋಗ್ಯ ಸಮಸ್ಯೆಗಳಿಂದಾಗಿ ಕೂದಲು ಉದುರುವಿಕೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
3/ 9
ಜೊತೆಗೆ ಕೆಲಸದ ಒತ್ತಡ ಹಾಗೂ ಮಾನಸಿಕ ತೊಳಲಾಟಗಳಿಂದ ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಬೇಗ ಬರುತ್ತದೆ. ಇದನ್ನು ತಪ್ಪಿಸಲು, ಹಲವಾರು ಪ್ರಯತ್ನ ಮಾಡಲಾಗುತ್ತದೆ.
4/ 9
ಚಳಿಗಾಲದಲ್ಲಿ ನೆತ್ತಿಯ ಆರೈಕೆಗೆ ನಿರ್ದಿಷ್ಟ ಗಮನ ನೀಡಬೇಕು. ಬಿಸಿನೀರಿನ ಸ್ನಾನದಿಂದ ಕೂದಲು ಉದುರುತ್ತದೆ, ಇದು ಕೂದಲಿನ ತುದಿಗಳು ಬಿರುಕು ಬಿಡಲು ಕಾರಣವಾಗುತ್ತದೆ. ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ.
5/ 9
ಒಂದು ಬೌಲ್ನಲ್ಲಿ ಒಂದು ಟೀ ಚಮಚ ಶಾಂಪೂ ತೆಗೆದುಕೊಂಡು ಅದಕ್ಕೆ ಸ್ವಲ್ಪ ಕ್ಯಾಸ್ಟರ್ ಆಯಿಲ್, ಗ್ಲಿಸರಿನ್, ಆಪಲ್ ಸೈಡರ್ ವಿನೆಗರ್ ಮಿಶ್ರಣ ಮಾಡಿ. ಒದ್ದೆಯಾದ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿ. 15 ನಿಮಿಷಗಳ ನಂತರ ಶಾಂಪೂ ಬಳಸಿ ತೊಳೆಯಿರಿ.
6/ 9
ಒಂದು ಬಾಳೆಹಣ್ಣು, ಒಂದು ಚಮಚ ಆಲಿವ್ ಎಣ್ಣೆ, ಒಂದು ಚಮಚ ಅಲೋವೆರಾ ಜೆಲ್ ಹಾಕಿ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿಕೊಳ್ಳಿ. ಅರ್ಧ ಗಂಟೆಯ ನಂತರ ಸ್ವಚ್ಛಗೊಳಿಸಿದರೆ ಕೂದಲು ಮೃದುವಾಗುತ್ತದೆ.
7/ 9
ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಲು ಅಕ್ಕಿ ನೆನೆಸಿದ ನೀರು ಚೆನ್ನಾಗಿ ಕೆಲಸ ಮಾಡುತ್ತದೆ. ಮೊದಲು ಅಕ್ಕಿಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ನಂತರ ನೀರನ್ನು ಸುರಿಯಿರಿ ಮತ್ತು ಎರಡು ದಿನಗಳವರೆಗೆ ನೆನೆಸಿ. ಆ ನೀರನ್ನು ಒಂದು ಪಾತ್ರೆಗೆ ಹಾಕಿ ಅಗತ್ಯವಿದ್ದಾಗ ಬಳಸಿ.
8/ 9
ಸಬ್ಬಸಿಗೆಯನ್ನು ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ, ಸಬ್ಬಸಿಗೆ ಪೇಸ್ಟ್ ಮಾಡಿ ಸ್ವಲ್ಪ ನಿಂಬೆ ರಸದೊಂದಿಗೆ ಕೂದಲಿಗೆ ಹಚ್ಚಿ. ಅರ್ಧ ಘಂಟೆಯ ನಂತರ ತಲೆಸ್ನಾನ ಮಾಡಿ.
9/ 9
ವಾರದಲ್ಲಿ ಎರಡು ಬಾರಿ ಹರ್ಬಲ್ ಶಾಂಪೂ ಬಳಕೆ ಮಾಡಿದರೆ ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ. ಅಲ್ಲದೇ ತೆಂಗಿನ ಹಾಲಿನಲ್ಲಿ ನಾಲ್ಕೈದು ಹನಿ ನಿಂಬೆ ರಸ ಸೇರಿಸಿ ಕೂದಲಿಗೆ ಹಚ್ಚಿ. ನಾಲ್ಕರಿಂದ ಆರು ಗಂಟೆಗಳ ನಂತರ ನೀರಿನಿಂದ ತೊಳೆಯಿರಿ.