Stomach Burning: ಹೊಟ್ಟೆ ಉರಿ ತಡೆಯೋಕೆ ನಿಮ್ಮ ಮನೆಯಲ್ಲಿದೆ ಮದ್ದು, ಒಮ್ಮೆ ಯೂಸ್ ಮಾಡಿದ್ರೆ ಸಾಕು
Stomach Burning Home Remedy: ಹೊಟ್ಟೆಯ ಸಮಸ್ಯೆಗಳು ಒಂದಿಲ್ಲ ಒಂದು ಕಾರಣಕ್ಕೆ ಬರುತ್ತದೆ. ಮಸಾಲೆ ಪದಾರ್ಥಗಳನ್ನು ತಿಂದರೆ ಅಥವಾ ಅಲರ್ಜಿ ಇರುವ ಆಹಾರಗಳನ್ನು ಸೇವಿಸಿದೆ ಹೊಟ್ಟೆ ಉರಿ ಉಂಟಾಗುತ್ತದೆ. ಇದು ತುಂಬಾ ಕಿರಿಕಿರಿ ಮಾಡುತ್ತದೆ. ಅದಕ್ಕೆ ಕೆಲ ಮನೆಮದ್ದುಗಳು ಪರಿಹಾರ ಎನ್ನಬಹುದು. ಆ ಮನೆಮದ್ದುಗಳು ಯಾವುವು ಎಂಬುದು ಇಲ್ಲಿದೆ.
ಹೊಟ್ಟೆ ಉರಿಯಲು ಕಾರಣವೆಂದರೆ ನಮ್ಮ ಹೊಟ್ಟೆಯಲ್ಲಿ ಉತ್ಪತ್ತಿಯಾಘುವ ಆಮ್ಲ. ಅದರ ಜೊತೆ ಮಸಾಲೆ ಪದಾರ್ಥಗಳು ಸೇರಿದಾಗ ಹೊಟ್ಟೆ ಉರಿಯುತ್ತದೆ. ಈ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಪರಿಹಾರ ಪಡೆಯುವುದು, ತೊಂದರೆ ಹೆಚ್ಚಾಗದಂತೆ ತಡೆಯುತ್ತದೆ.
2/ 8
ತಾಜಾ ಹಣ್ಣು ಈ ಸಮಸ್ಯೆಗೆ ಪರಿಹಾರವನ್ನು ನೀಡುವ ಕೆಲವು ತಾಜಾ ಹಣ್ಣುಗಳಿವೆ. ಬಾಳೆಹಣ್ಣು, ಸೇಬು ಮತ್ತು ಪಪ್ಪಾಯಿ ಹೊಟ್ಟೆಯ ಉರಿಯನ್ನು ಕಡಿಮೆ ಮಾಡುತ್ತದೆ. ಬಾಳೆಹಣ್ಣುಗಳು ಕಡಿಮೆ ಆಮ್ಲವನ್ನು ಹೊಂದಿರುತ್ತವೆ ಮತ್ತು ಆಹಾರವು ಕರುಳಿನ ಒಳಪದರದ ಮೂಲಕ ಸುಲಭವಾಗಿ ಹಾದುಹೋಗಲು ಸಹಾಯ ಮಾಡುತ್ತದೆ.
3/ 8
ಆಪಲ್ ಸೈಡರ್ ವಿನೆಗರ್ ಹೊಟ್ಟೆ ಉರಿ ಕಡಿಮೆ ಮಾಡಲು ಆಪಲ್ ಸೈಡರ್ ವಿನೆಗರ್ ಸಹಾಯ ಮಾಡುತ್ತದೆ. 2 ಟೀ ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ, ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ, ದಿನಕ್ಕೆ 2 ಬಾರಿ ಕುಡಿಯಿರಿ.
4/ 8
ಪ್ರೋಬಯಾಟಿಕ್ ಆಹಾರಗಳು ಪ್ರೋಬಯಾಟಿಕ್ ಆಹಾರಗಳು ಕರುಳಿನ ಆರೋಗ್ಯಕ್ಕೆ ಬಹಳ ಮುಖ್ಯವಾಗುತ್ತದೆ. ಹಾನಿಕಾರಕ ಸೂಕ್ಷ್ಮಾಣುಜೀವಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮೊಸರು, ಹಾಲು, ಸೋಯಾ ಉತ್ಪನ್ನಗಳನ್ನು ಸೇವಿಸುವುದು ಪ್ರಯೋಜನ ನೀಡುತ್ತದೆ.
5/ 8
ಅಲೋವೆರಾ ಜ್ಯೂಸ್ ಒಟ್ಟಾರೆ ಜೀರ್ಣಕಾರಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಲೋವೆರಾ ಜ್ಯೂಸ್ ಸಹಾಯ ಮಾಡುತ್ತದೆ. ಅಜೀರ್ಣ ಸಮಸ್ಯೆಗಳನ್ನು ಸುಲಭವಾಗಿ ಹೋಗಲಾಡಿಸಲು ಇದು ಬಹಳ ಉತ್ತಮ. ಇದು ನಮ್ಮ ಹೊಟ್ಟೆಯಲ್ಲಿ ಆಮ್ಲ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
6/ 8
ಬೆಲ್ಲ ಮತ್ತು ಬಾದಾಮಿ ನೀವು ಬೆಲ್ಲ ಮತ್ತು ಬಾದಾಮಿಯನ್ನು ಒಟ್ಟಿಗೆ ತಿನ್ನುವುದು ಸಹ ಹೊಟ್ಟೆ ಉರಿ ಸಮಸ್ಯೆಗೆ ಪರಿಹಾರ ಎನ್ನಬಹುದು. ಬೆಚ್ಚಗಿನ ನೀರಿನಲ್ಲಿ ಬೆಲ್ಲವನ್ನು ಹಾಕಿ, ಅದಕ್ಕೆ ಬಾದಾಮಿ ಪುಡಿ ಸೇರಿಸಿ ಕುಡಿಯಬಹುದು. ಇಲ್ಲದಿದ್ದರೆ ಬಾದಾಮಿ ಪುಡಿ ಹಾಗೂ ಬೆಲ್ಲದ ಪುಡಿ ಮಿಕ್ಸ್ ಮಾಡಿ ತಿನ್ನಬಹುದು.
7/ 8
ಹರ್ಬಲ್ ಟೀ ಹರ್ಬಲ್ ಟೀ ನಿಮ್ಮ ಹೊಟ್ಟೆಯ ಉರಿಯನ್ನು ಹೋಗಲಾಡಿಸುವುದಲ್ಲದೇ, ಚಳಿಗಾಲದಲ್ಲಿ ಟೀ ಹಾಗೂ ಕೆಮ್ಮಿನ ಸಮಸ್ಯೆಗೆ ಸಹ ಪರಿಹಾರ ನೀಡುತ್ತದೆ. ಗ್ರೀನ್ ಟೀ , ಕ್ಯಾಮೊಮೈಲ್ ಟೀ ಅಥವಾ ಪುದೀನಾ ಟೀ ಕರುಳಿನ ಆರೊಗ್ಯಕ್ಕೆ ಬಹಳ ಒಳ್ಳೆಯದು.
8/ 8
ಬಾಳೆಹಣ್ಣು ಬಾಳೆಹಣ್ಣು ನಿಮಗೆ ಜೀರ್ಣಕ್ರಿಯೆಯ ಸಮಸ್ಯೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ಮಲಬದ್ಧತೆ ಹಾಗೂ ಆಸಿಡಿಟಿ ಸಮಸ್ಯೆಗೆ ಇದು ಪರಿಹಾರ ಎನ್ನಬಹುದು. ಹಾಗೆಯೇ, ಇದು ಹೊಟ್ಟೆ ಉರಿ ಕಡಿಮೆ ಮಾಡಲು ಪರಿಣಾಮಕಾರಿ ಎಂದು ಸಾಬೀತಾಗಿದೆ.