Snoring Remedy: ನಿದ್ರೆ ಹಾಳು ಮಾಡುವ ಗೊರಕೆಯಿಂದ ಮುಕ್ತಿ ನೀಡುತ್ತೆ ಈ ವಸ್ತುಗಳು
Home Remedies for Snoring: ರಾತ್ರಿ ಒಂದು ಒಳ್ಳೆಯ ನಿದ್ರೆ ಬಂದರೆ ನಮ್ಮ ಪೂರ್ತಿ ದಿನ ಚೆನ್ನಾಗಿರುತ್ತದೆ. ಆದರೆ ಸರಿಯಾಗಿ ನಿದ್ರೆ ಆಗಿಲ್ಲ ಎಂದರೆ ಬಹಳ ಕಷ್ಟವಾಗುತ್ತದೆ. ಕೆಲವೊಮ್ಮೆ ನಮಗೆ ಗೊರಕೆಯ ಕಾರಣದಿಂದ ನಿದ್ರೆ ಸರಿಯಾಗಿ ಆಗುವುದಿಲ್ಲ. ಅದು ನಿಮ್ಮ ಗೊರಕೆಯ ಶಬ್ಧವಿರಬಹುದು ಅಥವಾ ನಿಮ್ಮ ಪಕ್ಕ ಮಲಗಿದವರ ಗೊರಕೆ ಇರಬಹುದು. ಈ ಗೊರಕೆಯಿಂದ ಮುಕ್ತಿ ಬೇಕು ಎಂದರೆ ಕೆಲ ಸಿಂಪಲ್ ಟಿಪ್ಸ್ ಇಲ್ಲಿದೆ.
ಆಲಿವ್ ಎಣ್ಣೆ: ಆಲಿವ್ ಎಣ್ಣೆಯಲ್ಲಿರುವ ಉರಿಯೂತ ಗುಣಲಕ್ಷಣಗಳು ಗೊರಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಮಲಗುವ ಮುನ್ನ ಒಂದು ಚಮಚ ಆಲಿವ್ ಎಣ್ಣೆಯನ್ನು ಸೇವಿಸುವುದು ಉತ್ತಮ.
2/ 8
ಏಲಕ್ಕಿ: ಏಲಕ್ಕಿಯಲ್ಲಿರುವ ಅಂಶಗಳು ಶ್ವಾಸಕೋಶದಲ್ಲಿ ಗಾಳಿ ಹೋಗಲು ಅನುವು ಮಾಡಿಕೊಡುವ ಮೂಲಕ ಗೊರಕೆಯನ್ನು ನಿಲ್ಲಿಸುತ್ತದೆ. ಮಲಗುವ ಅರ್ಧಗಂಟೆ ಮೊದಲು ಏಲಕ್ಕಿ ಪುಡಿಯನ್ನು ಬೆಚ್ಚಗಿನ ನೀರಿಗೆ ಹಾಕಿ ಕುಡಿಯಬೇಕು.
3/ 8
ಅರಿಶಿನ: ಅರಿಶಿನ ಆ್ಯಂಟಿ ಬಾಯಾಟಿಂಕ್ ಮಾತ್ರವಲ್ಲದೇ ಉರಿಯೂತ ಕಡಿಮೆ ಮಾಡಲು ಸಹ ಸಹಕಾರಿ. ರಾತ್ರಿ ಮಲಗುವ 1 ಗಂಟೆ ಮೊದಲು ಬಿಸಿ ಹಾಲಿಗೆ ಒಂದು ಚಮಚ ಅರಿಶಿನ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ.
4/ 8
ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಸಹ ಗೊರಕೆ ಕಡಿಮೆ ಮಾಡುವ ಅಂಶಗಳಿದೆ. ರಾತ್ರಿ ಮಲಗುವ ಮುನ್ನ ಹಸಿ ಬೆಳ್ಳುಳ್ಳಿಯನ್ನು ಹಾಗೆಯೇ 2 ತಿಂದು, ಬಿಸಿ ಬಿಸಿ ನೀರು ಕುಡಿಯಿರಿ ಸಾಕು. ಕೆಲವೇ ದಿನಗಳಲ್ಲಿ ಗೊರಕೆ ನಿಲ್ಲುತ್ತದೆ.
5/ 8
ಕ್ಯಾಮೊಮೈಲ್ ಟೀ: ಈ ಕ್ಯಾಮೊಮೈಲ್ ಟೀ ಅಸಿಡಿಟಿ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದನ್ನು ಮಲಗುವ ಮುನ್ನ ಕುಡಿಯುವುದು ಗೊರಕೆ ಕಡಿಮೆ ಮಾಡುತ್ತದೆ.
6/ 8
ಸ್ಟೀಮ್ ತೆಗೆದುಕೊಳ್ಳಿ: ಸ್ಟೀಮ್ ತೆಗೆದುಕೊಳ್ಳುವುದು ಶೀತ, ತಲೆನೋವು ಕಡಿಮೆ ಮಾಡಲು ಮಾತ್ರ ಸಹಾಯ ಮಾಡುವುದಿಲ್ಲ, ಗೊರಕೆಯನ್ನು ಸಹ ಇದು ನಿಲ್ಲಿಸುತ್ತದೆ. ಹಾಗಾಗಿ ದಿನಕ್ಕೆ 2 ಬಾರಿಯಾದರೂ ಸ್ಟೀಮ್ ತೆಗೆದುಕೊಳ್ಳಿ.
7/ 8
ಪ್ರತಿದಿನ ವ್ಯಾಯಾಮ ಮಾಡಿ: ಪ್ರತಿದಿನ ವ್ಯಾಯಾಮ ಮಾಡುವುದು ನಿಮಗೆ ಸಹಾಯ ಮಾಡುತ್ತದೆ. ಇದು ಕೇವಲ ಗೊರಕೆ ನಿಲ್ಲಿಸಲು ಮಾತ್ರವಲ್ಲದೇ ನಿಮ್ಮ ತೂಕ ಇಳಿಸಲು ಹಾಗೂ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
8/ 8
ಧೂಮಪಾನ ಹಾಗೂ ಮದ್ಯಪಾನ ಬಿಡಿ: ಧೂಮಪಾನ ಹಾಗೂ ಮದ್ಯಪಾನ ಮಾಡುವುದು ಸಹ ಗೊರಕೆ ಹೆಚ್ಚಾಗಲು ಕಾರಣವಾಗುತ್ತದೆ. ನಿಮಗೂ ಸಹ ಈ ಅಭ್ಯಾಸವಿದ್ದರೆ ಇದನ್ನು ಬಿಡುವುದು ಉತ್ತಮ. ಇದರಿಂದ ಒಟ್ಟಾರೆ ಆರೋಗ್ಯಕ್ಕೆ ಸಹ ಒಳ್ಳೆಯದು.