Pregnancy Cold: ಗರ್ಭಿಣಿಯರನ್ನು ಕಾಡುವ ಶೀತಕ್ಕೆ ಸುಲಭ ಪರಿಹಾರ ಇಲ್ಲಿದೆ
Pregnancy Cold Remedy: ಗರ್ಭಿಣಿಯರಿಗೆ 9 ತಿಂಗಳು ಹಲವಾರು ಸಮಸ್ಯೆಗಳು ಬರುತ್ತದೆ. ಬೆನ್ನು ನೋವು, ವಾಂತಿ, ತಲೆಸುತ್ತುವುದು ಹೀಗೆ. ಇದರ ಜೊತೆ ಶೀತ ಹಾಗೂ ಜ್ವರ ಸಹ ಕಾಡುತ್ತದೆ. ಗರ್ಭಿಣಿಯರಿಗೆ ಪದೇ ಪದೇ ಶೀತ ಉಂಟಾಗುತ್ತಿದ್ದರೆ ಅದಕ್ಕೆ ಕೆಲ ಮನೆಮದ್ದು ಇಲ್ಲಿದೆ.
ಅರಿಶಿನ ಹಾಲು: ಗರ್ಭಿಣಿಯರು ರಾತ್ರಿ ಮಲಗುವ ಮೊದಲು ಬೆಚ್ಚಗಿನ ಹಾಲಿಗೆ ಸ್ವಲ್ಪ ಅರಿಶಿನ ಪುಡಿ ಸೇರಿಸಿ ಸೇವನೆ ಮಾಡುವುದು ಮೂಗು ಸೋರುವ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದಕ್ಕೆ ನೀವು ಸ್ವಲ್ಪ ಚಕ್ಕೆ ಪುಡಿಯನ್ನು ಸಹ ಸೇರಿಸಿ ಕುಡಿದರೆ ಉತ್ತಮ.
2/ 8
ಅಜ್ವೈನ್: ಪದೇ ಪದೇ ಶೀತ ಆಗುತ್ತಿದ್ದರೆ ಇದರಿಂದ ಉಸಿರಾಡಲು ಕಷ್ಟವಾಗುತ್ತದೆ. ಗರ್ಭಿಣಿಯರಿಗೆ ಮೊದಲೇ ನಿದ್ದೆಯ ಸಮಸ್ಯೆ ಇರುತ್ತದೆ. ಈ ಶೀತದಿಂದ ಆ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಅದಕ್ಕೆ ಈ ಅಜ್ವೈನ್ ಕಾಳುಗಳನ್ನು ಕುದಿಸಿ, ಆ ನೀರನ್ನು ಕುಡಿಯಿರಿ.
3/ 8
ಉಪ್ಪಿನ ನೀರು: ಗರ್ಭಿಣಿಯರಿಗೆ ಶೀತವಾದರೆ ಅದರ ಜೊತೆ ತಲೆನೋವು ಮತ್ತು ಗಂಟಲು ನೋವು ಸಹ ಬರುತ್ತದೆ. ಅದಕ್ಕೆ ಸ್ವಲ್ಪ ಬೆಚ್ಚಗಿನ ನೀರಿಗೆ ಉಪ್ಪು ಹಾಕಿ ಮಿಶ್ರಣ ಮಾಡಿ. ಆ ನೀರಿನಿಂದ ಗಾರ್ಗಲ್ ಮಾಡಿ. ದಿನಕ್ಕೆ 2 ರಿಂದ 3 ಬಾರಿ ಮಾಡುವುದು ಉತ್ತಮ.
4/ 8
ಜೇನುತುಪ್ಪ: ಜೇನುತುಪ್ಪ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಜೇನುತುಪ್ಪಕ್ಕೆ ಸ್ವಲ್ಪ ಶುಂಠಿ ಪುಡಿ ಸೇರಿಸಿ ಮಿಶ್ರಣ ಮಾಡಿ, ಸೇವಿಸಿ. ಆದರೆ ಅತಿಯಾಗಿ ಸೇವನೆ ಮಾಡುವುದು ದೇಹದ ಉಷ್ಟಾಂಶ ಹೆಚ್ಚು ಮಾಡುತ್ತದೆ.
5/ 8
ಅಗಸೆ ಬೀಜಗಳು: ಅಗಸೆ ಬೀಜವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ, ಅದಕ್ಕೆ ಜೇನುತುಪ್ಪ ಮತ್ತು ನಿಂಬೆರಸ ಸೇರಿಸಿ ಕುಡಿಯಿರಿ. ಇದರಿಂದ ನಿಮಗೆ ಮೂಗು ಕಟ್ಟಿದ್ದರೆ ಬೇಗ ಪರಿಹಾರ ಸಿಗುತ್ತದೆ.
6/ 8
ತುಳಸಿ ಎಲೆ: 5 ರಿಂದ 6 ತುಳಸಿ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಅದನ್ನು ಕುದಿಸಿದ ನೀರಿಗೆ ಹಾಕಿ ಕುಡಿಯಿರಿ. ಇದನ್ನು ಹಾಕಿ ನೀರನ್ನು ಕುದಿಸಬೇಡಿ. ಈ ನೀರಿನಿಂದ ನಿಮ್ಮ ಶೀತಕ್ಕೆ ಬೇಗ ಪರಿಹಾರ ಸಿಗುತ್ತದೆ.
7/ 8
ಆ್ಯಪಲ್ ಸೈಡರ್ ವಿನೆಗರ್: ನೀವು ದಿನಕ್ಕೆ 2 ರಿಂದ 3 ಚಮಚ ಆ್ಯಪಲ್ ಸೈಡರ್ ವಿನೆಗರ್ ಅನ್ನು ನೀರಿಗೆ ಮಿಕ್ಸ್ ಮಾಡಿ ಕುಡಿಯುವುದು ಶೀತ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
8/ 8
ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿರುವ ಅಂಶಗಳು ನಿಮಗೆ ಅಲರ್ಜಿ ಆಗದಂತೆ ತಡೆಯುತ್ತದೆ. 2 ರಿಂದ 3 ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಆಲಿವ್ ಎಣ್ಣೆಯನ್ನು ಸೇರಿಸಿ ರಾತ್ರಿ ಮಲಗುವ ಮುನ್ನ ತಿನ್ನಿ.