Mouth Ulcers Remedy: ಬಾಯಿಹುಣ್ಣಿಗೆ ಇವುಗಳಿಗಿಂತ ಉತ್ತಮ ಮದ್ದು ಬೇರೆ ಇಲ್ಲ
Home Remedies for Mouth Ulcers: ದೇಹದಲ್ಲಿ ಸ್ವಲ್ಪ ವ್ಯತ್ಯಾಸವಾದರೆ ಕೆಲ ಆರೋಗ್ಯ ಸಮಸ್ಯೆಗಳು ಬರುತ್ತದೆ. ಉಷ್ಣಾಂಶ ಹೆಚ್ಚಾದರೆ ಬಾಯಿಹುಣ್ಣು, ಗುಳ್ಳೆಗಳು, ಕಣ್ಣು ಉರಿ ಆಗುತ್ತದೆ. ಈ ಬಾಯಿಹುಣ್ಣು ಆದರೆ ಯಾವುದೇ ಆಹಾರವನ್ನು ತಿನ್ನಲು ಆಗುವುದಿಲ್ಲ. ಸ್ವಲ್ಪ ಮಸಾಲೆ ಇದ್ದರಂತೂ ಉರಿಯುತ್ತದೆ. ಈ ಸಮಸ್ಯೆ ಸಾಮಾನ್ಯ. ಇದಕ್ಕೆ ಪರಿಹಾರ ಸಹ ನಿಮ್ಮ ಮನೆಯಲ್ಲಿರುವ ಸಾಮಾನ್ಯ ವಸ್ತುಗಳು.
ಆ್ಯಪಲ್ ಸೈಡರ್ ವಿನೆಗರ್: ಈ ಬಾಯಿಹುಣ್ಣಿನ ಸಮಸ್ಯೆಗೆ ಆ್ಯಪಲ್ ಸೈಡರ್ ವಿನೆಗರ್ ಪರಿಣಾಮಕಾರಿ ಮನೆಮದ್ದು ಎನ್ನಬಹುದು. ಸ್ವಲ್ ಬೆಚ್ಚಗಿನ ನೀರಿಗೆ ವಿನೆಗರ್ ಮಿಕ್ಸ್ ಮಾಡಿ, ಬಾಯಿಯಲ್ಲಿ ಕೆಲ ನಿಮಿಷಗಳ ಕಾಲ ಇಟ್ಟುಕೊಳ್ಳಿ, ನಂತರ ಬಾಯಿ ಮುಕ್ಕಳಿಸಿ. ಇದನ್ನು ದಿನಕ್ಕೆ 2 ಬಾರಿ ಮಾಡಿದರೆ ಪ್ರಯೋಜನ ಸಿಗುತ್ತದೆ.
2/ 8
ಲವಂಗ: ಲವಂಗ ಬಾಯಿಯ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಬ್ಯಾಕ್ಟೀರಿಯಾಗಳನ್ನು ಸಾಯಿಸುವ ಮೂಲಕ ಬಾಯಿಹುಣ್ಣು ಕಡಿಮೆ ಮಾಡುತ್ತದೆ. ಇದು ಸ್ವಲ್ಪ ಖಾರ ಇದ್ದರೂ ಸಹ ಬಾಯಿಯಲ್ಲಿ ಇಟ್ಟುಕೊಂಡು ಜಗಿಯುವುದು ಸಹಾಯ ಮಾಡುತ್ತದೆ.
3/ 8
ಜೇನುತುಪ್ಪ: ಈ ಜೇನುತುಪ್ಪ ಆರೋಗ್ಯಕ್ಕೆ ಎಷ್ಟು ಉತ್ತಮ ಎಂದು ನಾವು ಪದೇ ಪದೇ ಹೇಳಬೇಕಿಲ್ಲ. ಸಾವಿರಾರು ಸಮಸ್ಯೆಗಳಿಗೆ ಇದು ಮನೆಮದ್ದು. ಬಾಯಿಹುಣ್ಣು ಆಗಿದ್ದರೆ ಹತ್ತಿಯನ್ನು ಜೇನುತುಪ್ಪದಲ್ಲಿ ಅದ್ದಿ, ಹುಣ್ಣಿನ ಮೇಲೆ ಇಟ್ಟುಕೊಳ್ಳಿ. ದಿನಕ್ಕೆ 3 ರಿಂದ 4 ಬಾರಿ ಈ ರೀತಿ ಮಾಡಿದರೆ ಬೇಗ ಹುಣ್ಣು ಮಾಯವಾಗುತ್ತದೆ.
4/ 8
ಚಿಯಾ ಬೀಜ: ಈ ಬಾಯಿಹುಣ್ಣು ದೇಹದ ಉಷ್ಟಾಂಶ ಹೆಚ್ಚಾದರೆ ಸಹ ಉಂಟಾಗುತ್ತದೆ. ಆಗ ತಂಪು ಮಾಡುವುದು ಬಹಳ ಮುಖ್ಯ. ನಿಮಗೆ ಚಿಯಾ ಬೀಜಗಳು ಈ ಸಮಯದಲ್ಲಿ ಸಹಾಯ ಮಾಡುತ್ತದೆ. ಸ್ವಲ್ಪ ಚಿಯಾ ಬೀಜವನ್ನು ನೆನೆಸಿ, ಅದನ್ನು ಸೇವಿಸುವುದು ಉತ್ತಮ.
5/ 8
ಅಲೋವೆರಾ: ಜೇನುತುಪ್ಪದಂತೆ ಅಲೋವೆರಾ ಸಹ ಹಲವಾರು ರೀತಿಯಲ್ಲಿ ನಮಗೆ ಸಹಾಯ ಮಾಡುತ್ತದೆ. ಇದು ಕೂಡ ದೇಹವನ್ನು ತಂಪಾಗಿರಿಸಲು ಸಹಕಾರಿ. ಸ್ವಲ್ಪ ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ಹುಣ್ಣಿನ ಮೇಲೆ ಹಚ್ಚಿ. ದಿನಕ್ಕೆ 5 ರಿಂದ 6 ಬಾರಿ ಇದನ್ನು ಮಾಡಿದರೆ, ಕೇವಲ 2 ದಿನದಲ್ಲಿ ಮಾಯವಾಗುತ್ತದೆ.
6/ 8
ಅರಿಶಿನ: ಅರಿಶಿನವನ್ನು ಆ್ಯಂಟಿ ಬಾಯೋಟಿಕ್ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಅಂಶಗಳು ಬ್ಯಾಕ್ಟೀರಿಯವನ್ನು ಸಾಯಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಹಾಲಿಗೆ ಅರಿಶಿನ ಹಾಕಿ ಕುಡಿಯಿರಿ.
7/ 8
ತುಪ್ಪ: ತುಪ್ಪ ಸಹ ಬಾಯಿಹುಣ್ಣು ಹೋಗಲಾಡಿಸಲು ಬಹಳ ಸಹಕಾರಿ ಎಂದು ಸಾಬೀತಾಗಿದೆ. ಸ್ವಲ್ಪ ತುಪ್ಪವನ್ನು ಕೈನಲ್ಲಿ ತೆಗೆದುಕೊಂಡು, ಅದನ್ನು ಹುಣ್ಣಿನ ಮೇಲೆ ಹಚ್ಚಿ. ಇದು ಬೇಗನ ಪರಿಹಾರ ನೀಡುತ್ತದೆ.
8/ 8
ಉಪ್ಪು: ಉಪ್ಪು ಹೇಗೆ ಬಾಯಿಹುಣ್ಣು ಹೋಗಲಾಡಿಸಲು ಸಹಾಯ ಮಾಡುತ್ತದೆ ಎನ್ನುವ ಗೊಂದಲ ಹಲವಾರು ಜನರಲ್ಲಿದೆ. ಸಾಮಾನ್ಯವಾಗಿ ಉಪ್ಪು ತಾಗಿದರೆ ನೋವು ಹೆಚ್ಚಾಗುತ್ತದೆ. ಆದರೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು ನಿಮಗೆ ಸಹಾಯ ಮಾಡುತ್ತದೆ.