ನಿಮ್ಮ ಹಾಸಿಗೆ ಸುತ್ತಲೂ ತಿಗಣೆ ಮುತ್ತಿಕೊಂಡಿದ್ಯಾ? ನೆಮ್ಮದಿಯಿಂದ ಮಲಗಲು ಕಷ್ಟಪಡುತ್ತಿದ್ದೀರಾ? ಒಂದು ಬಾರಿ ಮನೆಗೆ ತಿಗಣೆ ಸೇರಿಕೊಂಡರೆ ಅವುಗಳನ್ನು ಓಡಿಸುವುದು ಬಹಳ ಕಷ್ಟ. ತಿಗಣೆ ಮಾನವನ ರಕ್ತವನ್ನು ಕುಡಿದು ಬದುಕುವ ಪುಟ್ಟ ಕೀಟ. ಅದರಲ್ಲಿಯೂ ಇವುಗಳು ರಾತ್ರಿ ಹೊತ್ತು ಸಖತ್ ಆ್ಯಕ್ಟಿವ್ ಆಗಿರುತ್ತದೆ. ಸಾಮಾನ್ಯವಾಗಿ ಈ ತಿಗಣೆಗಳು ನಮ್ಮ ಮನೆಗೆ ಬರುವವರ ಸಾಮಾನು, ಬಟ್ಟೆ ಮತ್ತು ಪೀಠೋಪಕರಣಗಳ ಮೂಲಕ ಸುಲಭವಾಗಿ ಮನೆಯಾದ್ಯಂತ ಹರಡಬಹುದು. ತಿಗಣೆ ಕಡಿತದಿಂದ ಅಲರ್ಜಿ ಮತ್ತು ಚರ್ಮದ ದದ್ದುಗಳಂತಹ ಆರೋಗ್ಯ ಸಮಸ್ಯೆಗಳನ್ನು ಉಂಟಾಗುವ ಸಾಧ್ಯತೆಗಳಿದೆ. ತಿಗಣೆ ಕಾಟದಿಂದ ನೀವು ಬೇಸತ್ತಿದ್ದರೆ, ಈ ಕೆಳಗೆ ನೀಡಿರುವ ಕೆಲವು ಸಿಂಪಲ್ ಟಿಪ್ಸ್ ಫಾಲೋ ಮಾಡಿ.