ತುಟಿಗಳ ಮೇಲೆ ಗೆರೆಗಳು ಸಹಜ. ಆದರೆ, ಕೆಲವು ಮಂದಿ ತುಟಿಗಳ ಮೇಲೆ ಅತಿಯಾದ ಗೆರೆ ಅಥವಾ ಸುಕ್ಕುಗಳಿರುತ್ತದೆ. ಹಾಗಾಗಿ ಅವರ ತುಟಿ ವಿಚಿತ್ರವಾಗಿ ಕಾಣಿಸುತ್ತದೆ. ಅದನ್ನು ಮುಚ್ಚಿಡಲು ಕೆಲವೊಮ್ಮೆ ಹೊಸ ಲಿಪ್ಸ್ ಸ್ಟಿಕ್ಗಳನ್ನು ಹಚ್ಚಿಕೊಳ್ಳುತ್ತಾರೆ. ಆದರೆ ಇನ್ನು ಮುಂದೆ ಅವುಗಳನ್ನು ಮರೆಮಾಡಬೇಕಾದ ಅವಶ್ಯಕತೆಯೇ ಇಲ್ಲ. ಏಕೆಂದರೆ ಮನೆಯಲ್ಲಿರುವ ಕೆಲವು ನೈಸರ್ಗಿಕ ಉತ್ಪನ್ನಗಳನ್ನು ಬಳಸುವ ಮೂಲಕ ತುಟಿಗಳ ಮೇಲಿನ ಗೆರೆಗಳು ಮತ್ತು ಸುಕ್ಕುಗಳನ್ನು ತೊಡೆದುಹಾಕಬಹುದು. ಈ ಮೂಲಕ ನಯವಾದ ಮತ್ತು ಮೃದುವಾದ ತುಟಿಗಳನ್ನು ಪಡೆಯಬಹುದು.