ಇತ್ತೀಚೆಗೆ ವಯಸ್ಸಿನ ಭೇದವಿಲ್ಲದೇ ಬಿಳಿ ಕೂದಲು ಸಮಸ್ಯೆ ಹೆಚ್ಚಾಗುತ್ತಿದೆ. ಆರೋಗ್ಯ ಪದ್ಧತಿ, ಜೀವನಶೈಲಿ, ವಿಟಮಿನ್ ಕೊರತೆ ಹೀಗೆ ಹಲವಾರು ಕಾರಣಗಳಿಂದಾಗಿ ಬಿಳಿ ಕೂದಲಿನ ಸಮಸ್ಯೆ ಬರುತ್ತಿದೆ. ಈ ಬಿಳಿ ಕೂದಲನ್ನು ಮರೆಮಾಚಲು ಅನೇಕರು ಡೈ ಮೊರೆ ಹೋಗುತ್ತಾರೆ. ಇದರಲ್ಲಿ ಅನೇಕ ಕೆಮಿಕಲ್ಗಳಿದ್ದು, ನಮ್ಮ ದೇಹಕ್ಕೆ ಹಾನಿಯುಂಟು ಮಾಡಬಹುದು. ಹೀಗಾಗಿ ಮನೆಯಲ್ಲೇ ಇರುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಕಾಫಿ ಪೌಡರ್ ಹೇರ್ ಮಾಸ್ಕ್: ಅರ್ಧ ಕಪ್ ಕಾಫಿ ಪುಡಿ ಜೊತೆಗೆ ಒಂದು ಕಪ್ ಕಂಡೀಷನರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ನಾನ ಮಾಡುವ ಒಂದು ಗಂಟೆ ಮೊದಲು ಈ ಮಿಶ್ರಣವನ್ನು ನಿಮ್ಮ ನೆತ್ತಿಗೆ ಹಚ್ಚಿ ಮತ್ತು ನಿಮ್ಮ ತಲೆಯನ್ನು ಶವರ್ ಕ್ಯಾಪ್ನಿಂದ ಮುಚ್ಚಿ. ಬಳಿಕ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. (Disclaimer: ಈ ಲೇಖನದಲ್ಲಿ ನೀಡಲಾದ ಮಾಹಿತಿ ಮತ್ತು ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. ಇದನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ.)