Winter Health Tips: ಈ ಮನೆಮದ್ದುಗಳಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ, ಕೆಮ್ಮು ಹತ್ತಿರವೂ ಬರಲ್ಲ
Home Remedies For Cold: ಹವಾಮಾನ ಬದಲಾವಣೆ ಉಂಟಾದ ಕಾರಣ, ವೈರಲ್ ಕೆಮ್ಮು ಮತ್ತು ಶೀತಗಳಿಂ ಮಕ್ಕಳು ಬಳಲುತ್ತಿರುವುದು ಸಾಮಾನ್ಯವಾಗಿವೆ. ಇದಕ್ಕೆ ಚಿಕಿತ್ಸೆ ನೀಡಲು ಮತ್ತು ನಿಮ್ಮ ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಾವು ಕೆಲವು ಸೂಪರ್ ಮನೆಮದ್ದುಗಳನ್ನು ಹೇಳಿದ್ದು ನೀವು ಅದನ್ನು ಟ್ರೈ ಮಾಡಬಹುದು.
ಚಳಿಗಾಲದಲ್ಲಿ ಹೆಚ್ಚಾಗಿ ಮಕ್ಕಳು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಶೀತ-ಕೆಮ್ಮು ಸೇರಿದಂತೆ ವಿವಿಧ ಸಮಸ್ಯೆಗಳು ಒಮ್ಮೆ ಬಂದರೆ ಪದೇ ಪದೇ ಬರುತ್ತಿರುತ್ತದೆ. ಅದಕ್ಕೆ ಸೂಕ್ತವಾದ ಮನೆಮದ್ದು ಮಾಡಬೇಕು.
2/ 8
ಚಳಿಗಾಲದಲ್ಲಿ ಜೇನುತುಪ್ಪ ಇದ್ದರೆ ಸಾಕು ಮಕ್ಕಳ ಈ ಸಮಸ್ಯೆಗೆ ಪರಿಹಾರ ನೀಡುತ್ತದೆ. ಕೇವಲ ಒಂದು ಚಮಚ ಜೇನುತುಪ್ಪ ನಿಮ್ಮ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಿ, ಆರೋಗ್ಯ ಸಮಸ್ಯೆ ಕಾಡದಂತೆ ತಡೆಯುತ್ತದೆ.
3/ 8
ಜೇನುತುಪ್ಪ ಜೇನುತುಪ್ಪವನ್ನು ಮಕ್ಕಳಿಗೆ ಕೊಡುವುದು ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. 1 ಲೋಟ ಬೆಚ್ಚಗಿನ ನೀರಿಗೆ 1 ಚಮಚ ಜೇನುತುಪ್ಪವನ್ನು ಸೇರಿಸಿ, ಮಿಕ್ಸ್ ಮಾಡಿ ಮಕ್ಕಳಿಗೆ ದಿನಕ್ಕೆ ಒಮ್ಮೆ ಕುಡಿಸಿ.
4/ 8
ಜೇನುತುಪ್ಪ ಮತ್ತು ನಿಂಬೆ ಜೇನುತುಪ್ಪವನ್ನು ನಿಂಬೆರಸವನ್ನು ಮಿಕ್ಸ್ ಮಾಡಿ ಮಕ್ಕಳಿಗೆ ತಿನ್ನಿಸಿ ಆಮೇಲೆ ಮ್ಯಾಜಿಕ್ ನೋಡಿ. ಒಂದು ಚಮಚ ನಿಂಬೆರಸಕ್ಕೆ 2 ಚಮಚ ಜೇನುತುಪ್ಪ ಸೇರಿಸಿ, ವಾರಕ್ಕೆ ಒಮ್ಮೆ ತಿನ್ನಿಸಿ.
5/ 8
ಜೇನುತುಪ್ಪ ಮತ್ತು ಶುಂಠಿ ಜೇನುತುಪ್ಪದ ಜೊತೆ ನಿಂಬೆಸರ ಮಾತ್ರವಲ್ಲದೇ ಶುಂಠಿಯನ್ನು ಸಹ ಸೇರಿಸಿ ಕೊಡಬಹುದು. ಒಂದು ಲೋಟ ನೀರನ್ನು ಕುದಿಸಿ, ಕುದಿಯುತ್ತಿರುವ ನೀರಿಗೆ ಶುಂಠಿ ಹಾಕಿ. ಇದು ಚೆನ್ನಾಗಿ ಕುದ್ದ ನಂತರ ಅದಕ್ಕೆ ಜೇನುತುಪ್ಪ ಹಾಕಿ ಕುಡಿಸಿ.
6/ 8
ಜೇನುತುಪ್ಪ ಮತ್ತು ತುಳಸಿ ಜೇನುತುಪ್ಪದ ಪ್ರಯೋಜನಗಳಂತೆಯೇ ಈ ತುಳಸಿಯ ಪ್ರಯೋಜನವನ್ನು ಸಹ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. 4 ರಿಂದ 5 ತುಳಸಿ ಎಲೆಗಳನ್ನು ತೆಗೆದುಕೊಂಡು ಅದರಿಂದ ರಸವನ್ನು ಹಿಂಡಿ ಇಟ್ಟುಕೊಳ್ಳಿ. ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಮಕ್ಕಳಿಗೆ ಕೊಡಿ.
7/ 8
ಜೇನುತುಪ್ಪ ಮತ್ತು ಬೆಳ್ಳುಳ್ಳಿ ಬೆಳ್ಳುಳ್ಳಿ ಚಳಿಗಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಎಂದು ಹಿರಿಯರು ಹೇಳುತ್ತಾರೆ. ಬೆಳ್ಳುಳ್ಳಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ, ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಮಕ್ಕಳಿಗೆ 2 ದಿನಕ್ಕೆ ಒಮ್ಮೆ ತಿನ್ನಿಸಿ.
8/ 8
ಜೇನುತುಪ್ಪ ಮತ್ತು ಬೆಳ್ಳುಳ್ಳಿ ಈ ಮನೆಮದ್ದುಗಳನ್ನು ನೀಡುವುದು ಮುಖ್ಯವಾಗಿದ್ದರೂ ಸಹ ಈ ಸಮಸ್ಯೆ ಹೆಚ್ಚಾಗುತ್ತಿದೆ ಅನಿಸಿದರೆ ನೀವು ವೈದ್ಯರನ್ನು ಭೇಟಿ ಮಾಡಬೇಕು. 2 ವಾರಕ್ಕಿಂತ ಹೆಚ್ಚಿನ ಕಾಲ ಈ ಜ್ವರ ಕೆಮ್ಮು ಇದ್ದರೆ ನೆಗ್ಲೆಕ್ಟ್ ಮಾಡಬೇಡಿ.